ಶಿವಮೊಗ್ಗ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ರೌಡಿ ಶೀಟರ್ ಯಾಸಿನ್ ಖುರೇಷಿ ಸಾವು

ಶಿವಮೊಗ್ಗದಲ್ಲಿ ನೆನ್ನೆ ಸಂಜೆ ಲಷ್ಕರ್ ಮೊಹಲ್ಲದದ ಮೀನುಮಾರುಕಟ್ಟೆಯ ಬಳಿ ನಡೆದ ಆದಿಲ್ ಮತ್ತು ಯಾಸಿನ್ ಖುರೇಷಿ ನಡುವಿನ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಕೊಲೆಯಾಗಿದ್ದರು. ಘಟನೆ ಸಂದರ್ಭದಲ್ಲಿ ಆದಿಲ್ ಹಾಗು ಸಹಚರರು ಯಾಸಿನ್ ಖುರೇಷಿಗೆ ಮಾರಣಾಂತಿಕವಾಗಿ ಎದೆಗೆ ಹಾಗು ಹೊಟ್ಟೆಗೆ ಚಾಕು ತಿವಿದಿದ್ದರಿಂದ ಯಾಸಿನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ.

ತದ ನಂತರದಲ್ಲಿ ರೊಚ್ಚಿಗೆದ್ದ ಯಾಸಿನ್ ಕಡೆಯ ಹುಡುಗರು ಆದಿಲ್ ಸಹಚರರ ಮೇಲೆ ಮಚ್ಚು ಬೀಸಿ ಕಲ್ಲು ಎತ್ತೆಹಾಕಿ ಇಬ್ಬರನ್ನು ಕೊಲೆಗೈದಿದ್ದರು. ನಂತರದಲ್ಲಿ ಸ್ಥಳದಲ್ಲಿ ಕುಸಿದುಬಿದ್ದ ಯಾಸಿನ್ ಖುರೇಷಿಯನ್ನು ಎನ್.ಹೆಚ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಯಾಸಿನ್ ಸಾವನ್ನಪ್ಪಿದ್ದಾನೆ. ನೆನ್ನೆಯ ಮಾರಾಮಾರಿ ಪ್ರಕರಣದಲ್ಲಿ ಒಟ್ಟು ಮೂವರು ಸಾವನ್ನಪ್ಪಿದಂತಾಗಿದೆ. ತಲೆಮೆರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.