ಮಳೆ ಮುಂದುವರಿದರೇ ಓಕೆ! ಇಲ್ಲವಾದರೆ ನಾಲ್ಕು ದಿನಗಳಲ್ಲಿ ಸಿಗಂದೂರು ಲಾಂಚ್​ ಬಂದ್!

Okay if the rain continues! Otherwise siganduru launch will be closed in four days!

ಮಳೆ ಮುಂದುವರಿದರೇ ಓಕೆ! ಇಲ್ಲವಾದರೆ ನಾಲ್ಕು ದಿನಗಳಲ್ಲಿ ಸಿಗಂದೂರು ಲಾಂಚ್​ ಬಂದ್!

KARNATAKA NEWS/ ONLINE / Malenadu today/ Jun 29, 2023 SHIVAMOGGA NEWS

ಸಾಗರ / ಈಗಾಗಲೇ ವಾಹನಗಳ ಸಾಗಾಟವನ್ನು ನಿಲ್ಲಿಸಿರುವ ಸಿಗಂದೂರು ಲಾಂಚ್​ ನಲ್ಲಿ ಜನ ಸಾಗಾಟವನ್ನು ನಿಲ್ಲಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ನಾಲ್ಕು ದಿನಗಳಲ್ಲಿ ಲಾಂಚ್​ ಸಂಚಾರವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.. ಇವತ್ತು ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ. ಇದೇ ರೀತಿ ಮಳೆಯಾದರೆ, ಲಾಂಚ್​ ಸ್ಥಗಿತವಾಗುವ ಸಂದರ್ಭ ಬರುವುದಿಲ್ಲ. 

ಶರಾವತಿ ಕಣಿವೆಯಯಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಸಿಗಂದೂರು ಲಾಂಚ್​ನ್ನ ಸ್ಥಗಿತಗೊಳಿಸಿದರೆ,  ಸಿಗಂದೂರನ್ನು ಕ್ರಮಿಸಲು ಜನ 80 ಕಿಮೀ ಸುತ್ತುವರಿದು ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ  ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣರವರು ಅವಶ್ಯ ಬಿದ್ದಲ್ಲಿ ವಿಶೇಷ ಬಸ್ಸಿನ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. 

ಶರಾವತಿ ವಿದ್ಯುದಾಗಾರದಲ್ಲಿ ಇನ್ನು 12 ದಿನ ವಿದ್ಯುತ್‌ ಉತ್ಪಾದನೆ ಮಾಡುವಷ್ಟು ನೀರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಲ್ಲರೂ ದೇವರ ಮೊರೆ ಹೋಗೋಣ, ಇಂದಿನಿಂದ ಸ್ವಲ್ಪ ಮಳೆಯ ವಾತಾವರಣ ಕಾಣಿಸುತ್ತಿದ್ದು, ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 


ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ನೀಡಿದ್ರು ಬ್ರೇಕಿಂಗ್ ನ್ಯೂಸ್! ನಾಲ್ಕು ರೂಟ್​ಗೆ ಕೇಂದ್ರದ ಅಸ್ತು! ಡಿಟೇಲ್ಸ್ ಇಲ್ಲಿದೆ !

ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೊಂದು ಬ್ರೇಕಿಂಗ್ ನ್ಯೂಸ್​ ಕೊಟ್ಟಿದ್ದಾರೆ. ನಿರೀಕ್ಷೆಯಂತೆಯೇ ಆಗಸ್ಟ್​ 11 ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರ (shivamogga bangalore flight) ಸಂಚಾರ ಆರಂಭವಾಗಲಿದೆ. ಈ ಸಂಬಂಧ ಸುದ್ದಿಗೋಷ್ಟಿ ಕರೆದ ಅವರು, ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಉಡಾನ್ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದೆ ವಿಚಾರಕ್ಕೆ 2022 ರ ಫೆಬ್ರವರಿಯಲ್ಲಿ ಕೇಂದ್ರ ವಿಮಾನಯಾನ ನಾಗರಿಕ ಸಚಿವರನ್ನ ಭೇಟಿ ಮಾಡಿ 11 ರೂಟ್​ಗಳನ್ನು ಉಡಾನ್​ ಯೋಜನೆಯಡಿಯಲ್ಲಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಪ್ರತಿಯಾಗಿ ಆರ್​ಸಿಎಸ್​ ಸ್ಕೀಮ್​ ನಡಿಯಲ್ಲಿ ಕೇಂದ್ರ ಸರ್ಕಾರ, ನಾಲ್ಕು ರೂಟ್​ಗಳನ್ನು ಉಡಾನ್​ ಯೋಜನೆಯಡಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಹೊಸ ಮಾರ್ಗಗಳು ಯಾವುದು?

ಮಾರ್ಗ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್

ಮಾರ್ಗ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್

ಮಾರ್ಗ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್

ಮಾರ್ಗ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು



ಇನ್ನೂ ಈ ಹಿಂದೆ ಇದ್ದ ಗರಿಷ್ಟ 600 ಕಿಲೊಮೀಟರ್​ಗಳ ವ್ಯಾಪ್ತಿಯನ್ನು ತೆಗೆದುಹಾಕಲಾಗಿದ್ದು, ಏರ್​ಪೋರ್ಟ್​ ಲ್ಯಾಂಡಿಂಗ್ ಹಾಗೂ ಇಂಧನ ರಿಯಾಯಿತಿ ಹಾಗು ಶೇಕಡಾ 50 ರಷ್ಟು ಸೀಟುಗಳ ವಿಚಾರದಲ್ಲಿ ನಷ್ಟ ಪರಿಹಾರವನ್ನು ಕೇಂದ್ರ ಹಾಗು ರಾಜ್ಯ ಸರ್ಕಾರ ಉಡಾನ್​ ಯೋಜನೆಯಡಿಯಲ್ಲಿ ನೀಡಲಿದೆ ಎಂದು ತಿಳಿಸಿದ್ದಾರೆ. 

ಶಿವಮೊಗ್ಗ ವಿಮಾನ ನಿಲ್ದಾಣ ಈಗಾಗಲೇ ಕಾಂಕ್ರಿಟ್​  ಮ್ಯೂಸಿಯ್  ಆಗಿದೆ ಎಂಬ ಮಾತುಗಳು ಜನ ಸಾಮಾನ್ಯರಲ್ಲಿ ಕೇಳಿಬರುತ್ತಿತ್ತು. ಅಂತಹದ್ದೊಂದು ಸಣ್ಣ ಅಸಮಾಧಾನ ಬಂದ ಬೆನ್ನಲ್ಲೆ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳನ್ನು ಆಹ್ವಾನಿಸಿರುವುದು ಸಂತೋಷದ ವಿಚಾರ ಎಂದು ರಾಘವೇಂದ್ರರವರು ತಿಳಿಸಿದ್ದಾರೆ. ಬಹುತೇಕ ಆಗಸ್ಟ್​ ಅಂತ್ಯದಲ್ಲಿ ಈ ಸಂಬಂಧ ಪ್ರಕ್ರಿಯೆಗಳು ಯಾವೆಲ್ಲಾ ಕಂಪನಿಗಳು ವಿಮಾನ ಸಂಚಾರ ನಡೆಸಲು ಮುಂದಕ್ಕೆ ಬರುತ್ತವೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲದೆ ಈ ಸಂಬಂಧ ವಿವಿಧ ಕಂಪನಿಗಳ ಮನವೊಲಿಸುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಯಾವುದೇ ಸರ್ಕಾರವು ವಿಮಾನ ಸಂಚಾರದ ಮೂಲಕ ಲಾಭ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದರೆ ವಿಮಾನಗಳ ಸಂಚಾರದಿಂದ ಆಯಾ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿಗಳಿಗೆ ನೆರವಾಗುತ್ತದೆ ಆ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ತಿಳಿಸಿದ್ದಾರೆ.