ಆಕ್ಸಿಡೆಂಟ್​ನಲ್ಲಿ ಗೆಳಯನ ಸಾವಿನ ಸುದ್ದಿ ಕೇಳಿ ಸ್ನೇಹಿತನಿಗೆ ಹಾರ್ಟ್​ ಅಟ್ಯಾಕ್!

Friend suffers heart attack after hearing news of friend's death in accident!ಆಕ್ಸಿಡೆಂಟ್​ನಲ್ಲಿ ಗೆಳಯನ ಸಾವಿನ ಸುದ್ದಿ ಕೇಳಿ ಸ್ನೇಹಿತನಿಗೆ ಹಾರ್ಟ್​ ಅಟ್ಯಾಕ್!

ಆಕ್ಸಿಡೆಂಟ್​ನಲ್ಲಿ ಗೆಳಯನ ಸಾವಿನ ಸುದ್ದಿ ಕೇಳಿ ಸ್ನೇಹಿತನಿಗೆ ಹಾರ್ಟ್​ ಅಟ್ಯಾಕ್!

KARNATAKA NEWS/ ONLINE / Malenadu today/ Aug 21, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದ ಘಟನೆಯೊಂದು ಜನಮನವನ್ನು ಸೆಳೆಯುತ್ತಿದೆ. ಸಾವಿನ ಸುದ್ದಿಯೊಂದು, ಅಚ್ಚರಿಯಾಗಿಸ್ತಿದ್ದು, ಛೇ ಹೀಗಾಗಬಾರದಿತ್ತು ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.  

ನಡೆದಿದ್ದೇನು? 

ಶಿಕಾರಿಪುರದಲ್ಲಿ ಆಕ್ಸಿಡೆಂಟ್  ಸಂಭವಿಸಿತ್ತು. ಈ : ಅಪಘಾತದಲ್ಲಿ ತನ್ನ ಸ್ನೇಹಿತ   ಸಾವಿಗೀಡಾದನೆಂಬ ಸುದ್ದಿ ಕೇಳಿ ಮೃತನ ಮಿತ್ರನೊಬ್ಬನಿಗೆ ಹೃದಯಾಘಾತವಾಗಿದೆ. 

ಘಟನೆ ವಿವರ?

ಶಿಕಾರಿಪುರ ತಾಲ್ಲೂಕು (Shikaripura Taluk) ಪುನೇದಹಳ್ಳಿಯ ಬಳಿಯಲ್ಲಿರುವ ಕೆಎಸ್​ಆರ್​ಟಿಸಿ ಬಸ್​ ಡಿಪೋ ಬಳಿ ಕಳೆದ  ಶನಿವಾರ ರಾತ್ರಿ  ಎರಡು ಬೈಕ್ ನಡುವೆ ಅಪಘಾತವಾಗಿತ್ತು. ಈ  ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಓರ್ವನನ್ನು ಮಣಿಪಾಲ್‌ಗೆ ದಾಖಲಾಗಿಸಲಾಗಿದೆ. ಸಾವನ್ನಪ್ಪಿದ ಯುವಕ ಆನಂದ್ (30) ಎಂದು ಗುರುತಿಸಲಾಗಿದೆ. 

ಇನ್ನೂಅಪಘಾತದಲ್ಲಿ ಆನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ವಿಷಯ ತಿಳಿದ ಪುಣೇದಹಳ್ಳಿಯ ಯುವಕ ಸಾಗರ್ ಹೃದಯಘಾತವಾಗಿದೆ. ಆನಂದ್ ಮತ್ತು ಯುವರಾಜ್ ಸ್ನೇಹಿತನ ಹುಟ್ಟುಹಬ್ಬದ ಕೇಕ್ ತೆಗೆದುಕೊಂಡು  ಶಿಕಾರಿಪುರದಿಂದ ಪುಣೇದಹಳ್ಳಿಗೆ ವಾಪಾಸಾಗುವಾಗ ಪುನೇದಹಳ್ಳಿ ಬಳಿ ಅಪಘಾತ ಸಂಭವಿಸಿತ್ತು. 

ಶಿಕಾರಿಪುರಕ್ಕೆ ಬರುತ್ತಿದ್ದ ಜಾವೇದ್  ಎಂಬವರ ಬೈಕ್ ಹಾಗೂ ಆನಂದ್​ ಇದ್ದ ಬೈಕ್​ ನಡುವೆ  ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಇನ್ನಿಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್​ಗಳಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ ! ಸ್ಟೇಷನ್​ ಪರೇಡ್​ !



ಶಿವಮೊಗ್ಗ ಜಿಲ್ಲೆ  ಭದ್ರಾವತಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌ಗಳಿಗೆ ನಿನ್ನೆ ಪೊಲೀಸರು ಗ್ರಿಲ್ ಮಾಡಿದ್ದಾರೆ. ವಿವಿಧ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ರೌಡಿಶೀಟರ್​ಗಳನ್ನು  ನಿನ್ನೆ  ಭಾನುವಾರ  ಪೊಲೀಸ್ ನಗರವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ಕರೆ ತಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಯಿತು. 

ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರು ರೌಡಿಶೀಟರ್​ಗಳ ಮಾಹಿತಿ ಪಡೆದು ಅವರ ಮೇಲಿನ ಕೇಸ್​ಗಳ ವಿವರ ಪಡೆದರು. ಅಲ್ಲದೆ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಳ್ಗೊಳ್ಳದಂತೆ ಎಚ್ಚರಿಕೆ ನೀಡಿದ್ರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದರು.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು