ಶಿವಮೊಗ್ಗದಲ್ಲಿಯೇ ರೈತರಿಗೆ ಎರಡು ದಿನ ವಿಶೇಷ ಟ್ರೈನಿಂಗ್! ವಿವರ ಇಲ್ಲಿದೆ

Two days special training for farmers in Shivamogga Here's the details

ಶಿವಮೊಗ್ಗದಲ್ಲಿಯೇ ರೈತರಿಗೆ ಎರಡು ದಿನ ವಿಶೇಷ ಟ್ರೈನಿಂಗ್! ವಿವರ ಇಲ್ಲಿದೆ
Two days special training for farmers in Shivamogga Here's the details

SHIVAMOGGA  |  Jan 6, 2024  |   ಶಿವಮೊಗ್ಗದಲ್ಲಿ ರೈತರಿಗಾಗಿ ವಿಶೇಷ ತರಭೇತಿಯನ್ನು ಹಮ್ಮಿಕೊಳ್ಳಳಲಾಗಿದೆ. ಈ ಸಂಬಂಧ ಮಾಹಿತಿ ಇಲ್ಲಿದೆ. 

ಬೀದರ್‌ನ ಪಶು ವೈದ್ಯಕೀಯ, ಪಶು ಹಾಗೂ ಯಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ  ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಜ.10, ಮತ್ತು 11ರಂದು ನಗರದ ವಿನೋಬನಗರದಲ್ಲಿ ಇರುವ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೇವು ಬೆಳೆಗಳ ಕುರಿತು ತರಬೇತಿ ಆಯೋಜಿಸಲಾಗಿದೆ.

ತರಬೇತಿಯಲ್ಲಿ ಮಲೆನಾಡುಗಿಡ್ಡ ತಳಿಹೊಂದಿರುವ ಸಣ್ಣ ಹಿಡುವಳಿದಾರಿಗೆ ಹಸಿರು ಮೇವಿನ ತಳಿಗಳ ಪ್ರದರ್ಶನ, ಮೇವಿನ ಬೆಳೆಗಳ ಬೇಸಾಯ ಕ್ರಮ, ಮೇವು ಬೀಜಗಳ ಸಂಸ್ಕರಣೆ, ಹುಲ್ಲುಗಾವಲು ನಿರ್ವಹಣೆ ಅಗತ್ಯತೆ ಮುಂತಾದ ವಿವಿಧ ವಿಷಯಗಳು ಒಳಗೊಂಡಿರುತ್ತದೆ. 

ನಿನ್ನೆ ಕದ್ದ ಇವತ್ತು ಸಿಕ್ಕಿಬಿದ್ದ! ಬೈಕ್​ ಕಳ್ಳತನ ಮಾಡಿದ್ದ ಆರೋಪಿಗೆ ಶಾಕ್ ಕೊಟ್ಟ ಸಾಗರ ಟೌನ್ ಪೊಲೀಸ್​ !

ಮಲೆನಾಡು ಗಿಡ್ಡ

ಮಲೆನಾಡು ಗಿಡ್ಡ ತಳಿಯ ಹಾಲು, ಸಗಣಿ, ಗಂಜಳದಿಂದ ತಯಾರಿಸಲಾದ ವಿವಿಧ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಆಸಕ್ತ  ರೈತರು ಡಾ. ಹರೀಶ್​ ಎಂ.-9470747820, ಡಾ.ವೆಂಕಟೇಶ್- 9482373685 ಮೊ.ನಂ.ಗಳಿಗೆ ಎಸ್‌ಎಂಎಸ್/ ವಾಟ್ಸಪ್ ಮೂಲಕ ಅಥವಾ ರಾ.ಕೃ. ವಿಕಾಸ ಯೋಜನಾ ಸಂಯೋಜಕರು, ಪ್ರಾಣಿ ಅನುವಂಶೀಯತೆ, ತಳಿಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇಲ್ಲಿನೇರವಾಗಿ ಸಂಪರ್ಕಿಸಿ, ಹೆಸರುಗಳನ್ನು ನೋಂದಾಯಿಸಲು ವಿಭಾಗದ ಸಹ ಪ್ರಾಧ್ಯಾಪಕರು ತಿಳಿಸಿದ್ದಾರೆ.