ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ! ಸಚಿವ ಮಧು ಬಂಗಾರಪ್ಪ ಪೂಜೆ ! ಹೇಗೆ ಸಾಗುತ್ತಿದೆ ಮೆರವಣಿಗೆ ! ದೃಶ್ಯ ನೋಡಿ

Malenadu Today

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪ್ರಮುಖ ಗಣಪತಿಯಾದ ಹಿಂದೂ ಮಹಾಸಭಾ ಗಣಪತಿಯ ಅದ್ದೂರಿ ರಾಜಬೀದಿ ಉತ್ಸವ ಆರಂಭವಾಗಿದೆ. ವಾದ್ಯಮೇಳದೊಂದಿಗೆ ಜೈಕಾರದ ಸಮೇತ ವಿನಾಯಕ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಸ್ಥಳದಿಂದ ಅಲಂಕೃತವಾಹನದಲ್ಲಿ ತಂದು ಕೂರಿಸಲಾಯ್ತು. ಬಳಿಕ  ಗಣೇಶನ ರಾಜಬೀದಿ ಉತ್ಸವವು ಆರಂಭವಾಗಿದೆ. 

Malenadu Today

ಇದಕ್ಕೂ ಮೊದಲು ಸಚಿವ ಮಧು ಬಂಗಾರಪ್ಪ , ಶಿವಮೊಗ್ಗ ನಗರ ಶಾಸಕ ಎಸ್​ಎನ್​ ಚನ್ನಬಸಪ್ಪ , ಆರ್​ ಎಂ ಮಂಜುನಾಥ್ ಗೌಡ ಸೇರಿದಂತೆ ವಿವಿಧ ಮುಖಂಡರು ವಿನಾಯಕನಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸಂಘಟನೆಯ ವತಿಯಿಂದ ಹಾರ ಹಾಕಿ ಗೌರವ ಸಲ್ಲಿಸಲಾಯ್ತು. 

Malenadu Today

ಮಂಟಪದಿಂದ ಹೊರಟ ಮೆರವಣಿಗೆ ಶಿವಾಜಿ ವೃತ್ತದ ಮೂಲಕ ರಂಗಪ್ಪ ವೃತ್ತದ ಮಾರ್ಗವಾಗಿ ಸಾಗುತ್ತಿದೆ. ವಿನಾಯಕನ ಮೆರವಣಿಗೆ ವೇಳೇ  ಭಕ್ತರು ಹೂವು-ಹಣ್ಣು ಹಾಗು ಹಣದ ಹಾರ ಸಲ್ಲಿಸುತ್ತಿದ್ದಾರೆ. ಇನ್ನೂ ರಾಜಬೀದಿ ಉತ್ಸವದಲ್ಲಿ ನೆರೆದ ಭಕ್ತಾದಿಗಳಿಗಾಗಿ ವಿವಿದೆಡೆ  ತಂಪುಪಾನೀಯ , ಉಪಹಾರ ವಿತರಣೆ ಹಾಗು ಅನ್ನ‌ಸಂತರ್ಪಣೆ ಮಾಡಲಾಗ್ತಿದೆ . 

Malenadu Today

ಮೆರವಣಿಗೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಸದಸ್ಯರಾದ ಬಿ.ಕೆ.ಮೋಹನ್, ಮಣಿ, ಕದಿರೇಶ್ ಮುಖಂಡರಾದ ಆರ್.ಕರುಣಾಮೂರ್ತಿ, ಎಸ್.ಕುಮಾರ್, ಮಂಗೋಟೆ ರುದ್ರೇಶ್,ಮಂಜುನಾಥ್ ಸೇರಿದಂತೆ ಹಲವು‌ ಪ್ರಮುಖರು ಪಾಲ್ಗೊಂಡಿದ್ದಾರೆ. 

Malenadu Today

  

ಇನ್ನೂ  ಪೊಲೀಸ್ ಇಲಾಖೆಯಿಂದ ಬಿಗಿಬಂದೋಬಸ್ತ್ ಆಯೋಜಿಸಲಾಗಿದ್ದು, ಹೆಚ್ಚುವರಿ ರಕ್ಷಣಾಧಿಕಾರಿ-1, ಡಿ.ವೈ.ಎಸ್.ಪಿ-10, ವೃತ್ತ ನಿರೀಕ್ಷಕರು-20, ಪೊಲೀಸ್ ನಿರೀಕ್ಷರು-50, ಸಹಾಯಕ ಪೊಲೀಸ್ ನಿರೀಕ್ಷಕರು-85, ಆರಕ್ಷಕ ಸಿಬ್ಬಂದಿಗಳು-500, ಗೃಹ ರಕ್ಷಕ ದಳ-250, ಕ್ಷಿಪ್ರ ಕಾರ್ಯಪಡೆ ತುಕಡಿ-1, ಸಶಸ್ತ್ರ ಮೀಸಲು ಪಡೆ ತುಕಡಿ-6 ಮತ್ತು ಸಂಚಾರಿ ಪೊಲೀಸ್ ದಳ-1 ಬಂದೋಬಸ್ತ್ ನಲ್ಲಿ  ತೊಡಗಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

Share This Article