ಬಾಂಬ್ ಇನ್​ ದಿ ಸಿಟಿ ಗೇಮ್ ಆಡ್ತಿರಾ! ಮಹಿಳೆಯರಿಗೆ ಮಾತ್ರ ಅವಕಾಶ! ಪುರುಷರಿಗೂ ಇದೆ ಸ್ಪರ್ಧೆ ! ಏನಿದು ಪೂರ್ತಿ ವಿವರ ಇಲ್ಲಿದೆ ಓದಿ

National Sports Day is being celebrated jointly by zilla panchayat and youth empowerment and sports department ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ  ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ

ಬಾಂಬ್ ಇನ್​ ದಿ ಸಿಟಿ ಗೇಮ್ ಆಡ್ತಿರಾ! ಮಹಿಳೆಯರಿಗೆ ಮಾತ್ರ ಅವಕಾಶ! ಪುರುಷರಿಗೂ ಇದೆ ಸ್ಪರ್ಧೆ ! ಏನಿದು ಪೂರ್ತಿ ವಿವರ ಇಲ್ಲಿದೆ ಓದಿ

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS 

ಮೇಜರ್ ಧ್ಯಾನ್‌ಚಂದ್‌ರವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ  ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ . ಈ ಸಂಬಂಧ  ಪುರುಷರು ಹಾಗೂ ಮಹಿಳೆಯರಿಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ  (Nehru Stadium, Shimoga)ಆ.29 ರಂದು ಬೆಳಗ್ಗೆ 9.30 ರಿಂದ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ.

ಯಾವ್ಯಾವ ಕ್ರೀಡೆಗಳಿಗೆ ಅವಕಾಶ

ರಸಪ್ರಶ್ನೆ ಸ್ಪರ್ಧೆ, ಲಗೋರಿ (ಪುರುಷರಿಗೆ ಮಾತ್ರ), ಬಾಂಬ್ ಇನ್ ದಿ ಸಿಟಿ ( ಮಹಿಳೆಯರಿಗೆ ಮಾತ್ರ), ಹಗ್ಗ ಜಗ್ಗಾಟ ಸ್ಪರ್ಧೆ (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ), ನಡಿಗೆ ಸ್ಪರ್ಧೆ (ಪುರುಷರಿಗೆ 4 ಕಿ.ಮೀ., ಮಹಿಳೆಯರಿಗೆ 2 ಕಿ.ಮೀ), ಹಾಕಿ ಸ್ಪರ್ಧೆ(ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ) ಸ್ಪರ್ಧೆಗಳಿವೆ. 

ಆಸಕ್ತ ಕ್ರೀಡಾಪಟುಗಳು ಆ.29 ರಂದು ಬೆಳಗ್ಗೆ 9.30ರೊಳಗಾಗಿ ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 9008949847 ನ್ನು ಸಂಪರ್ಕಿಸಬಹುದಾಗಿದೆ. 


ಶಿವಮೊಗ್ಗ ನಗರದ ಈ ಪ್ರಮುಖ ಭಾಗಗಳಲ್ಲಿ ದಿನವಿಡಿ ಇರೋದಿಲ್ಲ ವಿದ್ಯುತ್! ಯಾವಾಗ? ಎಲ್ಲೆಲ್ಲಿ ? ವಿವರ ಇಲ್ಲಿದೆ



ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರ ಕಾಮಗಾರಿಯನ್ನು ಮೆಸ್ಕಾಂ ಶಿವಮೊಗ್ಗ (Mescom Shimoga) ವಿಭಾಗ ಹಮ್ಮಿಕೊಂಡಿದೆ. 




ಈ ಹಿನ್ನೆಲೆಯಲ್ಲಿ  ಎಂಎಫ್-20 ಆನಂದರಾವ್ ಬಡಾವಣೆ 11 ಕೆ.ವಿ. ಮಾರ್ಗದ  ಟಿಪ್ಪುನಗರ ಎಡಭಾಗ 1 ರಿಂದ 7ನೇ ಕ್ರಾಸ್, ಮಂಜುನಾಥ ಬಡಾವಣೆ, ಆನಂದರಾವ್ ಬಡಾವಣೆ, ಪದ್ಮಾ ಟಾಕೀಸ್, ಸರ್ಕಾರಿ ಬಸ್ ಡಿಪೋ, ಕಿನಿ ಲೇಔಟ್ ಹಿಂಭಾಗ, ಮಿಳಘಟ್ಟ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಯಾವಾಗ?

ಆಗಸ್ಟ್​  23 ರಂದು ಬೆಳಗ್ಗೆ 10.00 ರಿಂದ ಸಂಜೆ 06.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಮೆಸ್ಕಾಂಯೊಂದಿಗೆ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.




ಜಿಂಕೆ ಬೇಟೆಯಾಡಿ ಪಾರ್ಟಿ! ಅರಣ್ಯ ಇಲಾಖೆ ರೇಡ್ ! ಆರು ಮಂದಿ ಅರೆಸ್ಟ್



ಚಿಕ್ಕಮಗಳೂರು:  ಜಿಲ್ಲೆ ಅರಣ್ಯಾಧಿಕಾರಿಗಳು ಜಿಂಕೆ ಬೇಟೆ ಮಾಡಿದ ಆರೋಪಿಗಳನ್ನ ಬಂಧಿಸಿದ್ದಾರೆ.  ಜಿಂಕೆಯನ್ನು ಬೇಟೆಯಾಡಿ  ಅದರ ಅಡುಗೆ ತಯಾರಿಯಾಗುತ್ತಿದ್ದಾಗಲೇ ರೇಡ್​ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು  ಜಿಂಕೆ ಮಾಂಸ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 



ಭದ್ರ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ  ಫಾರೆಸ್ಟ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಕಾಫಿ ತೋಟವೊಂದರಲ್ಲಿ ಜಿಂಕೆ ಬೇಟೆಯಾಡಿ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ  ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾ ಆರು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ   ಜೊತೆಗೆ 8 ಕೆ.ಜಿ. ಜಿಂಕೆ ಮಾಂಸ ಹಾಗೂ ನಾಡ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.



ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು