ಬಿ.ವೈ.ರಾಘವೇಂದ್ರರವರು ಏನೋ ಮಂತ್ರ ಮಾಡಿದ್ದಾರೆ! ಬಿ.ಎಸ್. ಯಡಿಯೂರಪ್ಪರವರು ಹೀಗೆ ಹೇಳಿದ್ದೇಕೆ ನೋಡಿ
B.Y. Raghavendra has done something magical! See why B.S.Yediyurappa said this.
SHIVAMOGGA | Jan 27, 2024 | ಶಿವಮೊಗ್ಗದಲ್ಲೀಗ ಬಿ.ವೈ.ರಾಘವೇಂದ್ರ ರವರನ್ನ ಮತ್ತೆ ಗೆಲ್ಲಿಸಿ ಎಂದು ಶಾಮನೂರು ಶಿವಶಂಕರಪ್ಪರವರು ಹೇಳಿದ ಮಾತು ಇದೀಗ ಸಖತ್ ಚರ್ಚೆಯಾಗುತ್ತಿದೆ. ಇದರ ನಡುವೆ ಹಿರಿಯ ಮುಖಂಡರ ಶಾಮನೂರು ಶಿವಶಂಕರಪ್ಪರವರ ಮಾತಿಗೆ ಅಭಿನಂದನೆ ತಿಳಿಸುತ್ತಾ ತಮ್ಮ ನಿವಾಸದ ಬಳಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ , ತಮ್ಮ ಮಗನ ಸಾಧನೆ ಬಗ್ಗೆ ತಮಾಷೆಯನ್ನು ಸಹ ಮಾಡಿದ್ದಾರೆ.
ಒಂದರ ಹಿಂದೆ ಒಂದು ಪ್ರಶ್ನೆ ಕೇಳುತ್ತಿದ್ದ ವರದಿಗಾರರ ನಡುವೆ, ಪತ್ರಕರ್ತರೊಬ್ಬರು ಶಾಮನೂರು ಶಿವಶಂಕರಪ್ಪರವರ ವಿಚಾರವನ್ನು ಪ್ರಶ್ನಿಸಿದ್ದಾರೆ. ವರದಿಗಾರರ ಮಾತಿಗೆ ಮರುಕ್ಷಣವೇ ಪ್ರತಿಕ್ರಿಯಿಸಿದ ಬಿಎಸ್ವೈ ರಾಘವೇಂದ್ರರವರು ಏನೋ ಮಂತ್ರ ಮಾಡಿದ್ದಾರೆ ಎಂದರು. ಇದಕ್ಕೆ ವರದಿಗಾರರು ಸೇರಿದಂತೆ ಎಲ್ಲರೂ ನಕ್ಕರು.
ಆ ಬಳಿಕ ಪಕ್ಷಭೇದ ಮರೆತು ಶಾಮನೂರು ಶಿವಶಂಕರಪ್ಪರವರು ಹೇಳಿಕೆ ನೀಡಿದ್ದು, ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ ಎಂದರು. ಅಲ್ಲದೆ ಇದಕ್ಕೂ ಮೊದಲು ಮಂಡ್ಯಕ್ಕೆ ಹೋಗುತ್ತೇನೆ ಅಲ್ಲಿ ಎಸ್.ಎಂ. ಕೃಷ್ಣ ರವರು ಹಾಗೂ ನನಗೂ ಸನ್ಮಾನ ಮಾಡುತ್ತಿದ್ದಾರೆ. ಅಲ್ಲಿಯವರು ಎಂಬ ಕಾರಣಕ್ಕೆ ಸನ್ಮಾನ ಮಾಡುತ್ತಿದ್ದಾರೆ. ಅದಕ್ಕಾಗಿ ಅಲ್ಲಿಗೆ ಹೋಗುತ್ತಿದ್ದೇನ ಎಂದರು