ಲೋಕಾಯುಕ್ತ ರೇಡ್​ ಬೆನ್ನಲ್ಲೆ ಇಲಾಖಾ ತನಿಖೆ ! ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಸ್ಪೆಂಡ್ ! ಆದೇಶದಲ್ಲಿ ಏನಿದೆ

Departmental inquiry after Lokayukta raid! Social Welfare Department official suspended What's in the order

ಲೋಕಾಯುಕ್ತ ರೇಡ್​ ಬೆನ್ನಲ್ಲೆ ಇಲಾಖಾ ತನಿಖೆ ! ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಸ್ಪೆಂಡ್ ! ಆದೇಶದಲ್ಲಿ ಏನಿದೆ
Departmental inquiry ,Lokayukta raid,Social Welfare Department official

Shivamogga Feb 18, 2024  ಸ್ಮಶಾನದಲ್ಲಿ ನಡೆದಿದ್ದ ಲೋಕಾಯುಕ್ತ ರೇಡ್​ ನಲ್ಲಿ ಸಿಕ್ಕಿಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ. ಇಲಾಖಾ ತನಿಖೆಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಅವರನ್ನ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಮಾನತ್ತು ಮಾಡಲಾಗಿದೆ. 

ಇನ್ನೂ ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಿನಾಥ್ ಅವರನ್ನು ಸರ್ಕಾರ ಅಮಾನತು ಮಾಡಿ ತನಿಖೆಗೆ ಆದೇಶಿಸಿರುವುದು ಸ ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಶಿವಣ್ಣ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಆಹಾರ ಮತ್ತು ಇತರೆ ಸಾಮಗ್ರಿಗಳ ಪೂರೈಕೆಯ ಟೆಂಡರ್‌ನಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಆಗಿದ್ದರ ಬಗ್ಗೆ ಸಾಕ್ಷ್ಯ ಸಮೇತ ಸರ್ಕಾರಕ್ಕೆ ದೂರು ನೀಡಲಾಗಿತ್ತು. ಇದೀಗ ಅವರನ್ನು ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ. 

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯಿಂದ ಹೊರಬಿದ್ದ ಪ್ರಕಟಣೆಯ ಪ್ರಕಾರ, ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಡಾ॥ ರಾಕೇಶ್ ಕುಮಾರ್.ಕೆ. ಭಾ.ಆ.ಸೇ.. ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ

(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ರ ನಿಯಮ 10 (1) (ಡಿ) ರಡಿ ದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಗೋಪಿನಾಥ್.ಎಸ್. ಮೂಲತಃ ಕಛೇರಿ ಅಧೀಕ್ಷಕರು ಸ್ವಂತ ವೇತನ ಶ್ರೇಣಿ ಮೇಲೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ತಾಲ್ಲೂಕು/ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದೆ.

ಮುಂದುವರೆದು ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಕೆ.ಸಿ.ಎಸ್. ನಿಯಮ 98 ರನ್ನಯ ಜೀವಾನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ.ಸದರಿ ನೌಕರರ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಸೆಳೆಯುವ ಸಲುವಾಗಿ ಲೀನ್ ಅನ್ನು ಕಛೇರಿ ಅಧೀಕ್ಷಕರಾಗಿ ಸಹಾಯಕ ನಿರ್ದೇಶಕರ ಕಛೇರಿ ಸಮಾಜ ಕಲ್ಯಾಣ ಇಲಾಖೆ ರಾಯಚೂರು ತಾ: ಇಲ್ಲಿಗೆ ಸ್ಥಳಾಂತರಿಸಲಾಗಿದೆ. ನೌಕರರು ಪ್ರತಿ ಮಾಹೆ ಜೀವನಾಧಾರ ಭತ್ಯೆ ಸೆಳೆಯುವ ಸಲುವಾಗಿ ಸದರಿ ಕಛೇರಿಗೆ ಮನವಿ ಸಲ್ಲಿಸುವುದು ಎಂದು ಆದೇಶ ಹೊರಡಿಸಲಾಗಿದೆ.