ತುಂಗಾನದಿಯಲ್ಲಿ ಈಜಾಡುತ್ತಿದ್ದವರ ಮೇಲೆ ಗುಂಪು ದಾಳಿ! ಓರ್ವನ ಮೇಲೆ ಗಂಭೀರ ಹಲ್ಲೆ! ಸ್ಥಳೀಯರಿಂದ ಬಚಾವ್‌!

ಹಂಚಿಕೊಳ್ಳಿ
WhatsApp Facebook X Telegram

Shivamogga Mar 20, 2024 Tunga river   ಶಿವಮೊಗ್ಗದ ಮತ್ತೂರು ಸಮೀಪ ತುಂಗಾ ಹೊಳೆಯಲ್ಲಿ ಈಜಾಡುತ್ತಿದ್ದ ಯುವಕರನ್ನ ಏಳೆಂಟು ಮಂದಿ ಸೇರಿಕೊಂಡು ವಿನಾಕಾರಣ ಹಲ್ಲೆ ಮಾಡಿದ ಸಂಬಂಧ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆ ಏತಕ್ಕೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ . ಹಾಗೆಯೇ ಪ್ರಕರಣದ ಆರೋಪಿಗಳು ಯಾರು ಎಂಬುದು ಸಹ ಹಲ್ಲೆಗೊಳಗಾದವರಿಗೆ ತಿಳಿದಿಲ್ಲ. 

ಕಳೆದ 18 ರಂದು ತುಂಗಾ ನದಿಯಲ್ಲಿ ಈಜಾಡಲು ಮೂವರು ಯುವಕರು ತೆರಳಿದ್ದಾರೆ. ಈ ವೇಳೇ ಅಕ್ರಮ ಕೂಟ ಕಟ್ಟಿಕೊಂಡು ಬಂದ ಗುಂಪೊಂದು, ಈಜಾಡುತ್ತಿದ್ದವರ ಪೈಕಿ ಓರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ತಡೆಯಲು ಬಂದ ಆತನ ಸ್ನೇಹಿತರ ಮೇಲೂ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಒಬ್ಬಾತ ತನ್ನ ಉಂಗುರದಿಂದ ಯುವಕನ ಹಣೆಗೆ ಹೊಡೆದಿದ್ದು, ಇದರಿಂದ ಆತನ ತಲೆಯಲ್ಲಿ ಗಂಭೀರ ಗಾಯವಾಗಿದೆ. ಇನ್ನೂ ಕೂಗಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಓಡಿಬರುತ್ತಲೇ ಹಲ್ಲೆ ಮಾಡಿದ ಅಪರಿಚಿತರು ಸ್ಥಳದಿಂದ ಓಡಿ ಹೋಗಿದ್ದಾರೆ. 

ಸದ್ಯ ಪ್ರಕರಣ ಸಂಬಂಧ ಅಕ್ರಮ ಕೂಟ, ಉದ್ದೇಶ ಪೂರ್ವ ಹಲ್ಲೆ, ಉದ್ದೇಶ ಪೂರ್ವಕವಾಗಿ ಮಾರಕಾಸ್ತ್ರದಿಂದ ಹಲ್ಲೆ ಆರೋಪದ ಅಡಿಯಲ್ಲಿ  IPC 1860 (U/s-323,324,149) ಕೇಸ್‌ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor