ಶಿವಮೊಗ್ಗ: ನಗರದ ಮೆಸ್ಕಾಂ ಉಪವಿಭಾಗ 2 ಮತ್ತು ಘಟಕ-5ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜನವರಿ 30 ರಿಂದ ಫೆಬ್ರವರಿ 1ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 30: ಅಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ ಮಿಳಗಟ್ಟ, ಬುದ್ಧನಗರ, ಕಿಣಿ ಲೇಔಟ್, ನಗರದ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಜನವರಿ 31 : ಬೆಳಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ ಟಿಪ್ಪುನಗರದ 1 ರಿಂದ 7ನೇ ಕ್ರಾಸ್‌ವರೆಗಿನ ಎಡಭಾಗದ ಪ್ರದೇಶಗಳು, ಕೆ.ಕೆ. ಶೆಡ್, ಪದ್ಮಾ ಟಾಕೀಸ್ ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಫೆಬ್ರವರಿ 01: ಅಂದು ಬೆಳಗ್ಗೆ 10:00 ರಿಂದ ಸಂಜೆ 4:00 ರವರೆಗೆ ಪಿಯರ್‌ಲೈಟ್ ಫ್ಯಾಕ್ಟರಿ, ಎನ್.ಟಿ. ರಸ್ತೆ, ಮಂಡ್ಲಿ ಬೈಪಾಸ್, ಮಂಡ್ಲಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಈ ಬದಲಾವಣೆಗಳನ್ನು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.
Power Cut in Shivamogga Areas Starting Jan 30
