ದರೋಡೆಕೋರರಿದ್ದಾರೆ ಎಚ್ಚರಿಕೆ ! ರಸ್ತೆ ಬದಿಯಲ್ಲಿದ್ದವರಿಗೆ ಚಾಕು ತೋರಿಸಿ ರಾಬರಿ! ಪಲ್ಸರ್‌ ಬೈಕ್‌ನಲ್ಲಿ ಬಂದವರಿಂದ 2 ಕಡೆ ಕೃತ್ಯ

The robbery took place at two places at Holehonnur police station limits in Shivamogga

ದರೋಡೆಕೋರರಿದ್ದಾರೆ ಎಚ್ಚರಿಕೆ ! ರಸ್ತೆ ಬದಿಯಲ್ಲಿದ್ದವರಿಗೆ ಚಾಕು ತೋರಿಸಿ ರಾಬರಿ! ಪಲ್ಸರ್‌ ಬೈಕ್‌ನಲ್ಲಿ ಬಂದವರಿಂದ 2 ಕಡೆ ಕೃತ್ಯ
Holehonnur police station

Shivamogga Mar 20, 2024  Holehonnur police station ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ಕಳೆದ ಸೋಮವಾರ ಎರಡು ಕಡೆ ದರೋಡೆ ಪ್ರಕರಣ ನಡೆದಿದೆ. ಘಟನೆ ಸಂಬಂಧ ಒಂದು ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. 

ಸ್ಥಳೀಯ ಮಾಧ್ಯಮ ವರದಿ ಪ್ರಕಾರ, ಅರದೋಟ್ಟು ಗ್ರಾಮದ ಬಳಿ ವ್ಯಕ್ತಿ ಮೇಲೆ ಮೂವರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ₹22,000 ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಕಳೆದ ಸೋಮವಾರ ಸಂಜೆ ಘಟನೆ ನಡೆದಿದ್ದು,  ಭದ್ರಾವತಿಯಿಂದ ಕೆಲಸ ಮುಗಿಸಿಕೊಂಡು  ಮನೆಗೆ ವಾಪಸಾಗುತ್ತಿದ್ದ, ವ್ಯಕ್ತಿಯೊಬ್ಬರನ್ನ ಪಲ್ಸರ್‌ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ಧಾರೆ. ಆ ಬಳಿಕ ಚಾಕು ತೋರಿಸಿ ಹಣ ಕೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಅವರಿಗೆ  ಚಾಕುವಿನಿಂದ ಇರಿದಿದ್ದಾರೆ.  ಬಳಿಕ 22,000 ರೂಪಾಯಿ ದೋಚಿ ಪರಾರಿಯಾಗಿದ್ದಾರೆ. 

ಇನ್ನೂ ಇದೇ ಆರೋಪಿಗಳು ಸಿದ್ದೀಪುರ- ಸನ್ಯಾಸಿಕೋಡಮಗ್ಗೆ ನಡುವೆ ಭೂಪಾಳಂ ಫ್ಯಾಕ್ಟರಿ ಏರಿಯಾದಲ್ಲಿ ಶಿಕ್ಷರೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿದ ಚಾಕು ತೋರಿಸಿ ಹೆದರಿಸಿದ್ದಾರೆ. ಅಷ್ಟರಲ್ಲಿ ಶಿಕ್ಷಕ ಅಲ್ಲಿಂದ ತಪ್ಪಿಸಿಕೊಂಡು ಓಡಿ, ಬಚಾವ್‌ ಆಗಿದ್ದಾರೆ ಎನ್ನಲಾಗಿದೆ