ಲಿಂಗನಮಕ್ಕಿಯಲ್ಲಿ ಕಳೆದ ವರ್ಷಕ್ಕಿಂತ 13 ಅಡಿ ಹೆಚ್ಚು ನೀರು | ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ ಗೊತ್ತಾ!

Heavy rainfall in the Sharavati river basin  highest rainfall,Linganamakki reservoir,water level in Linganamakki reservoir, Mastikatte , Mani, Yadur, Hosanagar , Kargal , Hombuja,  Arasalu

ಲಿಂಗನಮಕ್ಕಿಯಲ್ಲಿ ಕಳೆದ ವರ್ಷಕ್ಕಿಂತ 13 ಅಡಿ ಹೆಚ್ಚು ನೀರು | ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ ಗೊತ್ತಾ!
 highest rainfall,Linganamakki reservoir,water level in Linganamakki reservoir, Mastikatte , Mani, Yadur, Hosanagar , Kargal , Hombuja,  Arasalu

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ 

ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸ್ಥಳೀಯ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಶಿವಮೊಗ್ಗದಲ್ಲಿ ಅತ್ಯದಿಕ ಅಂದರೆ ಹುಲಿಕಲ್ ನಲ್ಲಿ ಅತ್ಯಧಿಕ 138 ಮಿಲಿಮೀಟರ್ ಮಳೆಯಾಗಿದೆ.  ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕಳೆದ ವರ್ಷ ಇದೇ ದಿನಕ್ಕಿಂತ 13 ಅಡಿಗಳಷ್ಟು  ಹೆಚ್ಚಿದೆ.

ಲಿಂಗನಮಕ್ಕಿ ಜಲಾಶಯ

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮಂಗಳವಾರ ಬೆಳಿಗ್ಗೆ 8 ಗಂಟೆಗೆ 1753.20 ಅಡಿ ತಲುಪಿದ್ದು ಜಲಾಶಯಕ್ಕೆ 20951 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಕಳೆದ ವರ್ಷ ಇದೇ ದಿನ ಜಲಾಶಯ ನೀರಿನ ಮಟ್ಟ 1740.65 ಅಡಿ ದಾಖಲಾಗಿತ್ತು

ಹುಲಿಕಲ್‌, ಮಾಣಿ, ಯಡೂರು, ಹೊಸನಗರ

ಇವತ್ತು ಮಂಗಳವಾರ ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲೂಕಿನ  ಹುಲಿಕಲ್ ನಲ್ಲಿ138 ಮಿಲಿಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ. ಉಳಿದಂತೆ ತಾಲೂಕಿನ ಮಾಸ್ತಿ ಕಟ್ಟೆಯಲ್ಲಿ133 ಮಿಲಿ ಮೀಟರ್ ಮಾಣಿ ಯಲ್ಲಿ 114 ಮಿಲಿಮೀಟರ್ ಯಡೂರಿನಲ್ಲಿ 108 ಮಿಲಿ ಮೀಟರ್ ಹೊಸನಗರದಲ್ಲಿ 68.4 ಮಿಲಿಮೀಟರ್ ಕಾರ್ಗಲ್ನಲ್ಲಿ 64.6 ಮಿಲಿ ಮೀಟರ್ ಹೊಂಬುಜದಲ್ಲಿ39.4 ಅರಸಾಳಿನಲ್ಲಿ21.6 ಮಿಲಿ ಮೀಟರ್ ಮಳೆ ದಾಖಲಾಗಿದೆ. 

Heavy rainfall in the Sharavati river basin has filled local streams and rivers. Shivamogga district recorded the highest rainfall, with Hulikal receiving 138 millimeters. The water level in Linganamakki reservoir, a major power generation center in the state, is 13 feet higher than the same day last year. As of Tuesday morning, the water level in the Linganamakki reservoir reached 1753.20 feet, with an inflow of 20951 cusecs. Last year on the same day, the water level was recorded at 1740.65 feet. Other notable rainfall figures include Mastikatte (133 mm), Mani (114 mm), Yadur (108 mm), Hosanagar (68.4 mm), Kargal (64.6 mm), Hombuja (39.4 mm), and Arasalu (21.6 mm).