ಶಿವಮೊಗ್ಗದಲ್ಲಿ ಕೋಟೆ ಪೊಲೀಸರ ಕಾರ್ಯಾಚರಣೆ! ₹1.02 ಕೋಟಿ ಮೌಲ್ಯದ ಚಿನ್ನದ ಕಳ್ಳ ಅರೆಸ್ಟ್ ! ಮಾಲು ಜಪ್ತು

ಹಂಚಿಕೊಳ್ಳಿ
WhatsApp Facebook X Telegram
Shivamogga Kote Police Arrest Burglary Suspect, Seize Valuables Worth Rs 1.02 Crore
Shivamogga Kote Police Arrest Burglary Suspect, Seize Valuables Worth Rs 1.02 Crore

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ವಿದ್ಯಾನಗರದಲ್ಲಿ ನಡೆದಿದ್ದ ಕಳ್ತನ ಕೇಸನ್ನ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಿ ₹1,02,77,435 ಮೌಲ್ಯದ ಚಿನ್ನಾಭರಣ, ನಗದು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮಾಲು ಜಪ್ತು ಇತ್ತೀಚಿನ ದಿನಗಳಲ್ಲಿ ಇದೆ ಮೊದಲು ಎನಿಸಿದೆ.

ಕಳೆದ ಆಗಸ್ಟ್ 28ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿರುವ ಮನೆಯೊಂದರ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳ, ಮನೆಯಲ್ಲಿದ್ದ ಸುಮಾರು 943 ಗ್ರಾಂ ತೂಕದ ಬಂಗಾರದ ಒಡವೆಗಳು, 500 ಗ್ರಾಂ ಬೆಳ್ಳಿ ವಸ್ತುಗಳು, 86,000 ನಗದು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಡೆದ ಘಟನೆ ಸಂಬಂಧ ಮನೆಯವರು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 331(3) ಮತ್ತು 305ರಂತೆ ಪ್ರಕರಣ ದಾಖಲಾಗಿತ್ತು.

ಭಾರತ್ ಜೋಡೋ ಯಾತ್ರೆ 2.0

ಈ ಕುರಿತು ವಿಶೇಷ ತಂಡ ಕಾರ್ಯಾಚರಣೆಗೆ ಇಳಿದು ಹಗರಿಬೊಮ್ಮನಹಳ್ಳಿ ನಿವಾಸಿ ಮೊಹಮ್ಮದ್ ರಫೀಕ್ ಅಲಿಯಾಸ್ ಕರಿಯ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹80,92,435 ಮೌಲ್ಯದ 558.099 ಗ್ರಾಂ ಬಂಗಾರದ ಒಡವೆಗಳು, ₹20 ಲಕ್ಷ ನಗದು ಹಾಗೂ ₹1,85,000 ಮೌಲ್ಯದ ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹1,02,77,435 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಪೆಷಲ್ ಟೀಂನಲ್ಲಿ ಕೋಟೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಕೆ. ಪಟೇಲ್ , ಹೆಡ್‌ಕಾನ್‌ಸ್ಟೆಬಲ್‌ಗಳಾದ ಧನರಾಜ್ , ವಸಂತ್ ಆರ್., ಪೊಲೀಸ್ ಸಿಬ್ಬಂದಿ ರಾಜು , ಕಿಶೋರ ವಿ. , ರಂಗನಾಥ್ ಕೆ. , ಗೊರವರ ಅಂಜಿನಪ್ಪ ಹಾಗೂ ನವೀನ್ ಎಚ್.ಎನ್. ಕಾರ್ಯನಿರ್ವಹಿಸಿದ್ದರು. ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಗುರುರಾಜ್ ಸಿ. , ಇಂದ್ರೇಶ್ ಸಿ. ಹಾಗೂ ತೀರ್ಥಲಿಂಗ್ ಇದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor