ಶಿವಮೊಗ್ಗ ಶಾರ್ಟ್ ನ್ಯೂಸ್: ಬೈಕ್‌ನಿಂದ ಬಿದ್ದು ಲಾರಿ ಚಾಲಕ ಸಾವು | ಬೈಕ್ ಡಿಕ್ಕಿಯಾಗಿ ವೃದ್ಧ ಮೃತ್ಯು | ಚೀಟಿ ಬರೆದಿಟ್ಟು ಮನೆ ತೊರೆದ ವಿದ್ಯಾರ್ಥಿ

ಹಂಚಿಕೊಳ್ಳಿ
WhatsApp Facebook X Telegram
Shivamogga Morning News, Shivamogga Short News,
Shivamogga Morning News, Shivamogga Short News,

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಓದಲು ಇಷ್ಟವಿಲ್ಲ ಎಂದು ಚೀಟಿ ಬರೆದಿಟ್ಟು 14 ವರ್ಷದ ಬಾಲಕನೊಬ್ಬ ಹಣ, ಚಿನ್ನಾಭರಣ ಹಾಗೂ ಬಟ್ಟೆಗಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾನೆ.

ಶಿವಮೊಗ್ಗ ಶಾರ್ಟ್ ನ್ಯೂಸ್/ ಭದ್ರಾವತಿಯಲ್ಲಿ ಬೈಕ್‌ನಿಂದ ಬಿದ್ದು ಲಾರಿ ಚಾಲಕ ಸಾವು

ಭದ್ರಾವತಿ ತಾಲ್ಲೂಕಿನ ಸೀತಾರಾಮಪುರ ಗ್ರಾಮದ ಬಳಿ ದ್ವಿಚಕ್ರ ವಾಹನ ಚಾಲಕ ನಿಯಂತ್ರಣ ಕಳೆದುಕೊಂಡು ಬಿದ್ದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಕೂಡ್ಲಿಗೆರೆಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಬೀದಿ ನಿವಾಸಿ, ಲಾರಿ ಚಾಲಕ ಕೆ. ಚಿದಾನಂದ (48) ಮೃತರು.ನವೆಂಬರ್ 14ರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಚಿದಾನಂದ, ಕೂಡ್ಲಿಗೆರೆ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಕೋಡಿಹೊಸೂರು ಗ್ರಾಮದ ನಾಗೇಂದ್ರ ಅವರ ಬಳಿ ಗ್ರಾಮಕ್ಕೆ ಬಿಡುವಂತೆ ಕೇಳಿಕೊಂಡು ಹಿಂಬದಿ ಕುಳಿತಿದ್ದರು. ಸೀತಾರಾಮಪುರದ ರಸ್ತೆಯಲ್ಲಿದ್ದ ದಿಣ್ಣೆಯ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ ಎನ್ನಲಾಗಿದೆ. ಈ ಸಂಬಂಧ ಚಿದಾನಂದ ಅವರ ಪತ್ನಿ ನಾಗೇಂದ್ರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಓದಲು ಇಷ್ಟವಿಲ್ಲವೆಂದು ಚೀಟಿ ಬರೆದಿಟ್ಟು 14 ವರ್ಷದ ಬಾಲಕ ನಾಪತ್ತೆ

ಚಿಕ್ಕಮಗಳೂರಿನಲ್ಲಿ ಓದಲು ಇಷ್ಟವಿಲ್ಲ, ನನ್ನನ್ನು ಹುಡುಕಬೇಡಿ ಎಂದು ಚೀಟಿ ಬರೆದಿಟ್ಟು 14 ವರ್ಷದ ಬಾಲಕನೊಬ್ಬ ಮನೆಯಿಂದ ನಾಪತ್ತೆಯಾಗಿದ್ದಾನೆ. ಇಲ್ಲಿನ ತಾಲ್ಲೂಕು ಒಂದರ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಪೋಷಕರು ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಚೀಟಿ ಬರೆದಿಟ್ಟು ಮನೆಯಿಂದ ಹೊರಟಿದ್ದಾನೆ. ಮನೆಯಲ್ಲಿ ಇದ್ದ ₹15 ಸಾವಿರ ಮೌಲ್ಯದ 15 ಗ್ರಾಂ ಚಿನ್ನದ ಸರ ಹಾಗೂ ಬಟ್ಟೆಗಳನ್ನು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಈಸಂಬಂಧ ಕೇಸ್ ಆಗಿದ್ದು ಜಿಲ್ಲೆಯ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ; ವೃದ್ಧ ಸಾವು

ಶಿವಮೊಗ್ಗ ನಗರದ ಹರಿಗೆಯ ಬಿ.ಎಚ್. ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹರಿಗೆ ನಿವಾಸಿ ಜಯಣ್ಣ (62) ಮೃತರು. ಶನಿವಾರ ಆಶಿಶ್ ಕೆ. ಶ್ಯಾಮ್ ಚಲಾಯಿಸುತ್ತಿದ್ದ ಬೈಕ್ ಜಯಣ್ಣ ಅವರಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಘಟನಾ ಸ್ಥಳಕ್ಕೆ ಪೂರ್ವ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor