VISL ನಂತೆ ಮತ್ತೆ ಆರಂಭಗೊಳ್ಳುತ್ತಾ ಎಂಪಿಎಂ? ನಿರೀಕ್ಷೆ ಮೂಡಲು ಕಾರಣವೇನು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ VISL  ಕಾರ್ಖಾನೆ ಹಾಗೂ ಹೀಗಿ ಪುನರಾರಂಭ ಕಂಡಂತೆ ಮತ್ತೊಂದು ಪ್ರತಿಷ್ಟಿತ ಕಾರ್ಖಾನೆ ಎಂಪಿಎಂ ಮತ್ತೆ ಆರಂಭಗೊಳ್ಳುತ್ತಾ? ಹೀಗೊಂದು ನಿರೀಕ್ಷೆಯ ಪ್ರಶ್ನೆ ಇದೀಗ ಮೂಡಿದೆ.  

ಸುಮಾರು 8 ವರ್ಷಗಳಿಂದ ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ  ಸಂಬಂಧ  ಸೆ.6ರಂದು ಬೆಳಿಗ್ಗೆ 11.30ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿ ಕುರಿತಂತೆ ಚರ್ಚಿಸಲು ಐ.ಕೆ.ಎಫ್ ಸಭಾಂಗಣ, ಖನಿಜ ಭವನ, ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ.

ಕಾರ್ಖಾನೆಯಲ್ಲಿ 2015ರಿಂದ ಯಂತ್ರಗಳು ಸ್ಥಗಿತಗೊಂಡಿದೆ. ಇಲ್ಲಿನ ಹಲವು ಕಾರ್ಮಿಕರಿಗೆ ವಿಆರ್​ಎಸ್ ನೀಡಲಾಗಿದೆ. ಉಳಿದವರನ್ನ ಸರ್ಕಾರದ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆ ಮಾಡಲಾಗಿದೆ. ಈ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಘೋಷಣೆಗಳು ಜನಪ್ರತಿನಿಧಿಗಳಿಂದ ಕೇಳಿಬಂದಿದ್ದವು. ಮಾಜಿ ಸಿಎಂ ಬಿಎಸ್​ ಕಾರ್ಖಾನೆಯನ್ನು ಉಳಿಸುವ ಭರವಸೆ ನೀಡಿದ್ದರು. ಇನ್ನೂ ಕಾಂಗ್ರೆಸ್ ಸರ್ಕಾರ  ಪ್ರಚಾರ ವೇಳೆ ಎಂಪಿಎಂ ಉಳಿಸುವ ಭರವಸೆ ನೀಡಿತ್ತು. ಇದರ ಬೆನ್ನಲ್ಲೆ ಇದೀಗ ಸಭೆ ಕರೆಯಲಾಗಿದ್ದು, ಸಭೆಯಲ್ಲಿನ ಮಾತುಕತೆಗಳು ನಿರೀಕ್ಷೆ ಮೂಡಿಸಿದೆ.  

 


ಇನ್ನಷ್ಟು ಸುದ್ದಿಗಳು 


 

 

Share This Article