ಶಿವಮೊಗ್ಗ APMC ಯಲ್ಲಿ ಲೋಕಾಯುಕ್ತ ರೇಡ್ ! ಇಬ್ಬರು ಅಧಿಕಾರಿಗಳು ವಶಕ್ಕೆ!

Shivamogga Mar 4, 2024 ’ Lokayukta raids Shimoga APMC    ಶಿವಮೊಗ್ಗದ ಮಟ್ಟಿಗೆ ಲೋಕಾಯುಕ್ತ ಪೊಲೀಸರು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಈ ವೇಳೆ  50 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾ ಅಧಿಕಾರಿಗಳ ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. 

ಲೋಕಾ ಬಲೆಗೆ ಬಿದ್ದವರು ಎಪಿಎಂಸಿ ಕಾರ್ಯದರ್ಶಿ ಹಾಗೂ ಹಿರಿಯ ಮೇಲ್ವಿಚಾರಕ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ಹಾಗೂ ಕಛೇರಿಯಲ್ಲಿ ಎಪಿಎಂಸಿ ಮಳಿಗೆ ಮಂಜೂರು  ಮಾಡಲು 2 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿ ಎಪಿಎಂಸಿ  ಕಾರ್ಯದರ್ಶಿ ಒಂದು ಲಕ್ಷ ರೂ. ಗೆ ಮಾತುಕತೆ ನಡೆಸಿ, 50 ಸಾವಿರ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ, ಮೇಲ್ವಿಚಾರಕ ಯೋಗಿಶ್ ಲೋಕಾ ಬಲೆಗೆ ಬಿದ್ದಿದ್ದು, ಹೊಸನಗರ ತಾಲೂಕು ನೇರಲಿಗೆ ಗ್ರಾಮದ ರವೀಂದ್ರ ಎಂಬುವರ ದೂರಿನ ಹಿನ್ನೆಲೆ ಈ ರೇಡ್​ ನಡೆಸಲಾಗಿದೆ.  ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸದ್ಯ  ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 

Leave a Comment