ಉಪ ತಹಶೀಲ್ದಾರ್ ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ !

Lokayukta police arrest two persons, including deputy tahsildar ಉಪ ತಹಶೀಲ್ದಾರ್ ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ !

ಉಪ ತಹಶೀಲ್ದಾರ್ ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ !

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS

ಶಿವಮೊಗ್ಗ ಲೋಕಾಯುಕ್ತ ಪೊಲೀಸರ ಬಲೆಗೆ ಉಪತಹಶೀಲ್ದಾರ್ ಹಾಗೂ ಏಜೆಂಟ್ ಒಬ್ಬ ಸಿಕ್ಕಿಬಿದಿಒದ್ದಾರೆ.  ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. 

 

ಶಿವಮೊಗ್ಗ ತಾಲೂಕಿನ ಹೊಳಲೂರಿನ ನಾಡ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ  ಉಪ ತಹಸೀಲ್ದಾರ್ ಪರಮೇಶ್ವರ್ ನಾಯ್ಕ್​ ಅವರಿಗೆ ಸಹಾಯಕನಾಗಿದ್ದ ಪ್ರಕಾಶ್ ಎಂಬಾತನನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಖಾತೆ ಬದಲಾವಣೆಗಾಗಿ  40 ಸಾವಿರ ರೂಪಾಯಿ ನೀಡಬೇಕು ಎಂದು ಉಪತಹಶೀಲ್ದಾರ್​ ಪರಮೇಶ್ವರ್ ನಾಯ್ಕ್​ ಡಿಮ್ಯಾಂಡ್ ಇಟ್ಟಿದ್ದರಂತೆ. ಈ ವಿಚಾರವಾಗಿ ಸಂಬಂಧಪಟ್ಟವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿ ಟ್ರ್ಯಾಪ್​ ಮಾಡಿದ್ದಾರೆ. ಆರೋಪಿಯು 30 ಸಾವಿರ ಹಣ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಇನ್ನೂ ಈ ವ್ಯವಹಾರದಲ್ಲಿ ಬ್ರೋಕರ್ ಆಗಿ ಕೆಲಸ ನಿರ್ವಹಿಸಿದ್ದ ಪ್ರಕಾಶ್​ ಎಂಬವರನ್ನ ಸಹ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

 

ತುಮಕೂರು, ಮಂಡ್ಯ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ! ಹೀಗೂ ಹಿಡಿಯುತ್ತಾರೆ ಪೊಲೀಸರು!

ಅನುಮಾನಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ಪೊಲೀಸ್ ಇಲಾಖೆಯಲ್ಲಿ MCCTNS (Mobile Crime Criminal Tracking Network System)  ಅಳವಡಿಸಲಾಗಿದೆ. ನೈಟ್​ ಗಸ್ತಿನ ವೇಳೆ ರ್ಯಾಂಡಮ್ ಪರಿಶೀಲನೆ ವೇಳೆ ಎದುರಾಗುವ ಅನುಮಾನಸ್ಪದ ವ್ಯಕ್ತಿಗಳ ಹೆಬ್ಬರಳ ಗುರುತನ್ನ ಪಡೆದು ಪರಿಶೀಲಿಸಿದರೇ ಅವರ ವಿರುದ್ಧ ಏನಾದ್ರೂ ಕೇಸ್ ಇದೆಯೇ ಎಂಬುದು ಸ್ಪಷ್ಟವಾಗುತ್ತದೆ. 

ಸದ್ಯ ಈ ಮಾರ್ಗದದಲ್ಲಿ ದಿನಾಂಕಃ 21-08-2023  ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಸಿಪಿಸಿ  ಮಂಜುನಾಥ್ ಮತ್ತು ಗಂಗಾಧರ್ ನಾಶಿ ರವರು ಮಂಡ್ಯ ಪೊಲೀಸರಿಗೆ ಬೇಕಿದ್ದ ಆರೋಪಿಯೊಬ್ಬನನ್ನ ಹಿಡಿದಿದ್ದಾರೆ. 

MCCTNS (Mobile Crime Criminal Tracking Network System) ತಂತ್ರಾಂಶದ  ಮೂಲಕ  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ  ಅರಳಿಯಲ್ಲಿ ಗ್ರಾಮದ ಸರ್ಕಲ್ ನ ಹತ್ತಿರ   ಪೊಲೀಸರು ತಪಾಸಣೆ ನಡೆಸ್ತಿದ್ದರು. ಈ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಗಳನ್ನು ಪರಿಶೀಲಿಸುತ್ತಿದ್ದ  ಸಿಬ್ಬಂದಿಗೆ ಓರ್ವ ಆರೋಪಿ ಪತ್ತೆಯಾಗಿದ್ಧಾನೆ. ಆತನ ಬೆರಳಚ್ಚಿನ ಮೂಲಕ ಆತನ ಹೆಸರು ಆಕಾಶ್ ಗೌಡ @ ಅಪ್ಪು, 26 ವರ್ಷ, ವಾಸ ಸಾತನೂರ್ ಗ್ರಾಮ ಮಂಡ್ಯ ಜಿಲ್ಲೆ. ಆತನ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ 04  ಮನೆಗಳ್ಳತನ ಮತ್ತು 01 ದರೋಡೆಗೆ ಯತ್ನ ಪ್ರಕರಣ ಹಾಗೂ ತುಮಕೂರು ಜಿಲ್ಲೆಯಲ್ಲಿ 01 ಮನೆಗಳ್ಳತನ ಪ್ರಕರಣ ಇರುವುದು ಗೊತ್ತಾಗಿದೆ. ಅಲ್ಲದೆ ಆತ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ವಿಚಾರ ತಿಳಿದು ಆರೋಪಿಯನ್ನ ಸಿಬ್ಬಂದಿ ಬಂಧಿಸಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.   

ಜೆಸಿಬಿಯಲ್ಲಿ ATM ದರೋಡೆ ! ವಿನೋಬನಗರ ಸ್ಟೇಷನ್​ ಕೇಸ್​ ಸುರತ್ಕಲ್​ನಲ್ಲಿ ಬಯಲು! ಶಿಕಾರಿಪುರದ ಆರೋಪಿಗಳು ಅರೆಸ್ಟ್!

ಶಿವಮೊಗ್ಗದ ವಿನೋಬನಗರ ಸಮೀಪ ಜೆಸಿಬಿ ಮೂಲಕ ಎಟಿಎಂ ವೊಂದನ್ನ ದರೋಡೆ ಮಾಡಲು ಯತ್ನಿಸಿದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣದ ಆರೋಪಿಗಳು ಯಾರು ಎಂಬು ಕುತೂಹಲ ಮೂಡಿಸಿತ್ತು. ಇದೀಗ ಪ್ರಕರಣ ಬಯಲಾಗಿದೆ. ಆದರೆ ಪ್ರಕರಣ ಬಯಲಾಗಿದ್ದು ಶಿವಮೊಗ್ಗದಲ್ಲಿ ಅಲ್ಲ, ಬದಲಾಗಿ ಸುರತ್ಕಲ್​ನಲ್ಲಿ.  

ಹೌದು,  ಸುರತ್ಕಲ್  (Suratkal) ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಲೂಟಿ ಮಾಡುವ ಪ್ರಯತ್ನವೊಂದು ನಡೆದಿತ್ತ. ಈ  ATM Robbery Mangalore ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ನಾಲ್ವರು ಆರೋಪಿಗಳನ್ನ ಬಂದಿಸಿದ್ಧಾರೆ.   

ಕಳೆದ  ಆಗಸ್ಟ್ 4 ರಂದು ರಾತ್ರಿ ಪಡುಬಿದ್ರೆ ಠಾಣೆಯ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ಯಂತ್ರವನ್ನು ಕದ್ದಿದ್ದ ಆರೋಪಿಗಳು, ಅದರ ಮೂಲಕ ಸುರತ್ಕಲ್ ಬಳಿಯಲ್ಲಿರುವ ಸೌತ್​ ಇಂಡಿಯನ್ ಬ್ಯಾಂಕಿನ ಎಟಿಎಂ ಮೆಷಿನ್​ ದರೋಡೆಗೆ ಯತ್ನಿಸಿದ್ದರು. ಎಟಿಎಂ ಕೇಂದ್ರದಲ್ಲಿ ಸೈರನ್ ಮೊಳಗಿದ  ಹಿನ್ನೆಲೆ ಹಿಡಿದ ಕೆಲಸಕ್ಕೆ ಅರ್ಧಕ್ಕೆ ಕೈ ಚೆಲ್ಲಿ ಆರೋಪಿಗಳು ಪರಾರಿಯಾಗಿದ್ದರು . ಈ ಪ್ರಕರಣವನ್ನು ದಕ್ಷಿಣ ಕನ್ನಡ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ರು. 

ಇನ್ನೂ ಈ ಪ್ರಕರಣಕ್ಕೂ ಮೊದಲು ಶಿವಮೊಗ್ಗದಲ್ಲಿ ಜುಲೈ 26ರಂದು ಮಧ್ಯರಾತ್ರಿ  ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶಿವ ದೇವಸ್ಥಾನದ ಬಳಿಯಿರುವ ಬ್ಯಾಂಕ್ ಎಟಿಎಂ (ATM )ಕೇಂದ್ರವನ್ನು ಜೆಸಿಬಿ ಮೂಲಕ ಒಡೆಯುವ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ಮಲೆನಾಡು ಟುಡೆ   ಶಿವಮೊಗ್ಗದಲ್ಲಿ ಜೆಸಿಬಿ ಬಳಸಿ ATM ದೋಚಲು ಯತ್ನ! ನಿನ್ನೆ ರಾತ್ರಿ ನಡೆದಿದ್ದೇನು? ಎಂಬ ಹೆಸರಿನಡಿಯಲ್ಲಿ ಸುದ್ದಿ ಮಾಡಿತ್ತು. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ ಓದಿ 

ಸದ್ಯ ಪ್ರಕರಣ ಸಂಬಂಧ  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21),  ಧನರಾಜ್ ನಾಯ್ಕ (26) ನನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಹೀರೊ ಹೊಂಡಾ ಸ್ಪೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು