ಕಾಗೋಡು ತಿಮ್ಮಪ್ಪರಿಗೆ ದೇವರಾಜು ಅರಸು ಪ್ರಶಸ್ತಿ! ಹಿರಿಯ ಮುಖಂಡರ ಬಗ್ಗೆ ಸಿದ್ದರಾಮಯ್ಯರ ಮಾತು!

KARNATAKA NEWS/ ONLINE / Malenadu today/ Aug 21, 2023 SHIVAMOGGA NEWS

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ನಡೆದ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಿರಿಯ ಮುಖಂಡ  ಕಾಗೋಡು ತಿಮ್ಮಪ್ಪ ಅವರಿಗೆ  ಅರಸು ಪ್ರಶಸ್ತಿ ಪ್ರದಾನ ಮಾಡಲಾಯ್ತು. ಈ ವೇಳೆ ಮಾತನಾಡಿದ ಸಿಎಂ ಸಿದ್ರಾಮಯ್ಯ  ದೇವರಾಜ ಅರಸರು ಜಾರಿಗೆ ತಂದಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ, ಬಿಜೆಪಿ ಬಂದ ಮೇಲೆ ಉಳ್ಳವನೇ ಭೂಮಿ ಒಡೆಯ ಎನ್ನುವಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ‘ಕಾಗೋಡು ಹೋರಾಟ ಮತ್ತು ಗೇಣಿ ಹೋರಾಟದ ಫಲಾನುಭವಿಗಳು ಮತ್ತು ಯುವಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸುರವರವರೆಗೂ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆ. ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದರು. 

Shivamogga Malenadu Today

ಸಮಾಜವಾದಿ ಚಳವಳಿ ಮತ್ತು ಗೇಣಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜು ಅರಸು ಪ್ರಶಸ್ತಿ ಲಭಿಸಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ’ ಎಂದು ಸಿದ್ದರಾಮಯ್ಯರವರು ಈ ವೇಳೆ ಅಭಿಪ್ರಾಯ ಪಟ್ಟರು.  ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಇದ್ದರು.

ಆಕ್ಸಿಡೆಂಟ್​ನಲ್ಲಿ ಗೆಳಯನ ಸಾವಿನ ಸುದ್ದಿ ಕೇಳಿ ಸ್ನೇಹಿತನಿಗೆ ಹಾರ್ಟ್​ ಅಟ್ಯಾಕ್! ಸಾವಲ್ಲಿ ಒಂದಾದ ಆಪ್ತಮಿತ್ರರು!

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದ ಘಟನೆಯೊಂದು ಜನಮನವನ್ನು ಸೆಳೆಯುತ್ತಿದೆ. ಸಾವಿನ ಸುದ್ದಿಯೊಂದು, ಅಚ್ಚರಿಯಾಗಿಸ್ತಿದ್ದು, ಛೇ ಹೀಗಾಗಬಾರದಿತ್ತು ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.  

ನಡೆದಿದ್ದೇನು? 

ಶಿಕಾರಿಪುರದಲ್ಲಿ ಆಕ್ಸಿಡೆಂಟ್  ಸಂಭವಿಸಿತ್ತು. ಈ : ಅಪಘಾತದಲ್ಲಿ ತನ್ನ ಸ್ನೇಹಿತ   ಸಾವಿಗೀಡಾದನೆಂಬ ಸುದ್ದಿ ಕೇಳಿ ಮೃತನ ಮಿತ್ರನೊಬ್ಬನಿಗೆ ಹೃದಯಾಘಾತವಾಗಿದೆ. ಅಲ್ಲದೆ ಆತನೂ ಸಾವನ್ನಪ್ಪಿದ್ದಾನೆ.  

ಘಟನೆ ವಿವರ?

ಶಿಕಾರಿಪುರ ತಾಲ್ಲೂಕು (Shikaripura Taluk) ಪುನೇದಹಳ್ಳಿಯ ಬಳಿಯಲ್ಲಿರುವ ಕೆಎಸ್​ಆರ್​ಟಿಸಿ ಬಸ್​ ಡಿಪೋ ಬಳಿ ಕಳೆದ  ಶನಿವಾರ ರಾತ್ರಿ  ಎರಡು ಬೈಕ್ ನಡುವೆ ಅಪಘಾತವಾಗಿತ್ತು. ಈ  ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಓರ್ವನನ್ನು ಮಣಿಪಾಲ್‌ಗೆ ದಾಖಲಾಗಿಸಲಾಗಿದೆ. ಸಾವನ್ನಪ್ಪಿದ ಯುವಕ ಆನಂದ್ (30) ಎಂದು ಗುರುತಿಸಲಾಗಿದೆ. 

ಇನ್ನೂಅಪಘಾತದಲ್ಲಿ ಆನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ವಿಷಯ ತಿಳಿದ ಪುಣೇದಹಳ್ಳಿಯ ಯುವಕ ಸಾಗರ್ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ಆನಂದ್ ಮತ್ತು ಯುವರಾಜ್ ಸ್ನೇಹಿತನ ಹುಟ್ಟುಹಬ್ಬದ ಕೇಕ್ ತೆಗೆದುಕೊಂಡು  ಶಿಕಾರಿಪುರದಿಂದ ಪುಣೇದಹಳ್ಳಿಗೆ ವಾಪಾಸಾಗುವಾಗ ಪುನೇದಹಳ್ಳಿ ಬಳಿ ಅಪಘಾತ ಸಂಭವಿಸಿದೆ. 

ಶಿಕಾರಿಪುರಕ್ಕೆ ಬರುತ್ತಿದ್ದ ಜಾವೇದ್  ಎಂಬವರ ಬೈಕ್ ಹಾಗೂ ಆನಂದ್​ ಇದ್ದ ಬೈಕ್​ ನಡುವೆ  ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಇನ್ನಿಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್​ಗಳಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ ! ಸ್ಟೇಷನ್​ ಪರೇಡ್​ !

ಶಿವಮೊಗ್ಗ ಜಿಲ್ಲೆ  ಭದ್ರಾವತಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌ಗಳಿಗೆ ನಿನ್ನೆ ಪೊಲೀಸರು ಗ್ರಿಲ್ ಮಾಡಿದ್ದಾರೆ. ವಿವಿಧ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ರೌಡಿಶೀಟರ್​ಗಳನ್ನು  ನಿನ್ನೆ  ಭಾನುವಾರ  ಪೊಲೀಸ್ ನಗರವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ಕರೆ ತಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಯಿತು. 

ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರು ರೌಡಿಶೀಟರ್​ಗಳ ಮಾಹಿತಿ ಪಡೆದು ಅವರ ಮೇಲಿನ ಕೇಸ್​ಗಳ ವಿವರ ಪಡೆದರು. ಅಲ್ಲದೆ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಳ್ಗೊಳ್ಳದಂತೆ ಎಚ್ಚರಿಕೆ ನೀಡಿದ್ರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದರು.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Leave a Comment