ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತಮ್ಮ ಸ್ಪರ್ಧೆ ಬಗ್ಗೆ ಹೇಳಿದ್ದೇನು?

shivamogga Mar 13, 2024  Shimoga Lok Sabha constituency Congress candidate Geeta Shivraj Kumar  ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಗೀತಾ ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಈ ಸಲ ಗೆಲುವು ನನ್ನದೇ ಎಂದಿರುವ ಅವರು, ಶಿವಮೊಗ್ಗದಲ್ಲಿ ಈಗಾಗಲೇ ಚುನಾವಣಾ ಕಾರ್ಯಕ್ಕಾಗಿ ಮನೆ ಮಾಡಲಾಗಿದೆ. ಈ ಸಲ ಗೆದ್ದೆ ಗೆಲ್ಲುತ್ತೇನೆ ಎಂದಿದ್ದಾರೆ. ಒಂಬತ್ತು ವರ್ಷಗಳ ಹಿಂದ ಚುನಾವಣೆಗೆ ಕೇವಲ 17 ದಿನ ಕೆಲಸ ಮಾಡಿದ್ದೆ ಆಕಾರಣದಿಂದ ಸೋಲಾಯ್ತು ಎನಿಸುತ್ತದೆ. ಈ ಸನ್ನಿವೇಶ ಹಾಗಿಲ್ಲ ಓಡಾಟಕ್ಕೂ ಸಮಸ್ಯೆಯಿಲ್ಲ ಎಂದಿದ್ದಾರೆ. 

ಇನ್ನೂ ಈ ಸಲ ಹೆಚ್ಚು ಸಮಯವನ್ನು ಶಿವಮೊಗ್ಗದಲ್ಲಿ ಕಳೆಯುತ್ತೇನೆ ಎಂದಿರುವ ಅವರು ನನ್ನ ಸಹೋದರ ನನ್ನ ಬೆಂಬಲಕ್ಕಿದ್ದಾರೆ. ಪತಿ ಶಿವರಾಜ್ ಕುಮಾರ್​ ಕೂಡ ಬರುತ್ತಾರೆ ಎಂದಿದ್ದಾರೆ. ಶಿವರಾಜ್ ಕುಮಾರ್ ಕೂಡ ಈ ಬಗ್ಗೆ ಮಾತನಾಡಿದ್ದು ಪತ್ನಿಯ ಚುನಾವಣಾ ಸ್ಪರ್ಧೆ ಬಗ್ಗೆ ಮಾತನಾಡಿದ್ದು ನನ್ನ ಒತ್ತಾಯಕ್ಕೆ ಯಾರು ಸಹ ಪ್ರಚಾರಕ್ಕೆ ಬರುವುದು ಬೇಡ. ಇದು ಚುನಾವಣೆ ನಾನು ಗೆಲ್ಲುತ್ತೇನೆ ಎನ್ನುವ ಭರವಸೆ ಇರಬೇಕು. ನನ್ನ ಬೆಂಬಲ ಖಂಡಿತ ಇರುತ್ತದೆ ಎಂದಿದ್ದಾರೆ. 

Leave a Comment