ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ , ಮಂಗಳೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!

gas lorry on its way to Mangaluru overturned on the Shivamogga-Thirthahalli national highway.

ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ , ಮಂಗಳೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!

SHIVAMOGGA  |  Jan 27, 2024  |  ಕಳೆದೊಂದು ವಾರದಲ್ಲಿ ಎರಡನೇ ಸಲ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಅಪಘಾತಕ್ಕೀಡಾದ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಈ ಘಟನೆ ಸಂಭವಿಸಿದೆ. ಗ್ಯಾಸ್​ ಸಿಲಿಂಡರ್​ಗಳು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ರಸ್ತೆಯಿಂದ ಉರುಳಿ ತಗ್ಗಿನಲ್ಲಿದ್ದ ಗದ್ದೆಗೆ ಉರುಳಿಬಿದ್ದಿದೆ. 

ಮಲೆನಾಡು ಟುಡೆ ವರದಿ

ಗ್ಯಾಸ್ ಅಂಡೆ ತಂಬಿಕೊಂಡು ಮಂಗಳೂರು ಕಡೆಗೆ ಲಾರಿ ಹೋಗುತ್ತಿತ್ತು. ಈ ವೇಳೆ ಎಂತಾಯ್ತು ಎಂಬುದು ಗೊತ್ತಾಗಿಲ್ಲ. ಆದರೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನೇರವಾಗಿ ಉರುಳಿ ಗದ್ದೆಗೆ ಬಿದ್ದಿದೆ. ಅದೃಷ್ಟಕ್ಕೆ ಲಾರಿ ಅಪ್​ಸೆಟ್ ಆಗುತ್ತಿರುವದು ತಿಳಿಯುತ್ತಲೇ ಚಾಲಕ ಲಾರಿಯಿಂದ ಹಾರಿದ್ದಾನೆ. ಹೀಗಾಗಿ ಆತನಿಗೆ ಹೆಚ್ಚಿನ ಅಪಾಯವಾಗಿಲ್ಲ. ಇನ್ನೂ ಲಾರಿ ಉರುಳಿದ ದಾರಿಯುದ್ದಕ್ಕೂ ಸಿಲಿಂಡರ್​ಗಳು ಸಹ ಬಿದ್ದಿವೆ. 

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಯಲ್ಲಿಯೇ ಘಟನೆ ನಡೆದಿದೆ.ಕುಡುಮಲ್ಲಿಗೆ ಬಳಿ ಘಟನೆ ಸಂಭವಿಸಿದ್ದು, ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.