ಕರೆಂಟ್‌ ಕಂಬಕ್ಕೆ ಬೈಕ್‌ ಡಿಕ್ಕಿ | ತೀರ್ಥಹಳ್ಳಿ ನಿವಾಸಿ ಸೇರಿ ಸ್ಥಳದಲ್ಲಿಯೇ ಇಬ್ಬರ ಸಾವು|

Bike hits electric pole | Two persons, including a resident of Thirthahalli, died on the spot.

ಕರೆಂಟ್‌ ಕಂಬಕ್ಕೆ ಬೈಕ್‌ ಡಿಕ್ಕಿ | ತೀರ್ಥಹಳ್ಳಿ ನಿವಾಸಿ ಸೇರಿ ಸ್ಥಳದಲ್ಲಿಯೇ ಇಬ್ಬರ ಸಾವು|
Bike collision, Thirthahalli, Holehonnur, Chitradurga,

Shivamogga Apr 19, 2024  ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಆಗರದಹಳ್ಳಿ ಕ್ರಾಸ್‌ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಇಬ್ಬರು ಬೈಕ್‌ ಸವಾರರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

 

ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೆ ಸಾವನಪ್ಪಿದ್ದಾರೆ. ಮೃತರ ಪೈಕಿ ಓರ್ವರನ್ನ ತೀರ್ಥಹಳ್ಳಿ ಹೊಸೂರು ಮೂಲದ ಎಚ್.ಆರ್ ಧನುಷ್ ಎಂದು ಗುರುತಿಸಲಾಗಿದೆ. 

ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು ಮೃತರು ಬೈಕ್‌ನಲ್ಲಿ ಚಿತ್ರದುರ್ಗ ಕಡೆಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್‌ ಸವಾರ ಟರ್ನ್‌ ತೆಗೆದುಕೊಂಡಿದ್ದಾನೆ. ಅದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ, ಬೈಕ್‌ ಸವಾರರು ಕರೆಂಟ್‌ ಕಂಬಕ್ಕೆ ಗುದ್ದಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.