ಮಲೆನಾಡಲ್ಲೊಂದು ರಿಯಲ್ ಚಾರ್ಲಿ ಕಥೆ/ ಅನ್ನ ಹಾಕಿದ ತಾಯಿಗಾಗಿ ಆಸ್ಪತ್ರೆ ಬಾಗಿಲಲ್ಲೇ ಕಾದ ನಾಯಿ

ನಾಯಿಯೊಂದರ ಮೂಕಪ್ರೇಮದ ಫೋಟೋ ಫೇಸ್​ಬುಕ್​ನಲ್ಲಿ ಸದ್ದು ಮಾಡುತ್ತಿದೆ. ಪಶುವೈದ್ಯ ಡಾ.ಯುವರಾಜ್​ ಎಂಬವರು, ಅಲ್ಲಿನ ಆಸ್ಪತ್ರೆಯೊಂದರ ಮುಂದೆ ತನ್ನ ಮಾಲೀಕನನ್ನು ನೋಡಲು ನಾಯಿಯೊಂದು ಕಾಯುತ್ತಾ ಕುಳಿತಿರುವ ಫೋಟೋವನ್ನು ತಮ್ಮ ಎಫ್​ಬಿಯಲ್ಲಿ ಫೋಸ್ಟ್​ ಮಾಡಿದ್ದಾರೆ.

ಮಲೆನಾಡಲ್ಲೊಂದು ರಿಯಲ್ ಚಾರ್ಲಿ ಕಥೆ/ ಅನ್ನ ಹಾಕಿದ ತಾಯಿಗಾಗಿ  ಆಸ್ಪತ್ರೆ ಬಾಗಿಲಲ್ಲೇ ಕಾದ  ನಾಯಿ

ಬೆಕ್ಕಲ್ಲಿ ಸೊಕ್ಕು, ನಾಯಲ್ಲಿ ಪ್ರೀತಿ ಕಾಣುತ್ತೆ ಅಂತಾರೆ, ಅದು ನಿಜವೂ ಸಹ ನಾಯಿ ಎಂದು ಬೈಯ್ದರೂ ಸಹ ಅವುಗಳು ಪ್ರೀತಿಸುವ ಪರಿಯನ್ನು ವಿವರಿಸುವುದು ಕಷ್ಟ. ಇದಕ್ಕೆ ಸಾಕ್ಷಿಯಾಗಿ ಚಾರ್ಲಿ ಎಂಬ ಸಿನಿಮಾ ಕೂಡ ಬಂದು, ಮನದ ಕದ ತಟ್ಟಿ ಭಾವುಕತೆಯನ್ನು ಎಬ್ಬಿಸಿತ್ತು. 

ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು

ಈಗ್ಯಾಕೆ ಈ ಮಾತು ಎಂದರೆ, ನಮ್ಮ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿನ ನಾಯಿಯೊಂದರ ಮೂಕಪ್ರೇಮದ ಫೋಟೋ ಫೇಸ್​ಬುಕ್​ನಲ್ಲಿ ಸದ್ದು ಮಾಡುತ್ತಿದೆ. ಪಶುವೈದ್ಯ ಡಾ.ಯುವರಾಜ್​ ಎಂಬವರು, ಅಲ್ಲಿನ ಆಸ್ಪತ್ರೆಯೊಂದರ ಮುಂದೆ ತನ್ನ ಮಾಲೀಕನನ್ನು ನೋಡಲು ನಾಯಿಯೊಂದು ಕಾಯುತ್ತಾ ಕುಳಿತಿರುವ ಫೋಟೋವನ್ನು ತಮ್ಮ ಎಫ್​ಬಿಯಲ್ಲಿ ಫೋಸ್ಟ್​ ಮಾಡಿದ್ದಾರೆ.

 

ಇದನ್ನು ಓದಿ :  ಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್​ಗೆ , ಬಿಂದಾಸ್​ ಆಗಿ ಕುಣಿದ ಲೇಡಿಸ್ ಫ್ಯಾನ್ಸ್​

ಅದರ ಹಿನ್ನೆಲೆ ಅರಸಿದಾಗ ಒಂದಷ್ಟು ಮಾಹಿತಿ ಲಭ್ಯವಾಗಿದೆ. ಫೇಸ್​ಬುಕ್​ನಲ್ಲಿರೋ ಫೋಟೋದಲ್ಲಿ ಕಾಣಸಿಕ್ಕಿರುವ ನಾಯಿ ಹೆಸರು ಪುಪ್ಪಿ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಎಂಬವರು ಸಾಕಿದ್ದ ನಾಯಿಯದು. ನಾಗರತ್ನ ಶಾಸ್ತ್ರಿಯವರು ಅನಾರೋಗ್ಯದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗಿನಿಂದಲೂ ಸಾಕುನಾಯಿ ಪುಪ್ಪಿ ಆಸ್ಪತ್ರೆಯ ಬಾಗಿಲು ಕಾಯಲು ಆರಂಭಿಸಿದೆ. ಅಲ್ಲಿಯೇ ಕಾವಲು ಕಾಯ್ತಿದ್ದ, ಪುಪ್ಪಿ ನಾಗರತ್ನರವರನ್ನು ಅಡ್ಮಿಟ್ ಮಾಡಿದ್ದ ವಾರ್ಡ್​ ಕಡೆ ನೋಡುತ್ತಾ, ಈಗ ಬರುತ್ತಾರೇನೋ? ಎಂಬಂತೆ ಕಾಯುತ್ತಿತ್ತು. ಅಲ್ಲದೆ ನಾಗರತ್ನರವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಲೇ ನಾಯಿ ತನ್ನದೇ ದಾಟಿಯಲ್ಲಿ ಕುಣಿಯಲು ಆರಂಭಿಸಿತ್ತು ಎನ್ನುತ್ತಾರೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

ಇನ್ನೂ ಈ ಬಗ್ಗೆ ಸುದ್ದಿ ಮೀಡಿಯಾವೊಂದಕ್ಕೆ ಮಾತನಾಡಿರುವ ನಾಗರತ್ನರವರ ಪುತ್ರಿ ಸುಧಾ ಒಂದುವರೆ ತಿಂಗಳಿನ ನಾಯಿಯನ್ನು ತಂದು ಸಾಕಿದ್ದೇವೆ, ಈಗದ್ದಕ್ಕೆ 8 ತಿಂಗಳು, ಅಮ್ಮನಿಗೆ ವಯಸ್ಸಾಗಿದ್ದು, ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ದೆವು. ಈ ಪುಪ್ಪಿ ಆಸ್ಪತ್ರೆಗೆ ನಮ್ಮ ಜೊತೆಗೆ ಬಂದು ನಿಲ್ಲುತ್ತಿತ್ತು. ಅದು ನಮ್ಮನೆ ನಾಯಿ ಎಂಬುದು ಎಲ್ಲರಿಗೂ ಗೊತ್ತಾಗಿ ಹೋಗಿದೆ ಎಂದಿದ್ಧಾರೆ. ಅಲ್ಲದೆ ಅಮ್ಮನ ನಿಧನದ ಬಳಿಕ ಪುಪ್ಪಿಯು ಆಹಾರವನ್ನು ಸೇವಿಸ್ತಿಲ್ಲವಂತೆ. ಮನೆಯಲ್ಲಿ ಯಾರಿಗೆ ಆರೋಗ್ಯ ಸಮಸ್ಯೆಯಾದರೂ ಪುಪ್ಪಿ ಸಹ ಡಲ್​ ಆಗುತ್ತದೆ ಎನ್ನುತ್ತಾರೆ ಸುಧಾ

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com