ಇನ್ಮು ಮುಂದೆ IPC ಸೆಕ್ಷನ್‌ ಪ್ರಕಾರ ಎನ್ನುವಂತಿಲ್ಲ | ಇವತ್ತಿನಿಂದ ನೂತನ ಭಾರತೀಯ ರೂಲ್ಸ್‌ ಜಾರಿ ! ಏನಿದೆ ವಿಶೇಷ

New criminal laws will come into effect in India today, replacing the British-era Indian Penal Code (IPC)

ಇನ್ಮು ಮುಂದೆ IPC ಸೆಕ್ಷನ್‌ ಪ್ರಕಾರ ಎನ್ನುವಂತಿಲ್ಲ | ಇವತ್ತಿನಿಂದ ನೂತನ ಭಾರತೀಯ ರೂಲ್ಸ್‌ ಜಾರಿ ! ಏನಿದೆ ವಿಶೇಷ
Indian Penal Code

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ   

ಇವತ್ತಿನಿಂದ ಭಾರತದಲ್ಲಿ ಹೊಸ ಕಾನೂನು ಜಾರಿಯಾಗಲಿದೆ. ಬ್ರಿಟೀಷರ ಸಮಯದಲ್ಲಿದ್ದ ಅಪರಾಧ ಕಾಯ್ದೆ ಇಂಡಿಯನ್‌ ಪೀನಲ್‌ ಕೋಡ್‌ ಬದಲಿಗೆ ಕೇಂದ್ರ ಸರ್ಕಾರ ಈ ಹಿಂದೆ  ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳನ್ನು ಜಾರಿಗೆ ತಂದಿತ್ತು. ಈ ಕಾನೂನುಗಳು ಇವತ್ತಿನಿಂದ ಜಾರಿಗೆ ಬರಲಿದೆ.  ಐಪಿಸಿಗೆ ಬದಲಾಗಿ ಇನ್ಮುಂದೆ  ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿದೆ. 

ನೂತನವಾಗಿ ಜಾರಿಗೆ ಬರುತ್ತಿರುವ ಕಾನೂನುನಲ್ಲಿ ವಿಶೇಷ ಅಂದರೆ, ಇನ್ಮುಂದೆ ಯಾವುದೇ ಕ್ರೈ ಕೇಸ್‌ನಲ್ಲಿ ವಿಚಾರಣೆ ಮುಗಿದು 60 ದಿನಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಬೇಕು, ಅದೇ ರೀತಿ ಕೋರ್ಟ್‌ಗಳಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ 45 ದಿನಗಳ ಒಳಗಾಗಿ ತೀರ್ಪು ಪ್ರಕಟಿಸಬೇಕು 

ದೂರುದಾರರು ಜೀರೋ ಎಫ್‌ಐಆರ್‌ ಅಂದರೆ, ನಿಗದಿತ ಪೊಲೀಸ್‌ ಸ್ಟೇಷನ್‌ ಬದಲು ಯಾವುದೇ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಬಹುದು. ಅಲ್ಲದೆ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕವೂ ದೂರು ಕೊಡಬಹುದು. ಸಮನ್ಸ್‌ಗಳನ್ನು ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮದ ಮೂಲಕ ರವಾನಿಸಬಹುದು, ಪ್ರಕರಣಗಳ ವಿಚಾರಣೆಯನ್ನ ಎರಡು ಸಲ ಮಾತ್ರ ಮುಂದೂಡಬಹುದು. 

New criminal laws will come into effect in India today, replacing the British-era Indian Penal Code (IPC). The three new laws are the Bharatiya Nyaya Sanhita 2023, Bharatiya Nagarik Suraksha Sanhita 2023, and Bharatiya Sakshya Adhiniyam 2023.

Chargesheets must be filed within 60 days of the conclusion of an investigation. Court verdicts must be delivered within 45 days of the completion of a trial. Zero FIRs can be filed at any police station, regardless of jurisdiction.  Complaints can be filed electronically. Summons can be served electronically.