ಮೈಲಾರಲಿಂಗೇಶ್ವರ ಕಾರ್ಣಿಕ | ಭದ್ರಾ ಡ್ಯಾಂ ನೀರು ರಿಲೀಸ್​ | ನದಿ ಪಾತ್ರದ ಜನರಿಗೆ ಎಚ್ಚರಿಕೆ| ಹಾವೇರಿ, ಗದಗ ವಿಜಯನಗರ ಜಿಲ್ಲೆಗೆ ನೋಟಿಸ್​ ! ಟೈಂ ಟೇಬಲ್​ ಇಲ್ಲಿದೆ !

Mylaralingeswara Karnika | Bhadra dam water released | Warning to people on river banks | Notices issued to Haveri, Gadag and Vijayanagar districts Here's the time table!

ಮೈಲಾರಲಿಂಗೇಶ್ವರ  ಕಾರ್ಣಿಕ | ಭದ್ರಾ ಡ್ಯಾಂ ನೀರು ರಿಲೀಸ್​ | ನದಿ ಪಾತ್ರದ ಜನರಿಗೆ ಎಚ್ಚರಿಕೆ| ಹಾವೇರಿ, ಗದಗ ವಿಜಯನಗರ ಜಿಲ್ಲೆಗೆ ನೋಟಿಸ್​ ! ಟೈಂ ಟೇಬಲ್​ ಇಲ್ಲಿದೆ !

Shivamogga Feb 18, 2024 |  ತುಂಗಭದ್ರಾ ನದಿ ಆಶ್ರಿತ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ನದಿ ಮೂಲಕ ನೀರು ಹರಿಸುವ ಸಂಬಂಧ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ 

ತುಂಗಾಭದ್ರಾ ನದಿ

ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ ಮೈಸೂರು ಇವರ ಅಧಿಕೃತ  ಜ್ಞಾಪನಾ ಪತ್ರದ ಉಲ್ಲೇಖದೊಂದಿಗೆ ಈ ಆದೇಶವನ್ನು ಹೊರಡಿಸಲಾಗಿದೆ. 

ದಿ:01.02.2024ರಲ್ಲಿ 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ ಹಾವೇರಿ, ಗದಗ ಮತ್ತು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗದಗ, ಬೆಟಗೇರಿ, ಹಾವೇರಿ, ರಾಣೀಬೆನ್ನೂರ, ಬ್ಯಾಡಗಿ, ಕೂಡ್ಲಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಕುಡಿಯುವ ನೀರು ಒದಗಿಸಲು ತೀರ್ಮಾನಿಸಲಾಗಿದೆ

ಭದ್ರಾ ಜಲಾಶಯ

ದಿನಾಂಕ:05.02.2024 ರಾತ್ರಿ 10 ಗಂಟೆಯಿಂದ 10.02.2024 ರಾತ್ರಿ 10 ಗಂಟೆವರೆಗೆ ಪ್ರತಿ ನಿತ್ಯ 2000 ಕ್ಯೂಸೆಕ್ಸ್‌ನಂತೆ ಒಟ್ಟು 12000 ಕ್ಯೂಸೆಕ್ಸ್ ನೀರು (1.036 ಟಿ.ಎಂ.ಸಿ) ಮತ್ತು ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು, ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ದಿ:18.02.2024ರಿಂದ ದಿ:23.02.2024ರವರೆಗೆ ಪ್ರತಿದಿನ 500 ಕ್ಯೂಸೆಕ್ಸ್‌ನಂತೆ (0.26 ಟಿ.ಎಂ.ಸಿ) ನೀರನ್ನು ಹರಿಸಲು ಪ್ರಕಟಿಸಲಾಗಿದೆ

ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ 

ಅದರಂತೆ ನೀರು ಹರಿಸಲಾಗುತ್ತಿದ್ದು, ಉಲ್ಲೇಖಿತ ಪತ್ರದಲ್ಲಿ ಮಾನ್ಯ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಎರಡೂ ಯೋಜನೆಗಳಿಗೆ ಸೇರಿಸಿ, ಮಾರ್ಪಡಿಸಿ ಈ ಕೆಳಗಿನಂತೆ ನೀರು ಹರಿಸಲು ಸೂಚಿಸಿರುತ್ತಾರೆ. ಅದರನ್ವಯ ಈ ಕೆಳಗಿನಂತೆ ನೀರನ್ನು ಹರಿಸಲಾಗುವುದು.ನೀರು ಹರಿಸುವ ವೇಳಾಪಟ್ಟಿ

ಆದುದರಿಂದ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲೀ, ಹಾಗೂ ಜಾತ್ರಾ ಮಹೋತ್ಸವಗಳನ್ನು ಹಮ್ಮಿಕೊಳ್ಳುವುದಾಗಲೀ, ಜನರು ಮತ್ತು ದನಕರುಗಳನ್ನು ನದಿಗೆ ಇಳಿಸುವುದಾಗಲೀ ಮತ್ತು ನಿರ್ಮಾಣ ಕಾಮಗಾರಿಗಳನ್ನು ನದಿಯಲ್ಲಿ ನಡೆಸುತ್ತಿರುವುದು ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೇಲೆ ತಿಳಿಸಿದ ಅವಧಿಯಲ್ಲಿ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನು ಸಹ ನಿಷೇದಿಸಲಾಗಿದೆ.
Mylaralingeswara Karnika, Bhadra Dam Water Released, Warning to Peopal on River Banks, Notice Issued to Haveri, Gadag and Vijayanagar Districts, Water Release Time Tabla,