SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್​ಗೆ 500 ರೂಪಾಯಿ ಸಬ್ಸಿಡಿ!

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರಯಾಣಿಸಲು  ಪ್ರತಿ ಟಿಕೆಟ್ ಗೆ 500 ರೂ.ಗಳ ಸಬ್ಸಿಡಿ ನೀಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಘೋಷಿಸಿದ್ದಾರೆ.

ವಾಣಿಜ್ಯ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga airport.)ಪ್ರಯಾಣಿಸುವ ಪ್ರಯಾಣಿಕರು ಖರೀದಿಸುವ ಆನ್ ಸೈಟ್ ಟಿಕೆಟ್ ಗೆ 500 ರೂ.ಗಳ ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಾಮಾನ್ಯ ನಾಗರಿಕರಿಗೆ ವಿಮಾನ ಪ್ರಯಾಣಕ್ಕೆ ಅನುಕೂಲವಾಗುವಂತೆ, ಶಿವಮೊಗ್ಗ ವಿಮಾನ ನಿಲ್ದಾಣವು ಸ್ಥಳದಲ್ಲೇ ವಿಮಾನ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಒದಗಿಸಲಾಗಿದದು,  ಇಲ್ಲಿ ಖರೀದಿಸುವ ಪ್ರತಿ ಟಿಕೆಟ್ಗೆ 500 ರೂ.ಗಳ ಸಬ್ಸಿಡಿಯನ್ನು ಒಂದು ವರ್ಷದವರೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. 

 

ಶಿವಮೊಗ್ಗಕ್ಕೆ ವಿಮಾನ ಸೇವೆಯು ಈ ಪ್ರದೇಶದ ಕೈಗಾರಿಕಾ, ಆರ್ಥಿಕ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಬೆಳವಣಿಗೆಗೆ ವೇಗವರ್ದಕವಾಗಿ ಕೆಲಸ ಮಾಡಲಿದೆ ಎಂದ ಸಚಿವರು, ದೆಹಲಿ, ಚೆನ್ನೈ, ಗೋವಾ, ಹೈದರಾಬಾದ್ ಮತ್ತು ತಿರುಪತಿಯಂತಹ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆಗಳನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಇನ್ನಷ್ಟು ಗಮನ ಹರಿಸಲಿದೆ ಎಂದರು,  


ಇನ್ನಷ್ಟು ಸುದ್ದಿಗಳು 


 

 

Leave a Comment