KARNATAKA NEWS/ ONLINE / Malenadu today/ Jun 29, 2023 SHIVAMOGGA NEWS
ಶಿವಮೊಗ್ಗ / ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ದ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದಲ್ಲಿ ಮುಸ್ಲಿಮ್ ಸಮುದಾಯದವರು ಸಾಮೂಹಿಕ ನಮಾಜ್ ಮಾಡಿದರು. ಈ ವೇಳೆ ಮುಸ್ಲಿಮ್ ಧರ್ಮಗುರುಗಳು ದೇವರ ಸಂದೇಶ ಸಾರಿದರು, ಇನ್ನೂ ನೂರಾರು ಮುಸ್ಲಿಮರು ಹಬ್ಬದ ಪ್ರಾರ್ಥನೆ ಮುಗಿಸಿ, ಪರಸ್ಪರ ಅಪ್ಪುಗೆಯೊಂದಿಗೆ ಶುಭಾಶಯಗಳನ್ನು ಹಂಚಿಕೊಂಡರು.
ಇನ್ನೂ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತುಮುತ್ತ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಮುಸ್ಲಿಮ್ ಮುಖಂಡರು ಸೇರಿದಂತೆ ವಿವಿಧ ಮುಖಂಡರು ಹಬ್ಬದ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ! #Bakrid2023 pic.twitter.com/sAw7bFz1uz
— malenadutoday.com (@CMalenadutoday) June 29, 2023
10 ಸಾವಿರಕ್ಕೆ ಬಂತು 16 ಸಾವಿರ ಲಾಭ! ನಂಬಿದ್ದಕ್ಕೆ ಮಹಿಳೆ ಕಳೆದುಕೊಂಡಿದ್ದು ₹11 ಲಕ್ಷ !
ಶಿವಮೊಗ್ಗ / ಆನ್ಲೈನ್ ವಹಿವಾಟು ನಂಬಿಕೆಗೆ ಅರ್ಹವಲ್ಲ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದೆ. ಇದಕ್ಕೆ ಸಾಕ್ಷಿಯಾಗಿ ತೀರ್ಥಹಳ್ಳಿಯ ಮಹಿಳೆಯೊಬ್ಬರು ವರ್ಕ್ ಫ್ರಾಮ್ ಹೋಮ್ (work from home scam) ಹುಡುಕಾಟದಲ್ಲಿ, ಟೆಲಿಗ್ರಾಂ (Telegram Web) ನಲ್ಲಿ ಬಂದಿದ್ದ ಜಾಹಿರಾತನ್ನು ನಂಬಿ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ಧಾರೆ.
ತೀರ್ಥಹಳ್ಳಿ ಮೂಲದ ಮಹಿಳೆಯೊಬ್ಬರು ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ (shivamogga cen police station) ಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಐಪಿಸಿ IPC 1860 (U/s-419,420) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಶಿವಮೊಗ್ಗ ನಗರದ ಈ ಹೈಟೆಕ್ ಸ್ಟ್ರೀಟ್ ಎಲ್ಲಿದೆ ಗೊತ್ತಾ? ಇಲ್ಲಿದೆ ವಾಕಿಂಗ್ , ಸ್ಲೈಕಿಂಗ್, ಬೋಟಿಂಗ್ ಸೌಲಭ್ಯ!
ನಡೆದಿದ್ಧೇನು?
ದೂರುದಾರ ಗೃಹಿಣಿ ವರ್ಕ್ ಫ್ರಾಮ್ ಹೋಮ್ ಆಫರ್ ಇರುವ ಕೆಲಸವನ್ನು ಹುಡುಕುತ್ತಿದ್ದರು. ಈ ವೇಳೆ ಅವರಿಗೆ ಟೆಲಿಗ್ರಾಂ ಆ್ಯಪ್ನಲ್ಲಿ I-GLOBAL ಕಂಪನಿಯ ಹೆಸರಿನಲ್ಲಿ, ಪಾರ್ಟ್ ಟೈ ಜಾಬ್ ನಲ್ಲಿ ಹಣ ಹೂಡಿಕೆಯ ಜಾಹಿರಾತು ಕಂಡಿದೆ. ಅದನ್ನ ಮೊದಲು ಅವರು ಪರೀಕ್ಷೆ ಮಾಡಿದ್ದಾರೆ. ಮೊದಲ ಸಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ 16 ಸಾವಿರ ರೂಪಾಯಿ ಹಣವಾಪಸ್ ಬಂದಿದೆ. ಇದನ್ನ ನಂಬಿದ ಅವರು ಮತ್ತೊಮ್ಮೆ ಇನ್ವೆಸ್ಟ್ ಮಾಡಿದ್ದಾರೆ. ಈ ವೇಳೆ ಕಂಪನಿ ವಿವಿಧ ಅಕೌಂಟ್ಗಳಿಗೆ ಒಟ್ಟು 11 ಲಕ್ಷಕ್ಕೂ ಅಧಿಕ ಹಣವನ್ನು ಹಾಕಿಸಿಕೊಂಡಿದೆ. ಆದರೆ ಲಾಭಾಂಶವನ್ನು ವಾಪಸ್ ನೀಡಲಿಲ್ಲ. ಇದರ ಬೆನ್ನಲ್ಲೆ ಮಹಿಳೆಗೆ ತಾನು ಮೋಸಹೋಗಿರುವುದು ಗೊತ್ತಾಗಿ ಸಿಇಎನ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
