ಶಿವಮೊಗ್ಗ ನಗರದ ಈ ಹೈಟೆಕ್​ ಸ್ಟ್ರೀಟ್ ಎಲ್ಲಿದೆ ಗೊತ್ತಾ? ಇಲ್ಲಿದೆ ವಾಕಿಂಗ್​ , ಸ್ಲೈಕಿಂಗ್, ಬೋಟಿಂಗ್ ಸೌಲಭ್ಯ!

Do you know where this hi-tech street in Shivamogga city is located? Here's walking, slyking, boating facility!

ಶಿವಮೊಗ್ಗ  ನಗರದ ಈ  ಹೈಟೆಕ್​ ಸ್ಟ್ರೀಟ್ ಎಲ್ಲಿದೆ ಗೊತ್ತಾ?  ಇಲ್ಲಿದೆ ವಾಕಿಂಗ್​ , ಸ್ಲೈಕಿಂಗ್, ಬೋಟಿಂಗ್ ಸೌಲಭ್ಯ!

KARNATAKA NEWS/ ONLINE / Malenadu today/ Jun 29, 2023 SHIVAMOGGA NEWS

ಶಿವಮೊಗ್ಗ ನಗರದ ತುಂಗಾ ನದಿ ತೀರದಲ್ಲಿ ಹೆರಿಟೇಜ್ ರೋಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಕನಸಾಗಿತ್ತು. ಇದೀಗ ಈ ಕನಸು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪೂರ್ಣಗೊಳ್ಳುತ್ತಿದೆ. 

ತುಂಗಾನದಿಯ ಬೆಕ್ಕಿನಕಲ್ಮಠದಿಂದ ಹಿಡಿದು ಬೈಪಾಸ್ ರಸ್ತೆಯವರೆಗೂ ನದಿಗೆ ದೊಡ್ಡ ತಡೆಗೋಡೆ ನಿರ್ಮಿಸಲಾಗಿದ್ದು, ಅದರ ಮೇಲೆ ವಾಕಿಂಗ್ ಪಾಥ್, ಸೈಕಲ್​ ಪಾಥ್​ ಹಾಗೂ ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. 

ಮುಖ್ಯವಾಗಿ ಕರ್ಮಶಿಯಲ್​ ಸ್ಟ್ರೀಟ್​ನ ರೀತಿಯಲ್ಲಿ ತುಂಗಾನದಿಯ ತೀರ ಜನರಿಂದಲೇ ಗಿಜುಗುಡುವ ಕಾಲ ಸನ್ನಿಹತವಾಗಿದೆ.ಅಷ್ಟರಮಟ್ಟಿಗೆ ನದಿ ತೀರವನ್ನು ಸುಂದರಗೊಳಿಸಲಾಗಿದೆ. 



 ರಿವರ್ ಸೈಡ್ ಪ್ರಾಜೆಕ್ಟ್​ನಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿ 95 ಪರ್ಸೆಂಟ್​ನಷ್ಟು ಮುಗಿಯುತ್ತಾ ಬಂದಿದೆ.  ಗುಜರಾತಿನ  ಸಬರಮತಿ ನದಿ ದಂಡೆಯನ್ನು ಅಭಿವೃದ್ಧಿ ಪಡಿಸಿದ ರೀತಿಯಲ್ಲಿಯೇ ತುಂಗಾ ನದಿ ತೀರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 





 2.7 ಕಿಲೋಮೀಟರ್ ಉದ್ದದ ವಾಕಿಂಗ್ ಪಾಥ್​,  ಮಕ್ಕಳ ಆಟೋಟದ ವ್ಯವಸ್ಥೆ,  ಫುಡ್ ಕ್ಯಾಂಟೀನ್, ಇಂಡೋರ್​ ಗೇಮ್ಸ್​ ಸೆಂಟರ್​,   ಗಣಪತಿ ವಿಸರ್ಜನೆಗೆ ಪಾಯಿಂಟ್​, ಗಳಿಗೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇಷ್ಟೆಅಲ್ಲದೆ ನೀರನ್ನು ಸ್ಟೋರ್ ಮಾಡಿ ಬೋಟಿಂಗ್​ಗೂ ಅವಕಾಶ ಕಲ್ಪಿಸಲಾಗುತ್ತದೆಯಂತೆ. ಇನ್ನೂ ಸುರಕ್ಷತೆಯ ದೃಷ್ಟಿಯಿಂದ  70 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸೈಕಲಿಂಗ್​ ಪ್ರಿಯರಿಗೆ ಸೈಕ್​ಗಳನ್ನು ವಿತರಿಸಲು ಅವಕಾಶವಿದೆ. 




ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಘಟನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ! ಓದಿ 

ಅಡ್ರೆಸ್ ಸಿಗದೇ ಕಂಗಾಲಾದ ಮಹಿಳೆ

ಭದ್ರಾವತಿ ತಾಲ್ಲೂಕಿನ ಹೊಸಮನೆ ಪೊಲೀಸ್ ಸ್ಟೇಷನ್​ ಲಿಮಿಟ್​ ಮಹಿಳೆಯೊಬ್ಬಳು ಮನೆಗೆ ಹೋಗುವ ದಾರಿ ಗೊತ್ತಾಗದೇ ಅಂಗಡಿಯೊಂದರ ಮುಂದೆ ಕುಳಿತುಬಿಟ್ಟಿದ್ದಳು. ಯಾವ ಕಡೆ ಹೋಗಬೇಕು ಎಂದು ತಿಳಿಯದೇ ಪರಿತಪಿಸುತ್ತಿದ್ದ ಮಹಿಳೆಯ ಬಗ್ಗೆ ಸ್ಥಳೀಯರು ವಿಚಾರಿಸಿದ್ದಾರೆ. ಕೊನೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಪೂರ್ವಪರವನ್ನು ವಿಚಾರಿಸಿ, ಅಲ್ಲಿಯೇ ಇದ್ದ ಸ್ಥಳೀಯರಿಂದ ಕೆಲವು ಮಾಹಿತಿ ಪಡೆದು , ವಿಳಾಸ ಪತ್ತೆ ಮಾಡಿ ಆಕೆಯನ್ನು ಅವರ ಮನೆಗೆ ತಲುಪಿಸಿದ್ದಾರೆ. 






ವಿನೋಬ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಆಕ್ಸಿಡೆಂಟ್ 

ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪದಲ್ಲಿ  ಬೈಕ್-ಕಾರುಗಳ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇನ್ನ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಎರಡು ಗಾಡಿಗಳಿಗೂ ವ್ಯಾಪಕ ಹಾನಿಯಾಗಿದೆ.

ಮುಂಗಾರು ಆಗಮವಾಗುತ್ತಿದ್ದಂತೆ ಶುರು ಜಗಳ

ಮಲ್ನಾಡ್​ನಲ್ಲಿ  ಮುಂಗಾರು ಆಗಮನದ ಹೊತ್ತಿಗೆ ಮಣ್ಣಿಗಾಗಿ ಹೊಡೆದಾಟಗಳು ಆರಂಭವಾಗುತ್ತವೆ. ಅಣ್ಣ,ತಮ್ಮ, ತಂದೆ ಮಗ, ಅತ್ತೆ ಸೊಸೆ, ಅಕ್ಕಪಕ್ಕ ನೆರೆಹೊರೆ ಹೀಗೆ ಈ ಜಾಗ ತಮ್ಮದು ನಮ್ಮದು ಎಂದು ಹೊಡೆದಾಟ ಶುರುವಿಟ್ಟುಕೊಳ್ಳುತ್ತಾರೆ. ಅದರಲ್ಲಿ ಬದ ವಿಚಾರ, ಬೇಲಿ ವಿಚಾರಗಳು ಜಗಳಕ್ಕೆ ಆಹ್ವಾನ ಕೊಡುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ  ಆನಂದಪುರದಲ್ಲಿ ಭೂಮಿ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ಗಲಾಟೆಯಾಗಿದೆ. ಇನ್ನೂ ಈ ರೀತಿಯ ವ್ಯಾಜ್ಯಗಳನ್ನು ನಿಬಾಯಿಸುವುದೇ ಪೊಲೀಸರಿಗೆ ದೊಡ್ಡ ಕೆಲಸವಾಗುತ್ತಿದೆ. 



ಪತಿಯಿಲ್ಲದ ಸಮಯದಲ್ಲಿ ಸೊಸೆಯನ್ನ ಹೊರಹಾಕಿದ ಅತ್ತೆ ಮಾವ

ಇಂತಹದ್ದೊಂದು ಘಟನೆ  ಭದ್ರಾವತಿಯ ತಿಮ್ಲಾಪುರದಲ್ಲಿ ನಡೆದಿದೆ.  ಅತ್ತೆ ಮಾವ ತನ್ನ ಗಂಡನಿಲ್ಲದ ಸಮಯದಲ್ಲಿ ನಿಂದಿಸಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಸೊಸೆಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಎರಡು ಕಡೆಯವರನ್ನು ಕರೆದು ಮಾತನಾಡಿದ್ದಾರೆ. ಆನಂತರ ಸ್ಠೇಷನ್​ಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ. 

ಮೀನು ಹಿಡಿಯುವ ವಿಚಾರಕ್ಕೆ ಗಲಾಟೆ

ಭದ್ರಾವತಿಯ ತಾರಿಕಟ್ಟೆಯಲ್ಲಿ ಮೀನು ಹಿಡಿಯುವ ವಿಚಾರಕ್ಕೆ ಗ್ರಾಮಸ್ಥರು ಹಾಗೂ ಕೆಲವರಿಗೂ ಜಗಳವಾಗಿದೆ. ಪರಸ್ಪರ ವಾಗ್ವಾದ ಗಲಾಟೆಗೆ ತಿರುಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿ ಮಾಡಿದ್ದಾರೆ. ಅಲ್ಲದೆ  ದೂರುದಾರರಿಗೂ & ಗ್ರಾಮಸ್ಥರಿಗೂ ತಿಳುವಳಿಕೆ & ಎಚ್ಚರಿಕೆಯನ್ನು ನೀಡಿ ಠಾಣೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಿದ್ಧಾರೆ.