ಸಿಗಂದೂರು ಹೊಳೆಬಾಗಿಲಿನಲ್ಲಿ ಎರಡು ಲಾಂಚ್‌ ಓಡಾಟ ಸ್ಥಗಿತ ! ಕಾರಣವೇನು?

Sigandur holebagilu two launch stop! What is the reason?

ಸಿಗಂದೂರು ಹೊಳೆಬಾಗಿಲಿನಲ್ಲಿ ಎರಡು ಲಾಂಚ್‌ ಓಡಾಟ ಸ್ಥಗಿತ ! ಕಾರಣವೇನು?
Sigandur holebagilu

SHIVAMOGGA | MALENADUTODAY NEWS |  Apr 22, 2024  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶ್ರೀಕ್ಷೇತ್ರ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಕ್ಕೆ ಹೋಗಲು ಇರುವ ಲಾಂಚ್‌ ಗಳ (ಕಡವು) ಪೈಕಿ  ಎರಡು ಲಾಂಚ್‌ಗಳು ಸ್ಥಗಿತಗೊಂಡಿವೆ ಎಂದು ‍ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಇಲ್ಲಿನ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸುಪರ್ಧಿಯಲ್ಲಿ ಕಾರ್ಯ ನಿರ್ವಹಿಸುವ ಎರಡು ಲಾಂಚ್‌ಗಳು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಒಂದು ಲಾಂಚ್‌ ಕಳೆದ ಏಪ್ರಿಲ್‌ 13ರಂದೇ ಸಂಚಾರ ಸ್ಥಗಿತಗೊಂಡಿದೆಯಂತೆ. ಇನ್ನೊಂದು ಲಾಂಚ್‌ ನಿನ್ನೆ ಭಾನುವಾರ ತಾಂತ್ರಿಕ ದೋಷ ಕಂಡುಬಂದು ಸ್ಥಗಿತಗೊಂಡಿದೆ. ಇದೀಗ ಒಂದೆ ಲಾಂಚ್‌ ಕೆಲಸ ಮಾಡುತ್ತಿದ್ದು ಇನ್ನೊಂದು ಲಾಂಚ್‌ನ್ನ  ಸಿಗಂದೂರು ಸೇತುವೆ ನಿರ್ಮಾಣ ಕಂಪನಿಗೆ ನೀಡಲಾಗಿದೆ. 

ಒಂದೆ ಲಾಂಚ್‌ನಿಂದಾಗಿ ಅಂಬಾರಗೋಡ್ಲು- ಕಳಸವಳ್ಳಿ ನಡುವಿನ ಓಡಾಟ ತ್ರಾಸದಾಯಕವಾಗಿದೆ. ಎರಡು ಕಡೆಗಳಲ್ಲಿ ರಶ್‌ ಹೆಚ್ಚಾಗುತ್ತಿದ್ದು ಸ್ಥಳೀಯರ ಓಡಾಟಕ್ಕೂ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. 

ನ್ಯೂಸ್‌ ಅಪ್‌ಡೇಟ್‌

ಇನ್ನೂ ಲಾಂಚ್‌ ಬಗ್ಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿದ್ದು, ನಿನ್ನೆ ಸಂಜೆ ವೇಳೆಗೆ ತಾಂತ್ರಿಕ ದೋಷದಿಂದ ಸ್ಥಗಿತವಾಗಿದ್ದ  ಲಾಂಚ್‌ ರಿಪೇರಿ ಮಾಡಲಾಗಿದ್ದು, ಆ ಬಳಿಕ ಎರಡು ಲಾಂಚ್ ಗಳು ತಮ್ಮ ಓಡಾಟ ಪ್ರಾರಂಭಿಸಿವೆ ಎಂದು ತಿಳಿದು ಬಂದಿದೆ.