ತುಂಗಾ ನದಿಯಲ್ಲಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು! ಒರ್ವನ ಮೃತದೇಹ ಪತ್ತೆ ! ಇನ್ನೊಬ್ಬನಿಗಾಗಿ ಶೋಧ
Two students drowned in Tunga river! A dead body was found! Search for another ತುಂಗಾ ನದಿಯಲ್ಲಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು! ಒರ್ವನ ಮೃತದೇಹ ಪತ್ತೆ ! ಇನ್ನೊಬ್ಬನಿಗಾಗಿ ಶೋಧ

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS
ಮೀನು ಹಿಡಿಯಲು ಹೋಗಿದ್ದ ಇಬ್ಬರು ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೊಯಿನ್ ಖಾನ್, ಹಾಗೂ ಅಂಜುಂಖಾನ್ ಮೃತ ದುರ್ದೈವಿಗಳಾಗಿದ್ದು, ಇಬ್ಬರ ಪೈಕಿ ಓರ್ವನ ಶವ ಪತ್ತೆಯಾಗಿದೆ. ಇಬ್ಬರು 18 ವರ್ಷದವರು ಎನ್ನಲಾಗಿದೆ.
ಶಿವಮೊಗ್ಗದ ಕುರುಬರ ಪಾಳ್ಯದ ಸಮೀಪ ಮೀನು ಹಿಡಿಯಲು ತುಂಗಾ ನದಿಗೆ ತೆರಳಿದ್ದಾರೆ. ಈ ವೇಳೆ ಮೀನು ಹಿಡಿಯುವಾಗ ಓರ್ವ ಕಾಲು ಹಾರಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಬಚಾವ್ ಮಾಡಲು ಇನ್ನೊಬ್ಬ ನೀರಿಗೆ ಇಳಿದಿದ್ದಾನೆ. ಇಬ್ಬರು ಸುಳಿಗೆ ಸಿಲುಕಿ ನೀರು ಪಾಲಾಗಿದ್ದಾರೆ.
ಇನ್ನೂ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತರ ಶೋಧಾ ಕಾರ್ಯಾಚರಣೆ ಆರಂಭಿಸಿತು. ಈ ವೆಳೆ ಮೊಯಿನ್ ಖಾನ್ ಶವ ಪತ್ತೆಯಾಗಿದೆ. ಇನ್ನೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ.
ಬಿಸಿಎ ವಿದ್ಯಾರ್ಥಿಯಾಗಿದ್ದ ಮೊಯಿನ್ ಖಾನ್, ಬಿಎ ವಿದ್ಯಾರ್ತಿ ಅಂಜುಂ ಖಾನ್, ಮೀನು ಹಿಡಿಯಲು ಬಂದಿದ್ದೆ ದುರಂತಕ್ಕೆ ಕಾರಣವಾಯ್ತು ಎಂದು ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ