ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್​ಪ್ರೆಸ್​​ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?

A report on high speed Vandebharat Express train running between Shimoga and Bangaloreಶಿವಮೊಗ್ಗ ಬೆಂಗಳೂರಿನ ನಡುವೆ ಹೈಸ್ಪೀಡ್​ ವಂದೇಭಾರತ್ ಎಕ್ಸ್​ಪ್ರೆಸ್​ ಟ್ರೈನ್ ಸಂಚಾರದ ಬಗ್ಗೆ ಒಂದು ವರದಿ

ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್​ಪ್ರೆಸ್​​ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS 

ಶಿವಮೊಗ್ಗಕ್ಕೆ ಒಂದಲ್ಲ ಒಂದು ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು, ಇದೀಗ ಲೋಕಸಭಾ ಚುನಾವಣೆಗೂ ತುಸು ಮೊದಲು ಶಿವಮೊಗಕ್ಕೆ ವಂದೇ ಭಾರತ್​  ಟ್ರೈನ್ ಬರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ಓಡಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ  ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ಕಳೆದ ಮೇ ನಲ್ಲಿ ನಡೆದಿದ್ದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. 

ಶಿವಮೊಗ್ಗದಲ್ಲಿ ಈಗಾಗಲೇ ವಿಮಾನ ನಿಲ್ದಾಣ ಆರಂಭವಾಗಿದೆ. ಅದರ ಜೊತೆಯಲ್ಲಿ ಬೆಂಗಳೂರು-ಶಿವಮೊಗ್ಗ ನಡುವೆ ವಂದೇ ಭಾರತ್ ಎಕ್ಸ್​ಪ್ರೆಸ್  ರೈಲು ಸಂಚರಿಸುವಂತಾಗಲಿ ಎಂಬುದು ಮಲೆನಾಡಿಗರ ಆಶಯವಾಗಿದೆ. ಸದ್ಯದ ಪ್ರಸ್ತಾವದ ಪ್ರಕಾರ, ರಾಜ್ಯ 10 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ನಡೆಲಿದೆ. ಇದರಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸಹ ಇದೆ. 

ಇನ್ನೂ ಇತ್ತೀಚಿಗೆ ಈ ಬಗ್ಗೆ ಮಾತನಾಡಿರುವ ಸಂಸದ  ಬಿ. ವೈ. ರಾಘವೇಂದ್ರ ಬೆಂಗಳೂರು-ಶಿವಮೊಗ್ಗ ವಂದೇ ಭಾರತ್‌ ರೈಲು ವಂದೇ ಭಾರತ್‌ ರೈಲಿನ ಅಗತ್ಯಗಳಲ್ಲಿ ವಿದ್ಯುತ್ ಲೇನ್ ಮುಖ್ಯ. ಸದ್ಯ ಈ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.  ಜನ ಶತಾಬ್ದಿ ರೈಲು ಎಲೆಕ್ಟ್ರಿಕ್ ಇಂಜಿನ್ ಮೂಲಕ ಸಂಚರಿಸುತ್ತಿದೆ  ಡಿಸೆಂಬರ್ ವೇಳೆಗೆ ವಂದೇ ಭಾರತ್ ಶಿವಮೊಗ್ಗಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದರು.

ಇನ್ನೂ  ನೈಋತ್ಯ ರೈಲ್ವೆಯು ರಾಜ್ಯಕ್ಕೆ ಸಂಬಂಧಿಸಿದ ಸುತ್ತೋಲೆಯೊಂದರಲ್ಲಿ ಕರ್ನಾಟಕದ ಹತ್ತು ಮಾರ್ಗಗಳ ಪೈಕಿ ಶಿವಮೊಗ್ಗ ಬೆಂಗಳೂರು ಕೂಡ ಸೇರ್ಪಡೆಗೊಂಡಿತ್ತು. ಈ ಎಲ್ಲಾ ಬೆಳವಣಿಗಳು ಅಂದುಕೊಂಡಂತೆ ಕೈಗೂಡಿದರೇ ಡಿಸೆಂಬರ್ ಹೊತ್ತಿಗೆ ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್​  ಎಕ್ಸ್​ಪ್ರೆಸ್​ ಟ್ರೈನ್ ಓಡಾಡಲಿದೆ. 

ಇನ್ನಷ್ಟು ಸುದ್ದಿಗಳು