ಪಕ್ಷೇತರರಾಗಿ ಸ್ಪರ್ಧೆ ನಿಕ್ಕಿನಾ? ಕಣ್ಣಿಗೆ ಸುಣ್ಣ ಹಾಕಿದ್ಯಾರು?ಸೊಸೆ, ಮಗನ ವಿಚಾರಕ್ಕೆ ಈಶ್ವರಪ್ಪ ಹೇಳಿದ್ದೇನು? ಆ ಸಭೆ ನಿರ್ಣಾಯಕನಾ?

shivamogga Mar 13, 2024   ಹಾವೇರಿ ಟಿಕೆಟ್ ಗೊಂದಲದ ನಡುವೆ ಇವತ್ತು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಸುದ್ದಿಗೋಷ್ಟಿ ನಡೆಸಿದ್ದಾರೆ. ಸಹಜವಾಗಿಯೇ ಇದು ತೀವ್ರ ಕುತೂಹಲ ಮೂಡಿಸಿತ್ತು. ಈಶ್ವರಪ್ಪನವರು ಬಂಡಾಯ ಸಾರುವ ಸುದ್ದಿಗೋಷ್ಟಿ ಇದಾಗಲಿದೆ ಎಂದೇ ಹಲವರು ಎಣಿಸಿದ್ದರು. ಇದಕ್ಕೆ ಪೂರಕವಾಗಿ ನನ್ನ ಸುದ್ದಿಗೋಷ್ಟಿ ಕರೆಯುತ್ತಿದ್ದಂತೆ ವರಿಷ್ಟರಿಗೂ ಕುತೂಹಲ ಮೂಡಿತ್ತು ಎಂದು ಸ್ವತಃ ಈಶ್ವರಪ್ಪನವರು ಹೇಳಿದ್ದಾರೆ. 

ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಾ ಅವರು ನೀಡಿದ ಹೇಳಿಕೆಯನ್ನು ಗಮನಿಸುವುದಾದರೆ, ಅವರು ಈ ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ  ಚುನಾವಣಾ ರಾಜಕೀಯಕ್ಕೆ  ನಿವೃತ್ತಿ ಘೋಷಿಸಿದ ಬಳಿಕ  ಪ್ರಧಾನಿ ನರೇಂದ್ರ ಮೋದಿ ನನಗೆ ಶಿಸ್ತಿನ ರಾಜಕಾರಣಿ ಎಂದು ಕರೆ ಮಾಡಿ ಹೊಗಳಿದ್ದರು. ಆನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಕೇಳಿದ್ದೆ. ಆದರೆ, ಆಗ ಅಮಿತ್ ಶಾ  ನಿಮ್ಮ ಸೊಸೆಗೆ ಟಿಕೆಟ್ ಕೊಡುತ್ತೇವೆ ಅಂದಿದ್ದರು. ನಾನು ನನ್ನ ಸೋಸೆಯನ್ನು ದೇವಸ್ಥಾನಕ್ಕೆ ಬಿಟ್ಟರೆ ಹೊರಗೆ ಕಳಿಸಲ್ಲ ಎಂದಿದ್ದೆ. 

ಮೇಲಾಗಿ ನಾನಾಗಿ ಹಾವೇರಿಗೆ ಹೋಗಿಲ್ಲ.  ಹಾವೇರಿ ಚುನಾವಣೆ ಹೋಗುವ ಮೊದಲು ಮಾಜಿ ಸಿಎಂ ಯಡಿಯೂರಪ್ಪ ನವರನ್ನು ಭೇಟಿ ಮಾಡಿದ್ದೆ. ಆಗ ಯಡಿಯೂರಪ್ಪ ನವರು ಟಿಕೆಟ್ ಸಹ ಕೊಡುತ್ತೇನೆ ನಾನು ಓಡಾಡುತ್ತೇನೆ ಎಂದಿದ್ದರು. ಈಗಲೂ ನನಗೆ ನಂಬಿಕೆ ಇದೆ ಟಿಕೆಟ್ ಸಿಗುತ್ತೆ. ನಾನು ಏನಾದರೂ ಹೇಳಿ ಬಿಡಬಹುದು ಎಂದು ವರಿಷ್ಟರಿಗೆ ಕುತೂಹಲ ಮೂಡಿದೆ.

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಅಂತಾ ನನ್ನ ಅಭಿಮಾನಿಯೊಬ್ಬರು ಹಾಕಿದ್ದಾರೆ. ಇಡೀ ಜಿಲ್ಲೆಯ ಹಿತೈಷಿಗಳ ಜೊತೆ ಚೆರ್ಚೆ ಮಾಡಿ ತೀರ್ಮಾನ ತಿಳಿಸುತ್ತೇನೆ. ನಮ್ಮ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ ನೀವು ಪಕ್ಷೇತರ ನಿಲ್ಲ ಬೇಕು ಎಂದು ಈಗ ಸಭೆ ಕರೆದಿದ್ದಾರೆ ಆ ಸಭೆಗೆ ಭಾಗವಹಿಸಿ ಆಮೇಲೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸುತ್ತೇನೆ ಎಂದಿದ್ದಾರೆ. 

ಇದೇ ವೇಳೇ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಯಾಗ್ತೀನಿ ಅಂತಾ ನಾನು ಹೇಳಿದ್ದೀನಾ ಎಂದು ಪ್ರಶ್ನಿಸಿದ ಅವರು, ಬೆಂಬಲಿಗರು ಒತ್ತಾಯ ಮಾಡ್ತಾ ಇದ್ದಾರಾ ಅಷ್ಟೇ ಈ ಬಗ್ಗೆ ನಾನು ತೀರ್ಮಾನ ಮಾಡಿಲ್ಲ,  ಸಭೆ ಬಳಿಕ ತೀರ್ಮಾನ ಮಾಡ್ತೇನೆ ಎಂದ ಈಶ್ವರಪ್ಪನವರು ಪ್ರಹ್ಲಾದ್ ಜೋಷಿ ನಮ್ಮ ಮನೆಗೆ ಬಂದಿದ್ರು, ಚುನಾವಣೆ ಬಗ್ಗೆ ಚರ್ಚೆ ಆಗಿದೆ, ಅದೆಲ್ಲಾ ಇಲ್ಲಿ ಹೇಳೋಕೆ ಆಗೋಲ್ಲ, ಚರ್ಚೆ ಆಗಿರುವುದು ಹೌದು, ನಾವಿಬ್ಬರೂ ಸ್ನೇಹಿತರು ಹಾಗಾಗಿ ಚರ್ಚೆ ಮಾಡಿದ್ದೀವಿ. ಬಲಿಪಶು ಅಂತಾ ನಾನೇ ಅಂದುಕೊಂಡಿಲ್ಲ, ನೀವು ಯಾಕೆ ಅಂದುಕೊಳ್ತೀರಾ, ನಿಮ್ಗೆ ಕುತೂಹಲ ಇರಲಿ ಎಂದಷ್ಟೆ ಹೇಳಿದ್ದಾರೆ.  

Leave a Comment