BREKING NEWS SHIVAMOGGA | ಗಾಂಧಿ ಬಜಾರ್‌ನ ಬಟ್ಟೆ ಮಾರ್ಕೆಂಟ್‌ನಲ್ಲಿ ಬೆಂಕಿ

Fire breaks out at cloth market in Gandhi Bazar

BREKING NEWS SHIVAMOGGA | ಗಾಂಧಿ ಬಜಾರ್‌ನ ಬಟ್ಟೆ ಮಾರ್ಕೆಂಟ್‌ನಲ್ಲಿ ಬೆಂಕಿ
batte market in Gandhi Bazar

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ   

ಹಳೆ ಶಿವಮೊಗ್ಗದ ಗಾಂಧಿಬಜಾರ್‌ ನಲ್ಲಿರುವ ಬಟ್ಟೆ ಮಾರ್ಕೆಟ್‌ನಲ್ಲಿರುವ ಸ್ಟಾಲ್‌ಗಳಲ್ಲಿ ಇವತ್ತು ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ. ಐದಕ್ಕೂ ಹೆಚ್ಚು ಅಂಗಡಿಗಳು ಘಟನೆಯಲ್ಲಿ ಸುಟ್ಟು ಕರಲಾಗಿವೆ. ಅದೃಷ್ಟಕ್ಕೆ ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸದಿಂದಾಗಿ 200 ಕ್ಕೂ ಹೆಚ್ಚು ಸ್ಟಾಲ್‌ ಮಾದರಿ ಅಂಗಡಿಗಳಿರುವ ಬಟ್ಟೆ ಮಾರ್ಕೆಟ್‌ನಲ್ಲಿ ದೊಡ್ಡ ದುರಂತ ಸಂಭವಿಸುವುದು ತಪ್ಪಿದೆ. 

ಇವತ್ತು ರಾತ್ರಿ 10 ಗಂಟೆ ಸುಮಾರಿಗೆ ಬಟ್ಟೆ ಮಾರ್ಕೆಟ್‌ನ ಸ್ಟಾಲ್‌ಗಳಿಂದ ಹೊಗೆಯಾಡುತ್ತಿರುವುದನ್ನ ಸ್ಥಳೀಯ ಯುವಕರು ಗಮನಿಸಿದ್ದಾರೆ.

ಎಂದಿನಂತೆ ಎಲ್ಲರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದರು. ಅದೇ ಹೊತ್ತಿನಲ್ಲಿ ಮುಚ್ಚಿದ್ದ ಮಳಿಗೆಗಳಿಂದ ಹೊಗೆ ಬರುವುದನ್ನ ಗಮನಿಸಿದ ಯುವಕರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. 

ಅಲ್ಲದೆ ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಕರೆಂಟ್‌ ಕಟ್‌ ಮಾಡಿಸಿದ್ದಾರೆ. ಆನಂತರ ವಿಷಯ ತಿಳಿದು ಸ್ಥಳಕ್ಕೆ ಎರಡು ವಾಹನ ಹಾಗೂ 15 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಒಂದುವರೆ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

ಉಸಿರುಗಟ್ಟಿಸುವಂತಹ ಹೊಗೆಯ ನಡುವೆ ಆಕ್ಸಿಜನ್‌ ಸಿಲಿಂಡರ್‌ನೊಂದಿಗೆ ಕೃತಕ ಉಸಿರಾಟದ ಕಿಟ್‌ ಬಳಸಿ ಅಗ್ನಿಶಾಮಕ ಸಿಬ್ಬಂದಿ ಇಕ್ಕಟ್ಟಿನ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. 

ಇದೇ ವೇಳೆ ದೊಡ್ಡಮಟ್ಟದ ಸಿಬ್ಬಂದಿಯ ಜೊತೆಗೆ ಆಗಮಿಸಿದ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಸ್ಥಳದಲ್ಲಿ ಆಗುತ್ತಿದ್ದ ರಶ್‌ ತಡೆದು, ಜನರನ್ನ ನಿಯಂತ್ರಿಸಿದರು. ಆದಾಗ್ಯು ತಮ್ಮ ತಮ್ಮ ಅಂಗಡಿಗಳಿಗೆ ಎಲ್ಲಿ ಹಾನಿಯಾಗಿದೆಯೋ ಎಂಬ ಆತಂಕದಲ್ಲಿದ್ದ ಅಂಗಡಿ ಮಾಲೀಕರು ದಟ್ಟ ಹೊಗೆಯ ನಡುವೆ ತಮ್ಮ ಅಂಗಡಿಗಳಿಗೆ ತೆರಳಿ ಸಾಮಗ್ರಿಗಳನ್ನ ಚೀಲಕ್ಕೆ ತುಂಬಿಕೊಂಡು ಅಲ್ಲಿಂದ ಸ್ಥಳಾಂತರ ಮಾಡಿದರು. 

A fire broke out in the cloth market of old Shivamogga Gandhi Bazaar, burning more than five shops. Fortunately,