SHIVAMOGGA | Jan 6, 2024 | ಇಂದು, ನಾಳೆ ಕುಡಿಯುವ ನೀರು ವ್ಯತ್ಯಯ: ಮನವಿ
ಶಿವಮೊಗ್ಗ: ನಗರದ ಸ್ಮಾರ್ಟ್‌ಸಿಟಿ ಕಾಮಗಾರಿ ಹಿನ್ನೆಲೆ ಜ.6 ಮತ್ತು 7ರಂದು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
READ : ಶಿವಮೊಗ್ಗದಲ್ಲಿಯೇ ರೈತರಿಗೆ ಎರಡು ದಿನ ವಿಶೇಷ ಟ್ರೈನಿಂಗ್! ವಿವರ ಇಲ್ಲಿದೆ
ಬೊಮ್ಮನಕಟ್ಟೆ
ನಗರದ ಬಸವೇಶ್ವ ನಗರ, ನವುಲೆ, ಕುವೆಂಪು ಬಡಾವಣೆ, ಅಶ್ವಥ್‌ನಗರ, ಎಲ್.ಬಿ.ಎಸ್. ನಗರ, ಕೃಷಿನಗರ, ಶಾಂತಿನಗರ, ತ್ಯಾವರೆಚಟ್ನಳ್ಳಿ, ಬೊಮ್ಮನಕಟ್ಟೆ, ದೇವರಾಜ ಅರಸು ಬಡಾವಣೆ, ಸಹ್ಯಾದ್ರಿನಗರ, ಜೆ.ಎಚ್.ಪಟೇಲ್ ಬಡಾವಣೆ, ಶಾರದಮ್ಮ ಬಡಾವಣೆ, ಸಹಕಾರ ನಗರ, ಖಾಜಿಖಾನ್ ಬಡಾವಣೆ ಮತ್ತು
ಸೋಮಿನಕೊಪ್ಪ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈ ಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕನನೀಸ ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.