ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲ್ನಾಡ್ನ ವಿವಿದೆಡೆ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವಿವರಣೆ ನೀಡುವ ಇವತ್ತಿನ ಮಾರ್ನಿಂಗ್ ಸುದ್ದಿ ಇಲ್ಲಿದೆ..
ಮೊಬೈಲ್ ಕಳೆದುಕೊಂಡ ವ್ಯಕ್ತಿ ಖಾತೆಯಿಂದ ₹1.68 ಲಕ್ಷ ದೋಚಿದ್ರು!
ಚಿಕ್ಕಮಗಳೂರು: ಬಸ್ ಪ್ರಯಾಣದ ವೇಳೆ ಮೊಬೈಲ್ ಕಳೆದುಕೊಂಡ ವ್ಯಕ್ತಿಯ ಫೋನ್ಪೇ ದುರುಪಯೋಗ ಪಡಿಸಿಕೊಂಡು ಆತನ ಅಕೌಂಟ್ನಿಂದ ₹1.68 ಲಕ್ಷ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತರೀಕೆರೆಯ ಕೃಷ್ಣಮೂರ್ತಿ ಎಂಬುವರು ಅ.22ರಂದು ಕಡೂರಿನಿಂದ ತರೀಕೆರೆಯತ್ತ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಮೊಬೈಲ್ ಕಳೆದುಕೊಂಡಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅ.27ರಂದು ಮತ್ತೊಂದು ಮೊಬೈಲ್ನಲ್ಲಿ ಫೋನ್ಪೇ ಅಳವಡಿಸಿ ಖಾತೆಯ ಬಾಕಿ ಪರಿಶೀಲಿಸಿದಾಗ ವಿವಿಧ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ₹1.68 ಲಕ್ಷ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಅಪರಿಚಿತರು ಫೋನ್ಪೇ ದುರುಪಯೋಗಪಡಿಸಿಕೊಂಡು ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ನೀರು ಪಾಲಾದವರಿಗಾಗಿ ಹುಡುಕಾಟ
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ನೀರು ಪಾಲಾಗಿದ್ದು, ಅವರಿಗಾಗಿ ಹುಡುಕಾಟ ನಿನ್ನೆ ದಿನ ಮಂಗಳವಾರವೂ ಮುಂದುವರಿಯಿತು ಆದರೆ, ಯಾವುದೆ ಸುಳಿವು ಸಿಕ್ಕಿಲ್ಲ. ರಾಣೆಬೆನ್ನೂರಿನ ಶಿವು (24), ದಾವಣಗೆರೆಯ ರುದ್ರೇಶ್ (22) ಎಂಬುವವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಕೆಲಸ ಮಾಡುವುದಕ್ಕೆಂದು ತೀರ್ಥಹಳ್ಳಿಗೆ ಬಂದು ಇಲ್ಲಿಯೇ ನೆಲೆಸಿದ್ದ ಇವರು ಈಜಲೆಂದು ನೀರಿಗಿಳಿದಾಗ ಘಟನೆ ನಡೆದಿದೆ. ತೀರ್ಥಹಳ್ಳಿ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು.
ಗೃಹಿಣಿ ಆತ್ಮಹತ್ಯೆ
ಶಿವಮೊಗ್ಗ: ತಾಲೂಕಿನ ಹೊಳೆಹಟ್ಟಿಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಭೂಮಿಕಾ (26) ಮೃತರು. ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಕೇಸ್: ಅಪರಾಧಿಗೆ ಜೀವಾವಧಿ ಶಿಕ್ಷೆ ಆದೇಶ
ಚಿಕ್ಕಮಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿಚೀಲದಲ್ಲಿ ತುಂಬಿ ಕೆರೆಯಲ್ಲಿ ಹೂತು ಹಾಕಿದ್ದ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಕುರುವಂಗಿ ಗ್ರಾಮದ ಗೋಪಾಲ (48) ಶಿಕ್ಷೆಗೊಳಗಾದ ಆರೋಪಿ.
ಈತ 2014ರ ಜುಲೈ 30ರಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರಮೇಶ ಎಂಬುವರನ್ನ ಗೋಪಾಲ ಕೊಲೆ ಮಾಡಿ, ಶವವನ್ನ ಗೋಣಿ ಚೀಲದಲ್ಲಿ ತುಂಬಿಟ್ಟಿದ್ದ. ಈ ಸಂಬಂಧ 2014ರಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ನ.2ರಂದು ತೀರ್ಪು ಪ್ರಕಟಿಸಿದೆ, ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗೋಪಾಲನಿಗೆ ಜೀವಾವಧಿ ಜೈಲು ಶಿಕ್ಷೆ ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸಲು ಶಿಕ್ಷೆ ಹಾಗೂ ₹25 ವಿಫಲವಾದರೆ ಹೆಚ್ಚುವರಿಯಾಗಿ 10 ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ
