ನಾಳೆಯಿಂದ 14 ದಿನ ಲಾಕ್​ಡೌನ್​! ರಾಜ್ಯದೆಲ್ಲೆಡೆ ನಾಳೆ ಸಂಜೆಯಿಂದಲೇ ನಿಯಮ ಜಾರಿ! ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತ..ಉಚಿತ: ಸಿಎಂ ಬಿಎಸ್​ ಯಡಿಯೂರಪ್ಪ ಘೋಷಣೆ!

Malnad Today Story on Covid

ನಾಳೆಯಿಂದ 14 ದಿನ ಲಾಕ್​ಡೌನ್​! ರಾಜ್ಯದೆಲ್ಲೆಡೆ ನಾಳೆ ಸಂಜೆಯಿಂದಲೇ ನಿಯಮ ಜಾರಿ! ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತ..ಉಚಿತ: ಸಿಎಂ ಬಿಎಸ್​ ಯಡಿಯೂರಪ್ಪ ಘೋಷಣೆ!
Malnad Today Story on Covid


Malenadu today story / SHIVAMOGGA
ಲಾಕ್​ಡೌನ್​ ಇಲ್ಲ ಅಂತಿದ್ದ ರಾಜ್ಯ ಸರ್ಕಾರ ಇವತ್ತು ಜನರ ಮನಸ್ಸಲ್ಲಿದ್ದ ಅನುಮಾನದಂತೆಯೇ ನಾಳೆಯಿಂದ 14 ದಿನ ಲಾಕ್​ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಆದರೆ ಇಲ್ಲೊಂದು ಗಮನಿಸಬೇಕಾದ ಸಂಗತಿ ಅಂದರೆ, ಸಿಎಂ ಯಡಿಯೂರಪ್ಪ ಎಲ್ಲಿಯೂ ಲಾಕ್​ಡೌನ್​ ಎನ್ನುವ ಪದವನ್ನು ಬಳಸಿಲ್ಲ. ಕೊರೊನಾ ಬಿಗಿಕ್ರಮ ಎಂದು ಹೇಳಿದ್ದಾರೆ ಹೊರತು, ಎಲ್ಲಿಯೂ ಲಾಕ್​ಡೌನ್​ ಎನ್ನುವ ಪದವನ್ನೆ ಬಳಸದೆ ಇರುವುದು, ನಿಜಕ್ಕೂ ಕುತೂಹಲ ಮೂಡಿಸಿದೆ.

ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲೆಡೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬೆಳಗ್ಗೆ ಆರರಿಂದ ಹತ್ತು ಗಂಟೆಯವರೆಗೂ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. 10 ಗಂಟೆಯ ನಂತರ ಪೊಲೀಸರು ಮಧ್ಯಪ್ರವೇಶ ಮಾಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡದೆ ವ್ಯಾಪಾರಸ್ಥರೆ ವ್ಯಾಪಾರ ವಹಿವಾಟವನ್ನು ಬಂದ್​ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಸಿಎಂ ಯಡಿಯೂರಪ್ಪ, ಗಾರ್ಮೆಂಟ್ಸ್​ ನೌಕರರನ್ನು ಹೊರತುಪಡಿಸಿ ಉಳಿದ ಉತ್ಪಾಧನ ಘಟಕಗಳು ನಡೆಯುತ್ತವೆ. ಕಟ್ಟಡ ನಿರ್ಮಾಣ ಕಾರ್ಯ, ಕೃಷಿ ಚಟುವಟಿಕೆಗಳು ಸಾಮಾನ್ಯವಾಗಿ ನಡೆಯಲಿದೆ. ಇದಕ್ಕೆ ಯಾವುದೇ ಅಡ್ಡಿ ಇರೋದಿಲ್ಲ ಎಂದು ತಿಳಿಸಿದ್ದಾರೆ.

2 ವಾರದಲ್ಲಿ ಕಂಟ್ರೋಲ್​ಗೆ ಬಾರದಿದ್ದರೆ ಮತ್ತಷ್ಟು ಕಠಿಣ ಕ್ರಮ

ಇನ್ನೂಬ ತಮ್ಮ ಸುದ್ದಿಗೋಷ್ಟಿಯಲ್ಲಿ 14 ದಿನದ ಲಾಕ್​ಡೌನ್​ ಬಗ್ಗೆ ವಿವರಣೆ ನೀಡಿದ ಸಿಎಂ ಯಡಿಯೂರಪ್ಪ ಹಾಗೊಂದು ವೇಳೆ 2 ವಾರದಲ್ಲಿ ಕೊರೊನಾ ಕಂಟ್ರೋಲ್​ಗೆ ಬಾರದೆ ಇದ್ದಲ್ಲಿ ಈ ಬಿಗಿಕ್ರಮವನ್ನು ಇನ್ನಷ್ಟು ದಿನ ಮುಂದುವರಿಸಲಾಗುವುದು ಎಂದಿದ್ದಾರೆ. ಇನ್ನೂ ಅಂತಾರಾಜ್ಯದ ಗೂಡ್ಸ್​ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಸಾರಿಗೆ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಆಗಿರುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ, ಜನ ಸಂಚಾರಕ್ಕೆ ಅವಕಾಶ ಇಲ್ಲೆವಂದ ಮೇಲೆ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದಾ ಎಂದು ಪ್ರಶ್ನಿಸಿದ್ದಾರೆ.