ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ನೀಡಿದ್ರು ಬ್ರೇಕಿಂಗ್ ನ್ಯೂಸ್! ನಾಲ್ಕು ರೂಟ್​ಗೆ ಕೇಂದ್ರದ ಅಸ್ತು! ಡಿಟೇಲ್ಸ್ ಇಲ್ಲಿದೆ !

Shimoga: B.Y. Raghavendra, MP, gave breaking news on Shimoga airport issue Here are the details of centre's permission for four routes!

KARNATAKA NEWS/ ONLINE / Malenadu today/ Jun 29, 2023 SHIVAMOGGA NEWS

ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೊಂದು ಬ್ರೇಕಿಂಗ್ ನ್ಯೂಸ್​ ಕೊಟ್ಟಿದ್ದಾರೆ. ನಿರೀಕ್ಷೆಯಂತೆಯೇ ಆಗಸ್ಟ್​ 11 ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರ (shivamogga bangalore flight) ಸಂಚಾರ ಆರಂಭವಾಗಲಿದೆ. ಈ ಸಂಬಂಧ ಸುದ್ದಿಗೋಷ್ಟಿ ಕರೆದ ಅವರು, ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಉಡಾನ್ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದೆ ವಿಚಾರಕ್ಕೆ 2022 ರ ಫೆಬ್ರವರಿಯಲ್ಲಿ ಕೇಂದ್ರ ವಿಮಾನಯಾನ ನಾಗರಿಕ ಸಚಿವರನ್ನ ಭೇಟಿ ಮಾಡಿ 11 ರೂಟ್​ಗಳನ್ನು ಉಡಾನ್​ ಯೋಜನೆಯಡಿಯಲ್ಲಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಪ್ರತಿಯಾಗಿ ಆರ್​ಸಿಎಸ್​ ಸ್ಕೀಮ್​ ನಡಿಯಲ್ಲಿ ಕೇಂದ್ರ ಸರ್ಕಾರ, ನಾಲ್ಕು ರೂಟ್​ಗಳನ್ನು ಉಡಾನ್​ ಯೋಜನೆಯಡಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಹೊಸ ಮಾರ್ಗಗಳು ಯಾವುದು?

ಮಾರ್ಗ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್

ಮಾರ್ಗ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್

ಮಾರ್ಗ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್

ಮಾರ್ಗ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು



ಇನ್ನೂ ಈ ಹಿಂದೆ ಇದ್ದ ಗರಿಷ್ಟ 600 ಕಿಲೊಮೀಟರ್​ಗಳ ವ್ಯಾಪ್ತಿಯನ್ನು ತೆಗೆದುಹಾಕಲಾಗಿದ್ದು, ಏರ್​ಪೋರ್ಟ್​ ಲ್ಯಾಂಡಿಂಗ್ ಹಾಗೂ ಇಂಧನ ರಿಯಾಯಿತಿ ಹಾಗು ಶೇಕಡಾ 50 ರಷ್ಟು ಸೀಟುಗಳ ವಿಚಾರದಲ್ಲಿ ನಷ್ಟ ಪರಿಹಾರವನ್ನು ಕೇಂದ್ರ ಹಾಗು ರಾಜ್ಯ ಸರ್ಕಾರ ಉಡಾನ್​ ಯೋಜನೆಯಡಿಯಲ್ಲಿ ನೀಡಲಿದೆ ಎಂದು ತಿಳಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಈಗಾಗಲೇ ಕಾಂಕ್ರಿಟ್​  ಮ್ಯೂಸಿಯ್  ಆಗಿದೆ ಎಂಬ ಮಾತುಗಳು ಜನ ಸಾಮಾನ್ಯರಲ್ಲಿ ಕೇಳಿಬರುತ್ತಿತ್ತು. ಅಂತಹದ್ದೊಂದು ಸಣ್ಣ ಅಸಮಾಧಾನ ಬಂದ ಬೆನ್ನಲ್ಲೆ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳನ್ನು ಆಹ್ವಾನಿಸಿರುವುದು ಸಂತೋಷದ ವಿಚಾರ ಎಂದು ರಾಘವೇಂದ್ರರವರು ತಿಳಿಸಿದ್ದಾರೆ. ಬಹುತೇಕ ಆಗಸ್ಟ್​ ಅಂತ್ಯದಲ್ಲಿ ಈ ಸಂಬಂಧ ಪ್ರಕ್ರಿಯೆಗಳು ಯಾವೆಲ್ಲಾ ಕಂಪನಿಗಳು ವಿಮಾನ ಸಂಚಾರ ನಡೆಸಲು ಮುಂದಕ್ಕೆ ಬರುತ್ತವೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲದೆ ಈ ಸಂಬಂಧ ವಿವಿಧ ಕಂಪನಿಗಳ ಮನವೊಲಿಸುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 


ಬಕ್ರೀದ್ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆ!

ಶಿವಮೊಗ್ಗ / ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ದ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದಲ್ಲಿ ಮುಸ್ಲಿಮ್ ಸಮುದಾಯದವರು ಸಾಮೂಹಿಕ ನಮಾಜ್ ಮಾಡಿದರು. ಈ ವೇಳೆ ಮುಸ್ಲಿಮ್​ ಧರ್ಮಗುರುಗಳು ದೇವರ ಸಂದೇಶ ಸಾರಿದರು, ಇನ್ನೂ ನೂರಾರು ಮುಸ್ಲಿಮರು ಹಬ್ಬದ ಪ್ರಾರ್ಥನೆ ಮುಗಿಸಿ, ಪರಸ್ಪರ ಅಪ್ಪುಗೆಯೊಂದಿಗೆ ಶುಭಾಶಯಗಳನ್ನು ಹಂಚಿಕೊಂಡರು. ಇನ್ನೂ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತುಮುತ್ತ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಮುಸ್ಲಿಮ್​ ಮುಖಂಡರು ಸೇರಿದಂತೆ ವಿವಿಧ ಮುಖಂಡರು ಹಬ್ಬದ ಹಿನ್ನೆಲೆಯಲ್ಲಿ   ಶುಭಾಶಯಗಳನ್ನು ಕೋರಿದ್ದಾರೆ. 


10 ಸಾವಿರಕ್ಕೆ ಬಂತು 16 ಸಾವಿರ ಲಾಭ! ನಂಬಿದ್ದಕ್ಕೆ ಮಹಿಳೆ ಕಳೆದುಕೊಂಡಿದ್ದು ₹11 ಲಕ್ಷ !

ಶಿವಮೊಗ್ಗ / ಆನ್​ಲೈನ್​ ವಹಿವಾಟು ನಂಬಿಕೆಗೆ ಅರ್ಹವಲ್ಲ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದೆ. ಇದಕ್ಕೆ ಸಾಕ್ಷಿಯಾಗಿ ತೀರ್ಥಹಳ್ಳಿಯ ಮಹಿಳೆಯೊಬ್ಬರು ವರ್ಕ್​ ಫ್ರಾಮ್​ ಹೋಮ್​ (work from home scam) ಹುಡುಕಾಟದಲ್ಲಿ, ಟೆಲಿಗ್ರಾಂ (Telegram Web) ನಲ್ಲಿ ಬಂದಿದ್ದ ಜಾಹಿರಾತನ್ನು ನಂಬಿ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ಧಾರೆ. ತೀರ್ಥಹಳ್ಳಿ ಮೂಲದ ಮಹಿಳೆಯೊಬ್ಬರು ಈ ಸಂಬಂಧ ಶಿವಮೊಗ್ಗ ಸಿಇಎನ್​ ಪೊಲೀಸ್ ಸ್ಟೇಷನ್ (shivamogga cen police station) ಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಐಪಿಸಿ IPC 1860 (U/s-419,420) ಅಡಿಯಲ್ಲಿ ಕೇಸ್ ದಾಖಲಾಗಿದೆ. 

ಶಿವಮೊಗ್ಗ ನಗರದ ಈ ಹೈಟೆಕ್​ ಸ್ಟ್ರೀಟ್ ಎಲ್ಲಿದೆ ಗೊತ್ತಾ? ಇಲ್ಲಿದೆ ವಾಕಿಂಗ್​ , ಸ್ಲೈಕಿಂಗ್, ಬೋಟಿಂಗ್ ಸೌಲಭ್ಯ!

ನಡೆದಿದ್ಧೇನು?

ದೂರುದಾರ ಗೃಹಿಣಿ ವರ್ಕ್​ ಫ್ರಾಮ್ ಹೋಮ್ ಆಫರ್​ ಇರುವ ಕೆಲಸವನ್ನು ಹುಡುಕುತ್ತಿದ್ದರು. ಈ ವೇಳೆ ಅವರಿಗೆ ಟೆಲಿಗ್ರಾಂ ಆ್ಯಪ್​ನಲ್ಲಿ  I-GLOBAL ಕಂಪನಿಯ ಹೆಸರಿನಲ್ಲಿ,  ಪಾರ್ಟ್ ಟೈ ಜಾಬ್ ನಲ್ಲಿ ಹಣ ಹೂಡಿಕೆಯ ಜಾಹಿರಾತು ಕಂಡಿದೆ. ಅದನ್ನ ಮೊದಲು ಅವರು ಪರೀಕ್ಷೆ ಮಾಡಿದ್ದಾರೆ. ಮೊದಲ ಸಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ 16 ಸಾವಿರ ರೂಪಾಯಿ ಹಣವಾಪಸ್ ಬಂದಿದೆ. ಇದನ್ನ ನಂಬಿದ ಅವರು ಮತ್ತೊಮ್ಮೆ ಇನ್​ವೆಸ್ಟ್ ಮಾಡಿದ್ದಾರೆ. ಈ ವೇಳೆ ಕಂಪನಿ ವಿವಿಧ ಅಕೌಂಟ್​ಗಳಿಗೆ ಒಟ್ಟು 11 ಲಕ್ಷಕ್ಕೂ ಅಧಿಕ ಹಣವನ್ನು ಹಾಕಿಸಿಕೊಂಡಿದೆ. ಆದರೆ ಲಾಭಾಂಶವನ್ನು ವಾಪಸ್ ನೀಡಲಿಲ್ಲ. ಇದರ ಬೆನ್ನಲ್ಲೆ ಮಹಿಳೆಗೆ ತಾನು ಮೋಸಹೋಗಿರುವುದು ಗೊತ್ತಾಗಿ ಸಿಇಎನ್​ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. 

 

shivamogga airport address, shivamogga airport code, shivamogga airport name, shimoga airport flight schedule, shivamogga airport opening, shivamogga airport new name, shivamogga airport photos, shivamogga airport flights,  ಶಿವಮೊಗ್ಗ ವಿಮಾನ ನಿಲ್ಧಾಣದ ಹಬ್ಬ, ಪ್ರಧಾನಿ ನರೆಂದ್ರ ಮೋದಿ, ಶಿವಮೊಗ್ಗ ಏರ್​ಫೋರ್ಟ್ ಸುದ್ದಿ, ಫಸ್ಟ್ ನ್ಯೂಸ್ ಏರ್​ಫೋರ್ಟ್, ಫ್ಳೈ ಶಿವಮೊಗ್ಗ, Shimoga Airport Festival, PM Narendra Modi, Shimoga Airport News, First News Airport, Fly Shimoga, shivamogga news,shivamogga news paper,vijayavani news paper today shivamogga,shivamogga news kannada,shivamogga news paper today,shivamogga smart city news, shivamogga crime story news,namma shivamogga news paper,shivamogga news,shivamogga,shimoga news,shivamogga karnataka,shimoga news kannada,shimoga live news, shimoga local newspaper,shimoga news live,shimoga news today,shimoga one,shimoga airport recruitment,shimoga airport jobs,shivamogga airport jobs,shimoga rowdies,shimoga train timings,tv9 kannada headlines,esi hospital shimoga,jobs in bhadravati city,bangalore