ಕೋಟೆ ಮಾರಿಕಾಂಬಾ ಜಾತ್ರೆ | ಭಂಡಾರದ ಬಣ್ಣದಲ್ಲಿ ಹೊಳೆವ ಧಾರ್ಮಿಕ ಭಾವೈಕತೆಯ ಈ ಸ್ಟೋರಿ ಓದಲೇಬೇಕು!

kote Marikamba jatre | This story of religious integration that shines in the colour of bhandra is a must-read!

ಕೋಟೆ ಮಾರಿಕಾಂಬಾ ಜಾತ್ರೆ  | ಭಂಡಾರದ ಬಣ್ಣದಲ್ಲಿ ಹೊಳೆವ ಧಾರ್ಮಿಕ ಭಾವೈಕತೆಯ ಈ ಸ್ಟೋರಿ ಓದಲೇಬೇಕು!
kote Marikamba jatre

shivamogga Mar 13, 2024   ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬಾ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಗದ್ದುಗೆ ಏರಿ ಮಾರಿಕಾಂಬೆಗೆ ಪೂಜೆ ಸಲ್ಲಿಸಲು ಜನರ ಜಾತ್ರೆಯೇ ಹರಿದುಬಂದಿದೆ. ಮಾರಿಗೆ ಪೂಜೆ ಸಲ್ಲಿಸಿ ತೀರ್ಥ ಕೊಂಡೊಯ್ದು ಮನೆಯಲ್ಲಿ ಕುರಿ ಕಡಿದು ಅಮ್ಮನಿಗೆ ಸಮರ್ಪಿಸುತ್ತಿದ್ದಾರೆ ಮಂದಿದೆ. 

ಇನ್ನೂ ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನ ಸಹ ಮಾಡಲಾಗಿದೆ. ಮೇನ್ ಮಿಡ್ಲ್ ಸ್ಕೂಲ್ ಹಾಗೂ ಶಿವಮೊಗ್ಗದ ಪ್ರಸಿದ್ದ ಸೇಕ್ರೆಡ್ ಹಾರ್ಟ್​ ಚರ್ಚ್ ಆವರಣದಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಚಿತ್ರವೆಂದರೆ, ಪಾಲಿಕೆಯ ವತಿಯಿಂದ ಗಾಂಧಿ ಬಜಾರ್​ನ ಸಮೀಪದಲ್ಲಿಯೇ ಇರುವ ಪಾರ್ಕಿಂಗ್​​ ಕಟ್ಟಡದಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ಪಾರ್ಕಿಂಗ್​ ಕಲ್ಪಿಸಲು ಸಾಧ್ಯವಾಗಿಲ್ಲ. ಸಾರ್ವಜನಿಕರ ಸೇವೆಗೆ ಇಷ್ಟೊತ್ತಿಗೆ ಕಟ್ಟಡ ಲಭ್ಯವಾಗಿದ್ದರೇ ಮಾರಿ ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲವಾಗುತ್ತಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇನ್ನೊಂದೆಡೆ ಪಾಲಿಕೆಯ ಆಯುಕ್ತರು ಹೇಳುವಂತೆ ಕಟ್ಟಡ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ನೀತಿ ಸಂಹಿತೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆಯಂತೆ. 

ಇನ್ನೊಂದು ಕಡೆ ಈ ಸಲದ ಮಾರಿ ಜಾತ್ರೆಗೆ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಉಚಿತವಾಗಿ ಪಾರ್ಕಿಂಗ್​ಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಮಾರಿಕಾಂಬಾ ಸೇವಾ ಸಮಿತಿ ಜಾತ್ರೆಗೆ ಸಿದ್ದತೆ ನಡೆಸಲುವಾಗಲೇ ಚರ್ಚ್​ನ ಆಡಳಿತ ಮಂಡಳಿಯನ್ನ ಭೇಟಿ ಮಾಡಿ ಉಚಿತ ಸ್ಥಳಾವಕಾಶ ನೀಡುವಂತೆ ಕೋರಿತ್ತು. ಅದರಂತೆ ಚರ್ಚ್ನ ಆಡಳಿತ ಮಂಡಳಿ ಪಾರ್ಕಿಂಗ್​ಗೆ ಅವಕಾಶ ಮಾಡಿಕೊಟ್ಟಿದೆ. 

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಫಾದರ್ ಸ್ಕ್ಯಾನಿ ಡಿಸೋಜಾ, ಶ್ರೀ ಮಾರಿಕಾಂಬಾ ಜಾತ್ರೆ ನಮ್ಮೂರ ಹಬ್ಬ. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಭಾಗಿಯಾಗುತ್ತಾರೆ. ಜಾತ್ರಾ ಸಮಿತಿಯ ಮನವಿ ಮೇರೆಗೆ ವಾಹನ ನಿಲುಗಡೆಗೆ ಉಚಿತ ಅವಕಾಶ ನೀಡುವ ನೀಡುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶ ನೀಡಲಾಗಿದೆ. ದೇವಿಯ ಜಾತ್ರೆ ಯಾವುದೆ ಅಡೆತಡೆಗಳಿಲ್ಲದೆ ಶಾಂತಿಯುತವಾಗಿ ನಡೆಯಲಿ. ಜಾತ್ರೆಯಲ್ಲಿನಾವು ಸಹ ಪಾಲ್ಗೊಳ್ಳಲಿದ್ದೇವೆ ಎಂದಿದ್ದಾರೆ.