Shiralakoppa blast | ಶಿರಾಳಕೊಪ್ಪದಲ್ಲಿ ಸ್ಫೋಟ | ಇಬ್ಬರಿಗೆ ಗಾಯ | ಕೇಸ್​ ಹಾಕ್ತೀನಿ ಎಂದು ಎಸ್​ಪಿ ವಾರ್ನಿಂಗ್​

Shiralakoppa blast | Explosion in Shiralakoppa town Two injured SP warning that will file a case

Shiralakoppa blast | ಶಿರಾಳಕೊಪ್ಪದಲ್ಲಿ ಸ್ಫೋಟ | ಇಬ್ಬರಿಗೆ ಗಾಯ |  ಕೇಸ್​ ಹಾಕ್ತೀನಿ ಎಂದು ಎಸ್​ಪಿ ವಾರ್ನಿಂಗ್​
Shiralakoppa blast | Explosion in Shiralakoppa town Two injured SP warning that you will file a case

Shivamogga Feb 18, 2024 | ಶಿವಮೊಗ್ಗ ಜಿಲ್ಲೆ   ಶಿರಾಳಕೊಪ್ಪ  ಪೇಟೆಯಲ್ಲಿ ಒಂದು ಘಟನೆ ನಡೆದಿದೆ. ಶಿವಮೊಗ್ಗ  ಶಿರಾಳಕೊಪ್ಪದಲ್ಲಿ ವಸ್ತುವೊಂದು ಬ್ಲಾಸ್ಟ್ ಆಗಿ ಇಬ್ಬರಿಗೆ ಗಾಯಗವಾಗಿದೆ. 

 

ಶಿರಾಳಕೊಪ್ಪದ ಬಸ್​ಸ್ಟಾಂಡ್ ಬಳಿ ಈ ಘಟನೆ ಸಂಭವಿಸಿದೆ. ಗಂಡ ಹೆಂಡತಿ ಇಟ್ಟಿದ್ದ ಬ್ಯಾಗ್​ನಲ್ಲಿದ್ದ ವಸ್ತುನಿಂದ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನ ಆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬ್ಲಾಸ್ಟ್ ಆದ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

 

ಎಸ್​.ಪಿ.ಮಿಥುನ್ ಕುಮಾರ್

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಲೆನಾಡು ಟುಡೆ ತಂಡ ಎಸ್​​ಪಿ ಮಿಥುನ್ ಕುಮಾರ್​ರವರನ್ನ ಸಂಪರ್ಕಿಸಿದೆ. ಅವರು ಹೇಳುವ ಪ್ರಕಾರ, ಇಂದು ಸಂತೆಗೆ ಉಮೇಶ್ ಮತ್ತು ಅವನ ಹೆಂಡತಿ ರೂಪರವರು ರಸ್ತೆ ಬದಿಯ ಅಂಗಡಿಯಾತ ಅಂತೋನಿ ಜೊತೆ ಕಂಬಳಿ ಖರೀದಿಸಿದ್ದಾರೆ. ಆ ಅವರೆಲ್ಲರೂ ಪರಸ್ಪರ ಪರಿಚಿತರು. ನಂತರ ಮಹಿಳೆ ರೂಪ ಮತ್ತು ಅವಳು ಪತಿ ಉಮೇಶ್ ಅಂಗಡಿಯವರಿಗೆ ಹೇಳಿ ಅರ್ಧ ಗಂಟೆ ಇಲ್ಲಿ ನಮ್ಮ ಬ್ಯಾಗ್ ಇಟ್ಟು ಸಂತೆಗೆ ಹೋಗಿ ವಾಪಸ್ ಬರುತ್ತೇನೆ ಎಂದಿದ್ದಾರೆ. 

 

ಈ ಘಟನೆ ನಡೆದು ಸ್ವಲ್ಪ ಹೊತ್ತಿನ ನಂಟರ ಆ ಬ್ಯಾಗ್ ಸ್ಫೋಟ ಗೊಂಡಿದೆ.  ಪ್ರಾಥಮಿಕ ವಿಚಾರಣೆ ವೇಳೆ ಬ್ಯಾಗ್​ನಲ್ಲಿ ಅವರು ಇಟ್ಟಿದ್ದ ಸಿಡಿ ಮದ್ದು ಪತ್ತೆಯಾಗಿದೆ. ಸದ್ಯ ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ

 

ಇನ್ನೂ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಟೌವ್​ಗೂ ಸಂಬಂಧವಿಲ್ಲ. ಅಂಗಡಿಯಾತ ವ್ಯಾಪಾರಕ್ಕಾಗಿ ಸ್ಟೌವ್​ ಇಟ್ಟುಕೊಂಡಿದ್ದ ಅಷ್ಟೆ ಅದಕ್ಕೂ ಘಟನೆಗೂ ಸಂಬಂಧವಿಲ್ಲ. ಕಾಡುಹಂದಿ ಶಿಕಾರಿಗೆ ಬಳಸುವ ಸಿಡಿಮದ್ದಿನಿಂದ ಬ್ಲಾಸ್ಟ್ ಆಗಿದೆ ಎಂದು ತಿಳಿಸಿದ್ದಾರೆ. ಸೂಕ್ಷ್ಮ ಪ್ರಕರಣಗಳಲ್ಲಿ ಸುಳ್ಳುಸುದ್ದಿ ಹರಡಿದರೆ  ಕೇಸ್​ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ