ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು/ ಅಮೆಜಾನ್ ಗ್ರಾಹಕ ಸೇವೆ ಹೆಸರಿನಲ್ಲಿ ಸಂಪರ್ಕಿಸಿ ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್ ಖಾತೆಯಿಂದ ₹1.44 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸಂತೋಷ್ ಕುಮಾರ್ಎಂಬುವರು ಅಮೆಜಾನ್ನಲ್ಲಿ ಖರೀದಿಸಿದ್ದ ವಸ್ತು ತಲುಪದ ಹಿನ್ನೆಲೆಯಲ್ಲಿ ಗೂಗಲ್ನಲ್ಲಿ ಗ್ರಾಹಕ ಸೇವೆ ಸಂಖ್ಯೆ ಹುಡುಕಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ ಕರೆ ಮಾಡಿ, ತಾನು ಅಮೆಜಾನ್ ಕಂಪನಿಯವನೆಂದು ಪರಿಚಯಿಸಿಕೊಂಡು, ಆರ್ಡರ್ ರದ್ದಾಗಿದ್ದು ಹಣ ವಾಪಸ್ ನೀಡುವುದಾಗಿ ತಿಳಿಸಿದ್ದಾನೆ.
ಬಳಿಕ ಎಪಿಕೆ ಆ್ಯಪ್ ಕಳುಹಿಸಿ ಒಟಿಪಿ ನಮೂದಿಸುವಂತೆ ಸೂಚಿಸಿದ್ದಾನೆ. ಇದನ್ನು ನಂಬಿದ ಅವರು ಸೂಚನೆಯಂತೆ ಕ್ರಮ ಕೈಗೊಂಡಿದ್ದಾರೆ. ಆನಂತರ ಅ.21 ಮತ್ತು 24ರಂದು ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಸಂತ್ರಸ್ತರ ಅಕೌಂಟ್ನಿಂದ ಒಟ್ಟು ₹1.44 ಲಕ್ಷ ವರ್ಗಾವಣೆಯಾಗಿದೆ. ವಂಚನೆ ಅರಿತ ಬಳಿಕ 1930 ಸಹಾಯವಾಣಿಗೆ ದೂರು ನೀಡಿದ್ದು, ಇದೀಗ ಸೈಬರ್ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
