Fake WhatsApp Account / ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಇತ್ತೀಚೆಗೆ ಅಧಿಕಾರಿಗಳ ಹೆಸರಲ್ಲಿ ನಕಲಿ ಐಡಿ ಕ್ರಿಯೆಟ್ ಮಾಡಿ ಮೋಸ ಮಾಡುವ ವ್ಯವಸ್ಥೆಯೊಂದು ಜಾರಿಯಲ್ಲಿದೆ. ಇದಕ್ಕೆ ಹೊಸದೊಂದು ಉದಾಹರಣೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಜಿಲ್ಲಾಧಿಕಾರಿ ಹೆಸರಿನಲ್ಲಿ ವಾಟ್ಸ್ ಆ್ಯಪ್‌ನಲ್ಲಿ ಚಾಟ್ ಮಾಡಿದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಎಂದು ನಂಬಿದ ಆಹಾರ ಇಲಾಖೆ ಉಪನಿರ್ದೇಶಕ (ಡಿ.ಡಿ.) ಯೋಗಾನಂದ ಅವರಿಗೆ ಮೋಸವಾಗಿದೆ. ಅಷ್ಟೆ ಅಲ್ಲದೆ ವಂಚಿಸಿದ ವ್ಯಕ್ತಿಯ ಮಾತು ನಂಬಿದ ಡಿಡಿ, ಆತ ಹೇಳಿದ ಬ್ಯಾಂಕ್ ಖಾತೆಯೊಂದಕ್ಕೆ 50 ಸಾವಿರ ಪಾವತಿಸಿದ್ದಾರೆ.
ಬಳಿಕ ತಾವು ವಂಚನೆಗೊಳಗಾಗಿದ್ದು ಗೊತ್ತಾಗಿದೆ. ಹೀಗಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅ.8ರಂದು ಈ ಘಟನೆ ನಡೆದಿದೆ. ಅಂದು ಯೋಗಾನಂದ ಅವರ ಮೊಬೈಲ್ಗೆ ವಾಟ್ಸ್ ಆ್ಯಪ್ ಮೆಸೇಜ್ ಬಂದಿದೆ. ಅದರ ಡಿಪಿಯಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಹೆಸರು ಮತ್ತು ಫೋಟೋ ಇತ್ತು. ಅವರ ಮೆಸೆಜ್ನಲ್ಲಿ ‘ಹಲೊ ಯೋಗಾನಂದ್ ಹೌಆರ್ ಯು’ ಎಂಬ ಸಂದೇಶವನ್ನ ಯೋಗಾನಂದ್ ಗಮನಿಸಿದ್ದಾರೆ. ಆ ಬಳಿಕ ಚಾಟ್ ಮುಂದುವರಿದಿದೆ. ನನ್ನ ಬ್ಯಾಂಕಿನ ಆನ್‌ಲೈನ್ ಪೇಮೆಂಟ್ ಟೆಕ್ನಿಕಲ್ ಸಮಸ್ಯೆಯಾಗಿದ್ದು, ನಾನು ಕಳುಹಿಸುವ ಆಕೌಂಟ್ ನಂಬರ್ಗೆಗೆ ₹50 ಸಾವಿರ ಕಳುಹಿಸಿ ಎಂಬ ಸಂದೇಶ ಬಂದಿದೆ. ಅಲ್ಲದೆ ನಿಮಗೆ ತದನಂತರ ನೀಡುವುದಾಗಿ ಮೆಸೇಜ್ ರವಾನೆ ಯಾಗಿದೆ.
ಇದನ್ನ ನಂಬಿದ ಡಿಡಿ ಹೇಮಣ್ಣಗೌಡ ಗುಡ್ಡಣ್ಣಗೌಡ ಪಾಟೀಲ ಎಂಬ ಹೆಸರಿನ ಖಾತೆಗೆ 50 ಸಾವಿರ ಡಿಪಾಸಿಟ್ ಮಾಡಿದ್ದಾರೆ. ಬಳಿಕ ಅವರಿಗೆ ಈ ಬಗ್ಗೆ ಡೌಟ್ ಬಂದು ಜಿಲ್ಲಾಧಿಕಾರಿ ಅವರ ಅಪ್ತ ಸಹಾಯಕರಿಗೆ ಕರೆ ಮಾಡಿ ಕೇಳಿದ್ದಾರೆ. ಇದಕ್ಕೆ ಪ್ರತಿಕಿಯಿಸಿದ ಅವರು ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ಈ ರೀತಿ ಹಲವರಿಗೆ ಮೆಸೇಜ್ ಬಂದಿವೆ. ಪ್ರತಿಕ್ರಿಯೆ ನೀಡುವುದು ಬೇಡ’ಎಂದು ಅವರು ತಿಳಿಸಿದ್ದಾರೆ. ನಕಲಿ ಖಾತೆ ಎಂಬುದು ಗೊತ್ತಾದ ಬಳಿಕ ಯೋಗಾನಂದ ಸೈಬರ್ ಸ್ಟೇಷನ್ಗೆ ಕಂಪ್ಲೆಂಟ್ ಮಾಡಿದ್ದಾರೆ.
