ಧರ್ಮಸ್ಥಳ ಸಂಘದ ಕೆಲಸಕ್ಕೆ ಅಂತಾ ಹೋದ ಯುವತಿ ಆಗುಂಬೆಯಿಂದ ಮಿಸ್ಸಿಂಗ್!‌

woman from Agumbe in the Thirthahalli taluk of Shivamogga district, has been missing Dharmastala Sangha Seva representative 

ಧರ್ಮಸ್ಥಳ ಸಂಘದ ಕೆಲಸಕ್ಕೆ ಅಂತಾ ಹೋದ ಯುವತಿ ಆಗುಂಬೆಯಿಂದ ಮಿಸ್ಸಿಂಗ್!‌
Dharmastala Sangha , Agumbe in the Thirthahalli taluk

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ    

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳು 24 ವರ್ಷದ ಪೂಜಾ ಎ.ಕೆ ಎಂಬುವವರು ಜೂನ್ 30ರಂದು ಮನೆಯಿಂದ ಹೋದವರು ವಾಪಸ್‌ ಬಂದಿಲ್ಲ. ಅವರ ಸುಳಿವು ಸಿಕ್ಕರೆ ತಿಳಿಸಿ ಎಂದು ಪೊಲೀಸ್‌ ಇಲಾಖೆ  ವಾರ್ತಾ ಇಲಾಖೆಯ ಮೂಲಕ ಪ್ರಕಟಣೆಯಲ್ಲಿ ತಿಳಿಸಿದೆ. 

ಆಗುಂಬೆ ಪೊಲೀಸ್‌ ಠಾಣೆ

ಪ್ರಕಟಣೆಯ ವಿವರ ಹೀಗಿದೆ. ಮೇಲ್ಕಂಡ ಯುವತಿ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 4.06 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. 

ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈಕೆಯ ಕುರಿತು ಮಾಹಿತಿ ದೊರೆತಲ್ಲಿ ಎಸ್.ಪಿ. ಕಚೇರಿ ಶಿವಮೊಗ್ಗ-08182-261400, ತೀರ್ಥಹಳ್ಳಿ ಡಿವೈಎಸ್ಪಿ -08181-220388, ಸಿಪಿಐ ಮಾಳೂರು-9480803333 ಹಾಗೂ ಪಿಎಸ್‍ಐ ಆಗುಂಬೆ-9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ. (ಸೂಚನೆ : ಇದು ಪೊಲೀಸ್‌ ಪ್ರಕಟಣೆಯ ವರದಿ ಮಾತ್ರ)

woman from Agumbe in the Thirthahalli taluk of Shivamogga district, has been missing since June 30. She left home for her job as a Dharmastala Sangha Seva representative