KARNATAKA NEWS/ ONLINE / Malenadu today/ Aug 21, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌ಗಳಿಗೆ ನಿನ್ನೆ ಪೊಲೀಸರು ಗ್ರಿಲ್ ಮಾಡಿದ್ದಾರೆ. ವಿವಿಧ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ರೌಡಿಶೀಟರ್ಗಳನ್ನು ನಿನ್ನೆ ಭಾನುವಾರ ಪೊಲೀಸ್ ನಗರವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ಕರೆ ತಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಯಿತು.
ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರು ರೌಡಿಶೀಟರ್ಗಳ ಮಾಹಿತಿ ಪಡೆದು ಅವರ ಮೇಲಿನ ಕೇಸ್ಗಳ ವಿವರ ಪಡೆದರು. ಅಲ್ಲದೆ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಳ್ಗೊಳ್ಳದಂತೆ ಎಚ್ಚರಿಕೆ ನೀಡಿದ್ರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದರು.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಭದ್ರಾವತಿ ಪೊಲೀಸರ ದಿಢೀರ್ ನೈಟ್ ಆಪರೇಷನ್! ಕೆಲವೇ ಗಂಟೆಗಳಲ್ಲಿ 105 ಮಂದಿ ವಿರುದ್ಧ ಕೇಸ್
ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಇಂದು ಪವರ್ ಕಟ್ ಜಾರಿ! ಎಲ್ಲೆಲ್ಲಿ? ಪೂರ್ತಿ ವಿವರ ಇಲ್ಲಿದೆ!
