ನಾಲ್ಕು ವಿಚಾರಗಳ ಬಗ್ಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಮಹತ್ವದ ಮಾತು

Minister Madhu Bangarappa addressed the media after conducting a Janaspandana meeting in Shivamogga.

ನಾಲ್ಕು ವಿಚಾರಗಳ ಬಗ್ಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಮಹತ್ವದ ಮಾತು
Janaspandana meeting in Shivamogga, Minister Madhu Bangarappa

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಜನಸ್ಪಂದನಾ ಸಭೆಯನ್ನ ನಡೆಸಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಂದು ಕೆಡಿಪಿ ಸಭೆಯಲ್ಲಿ ಪಗ್ರತಿ ಪರಿಶೀಲನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹೇಳಿದ ಮಾತುಗಳ ವಿವರ ಹೀಗಿದೆ. 

ನಿನ್ನೆ ಜನ ಸ್ಪಂದನಾ ಕಾರ್ಯಕ್ರಮ ಚೆನ್ನಾಗಿ ನಡೆದಿದೆ, ಶಿವಮೊಗ್ಗ ಸಿಟಿ ವ್ಯಾಪ್ತಿಯ ಸಮಸ್ಯೆ ಜಾಸ್ತಿ ಇತ್ತು ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ

ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದ ಸಾವಿನ ಬಗ್ಗೆ ಬಹಳ ನೋವಾಗಿದೆ, ಕೆಡಿಪಿ ಸಭೆ ಮುಗಿದ ಮೇಲೆ ಹೋಗಿ ಬರುತ್ತೇನೆ. ನಮ್ಮ ಕಡೆಯಿಂದ ಆಗುವ ಸಹಕಾರ ಮಾಡುತ್ತೇವೆ, ಪರಿಹಾರ ಜಾಸ್ತಿ ಮಾಡುವ ಕುರಿತು ಸರ್ಕಾರದ ಜೊತೆ ಮಾತಾಡುತ್ತೇವೆ, ಮೃತರ ಕುಟುಂಬದ ಪರವಾಗಿ ಸರ್ಕಾರ ನಿಲ್ಲುತ್ತದೆ.

ಸಿಎಂ,ಡಿಸಿಎಂ ಬದಲಾವಣೆ ವಿಚಾರದಲ್ಲಿ ನಾನು ರಿಯಾಕ್ಟ್ ಮಾಡಲ್ಲ, ಈ ಕುರಿತಾಗಿ ಹೈ ಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ, ಇನ್ನು ಅನಧಿಕೃತ ಶಾಲೆಗಳು ಇರುವುದು ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳುತ್ತೇನೆ. ಶಾಲೆಗಳಿಗೆ  ವಿದ್ಯುತ್, ನೀರು ಉಚಿತವಾಗಿ ನೀಡಿದ್ದೇವೆ, ಇದಕ್ಕಾಗಿ 28 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ

ಡಿಸಿಸಿ ಬ್ಯಾಂಕ್ ಚುನಾವಣೆ ಒಗ್ಗಟ್ಟಿನಿಂದ ಎದುರಿಸಲಾಗಿದೆ. ಈ ಚುನಾವಣೆಯಲ್ಲಿ 11 ಸ್ಥಾನ ಗೆದ್ದಿದ್ದಾರೆ ಸಹಕಾರಿ ಬ್ಯಾಂಕ್ ಜನರಿಗೆ ಸಹಕಾರ ಮಾಡಲಿ, ಅದೇ ರೀತಿಯಲ್ಲಿ ಡಿಸಿಸಿ ಬ್ಯಾಂಕ್ ನೇ‌ಮಕಾತಿಯಲ್ಲಿ ಹಗರಣ ನಡೆದಿದ್ದರೆ ಸರ್ಕಾರ ತನಿಖೆ ಮಾಡುತ್ತದೆ. 

Minister Madhu Bangarappa addressed the media after conducting a Janaspandana meeting in Shivamogga.