ಪೇಟೆಗೆ ಹೋಗುತ್ತಿದ್ದಾಗ ದುರಂತ | ಕಾಲುವೆಗೆ ಬಿದ್ದು ಬೈಕ್‌ ಸವಾರ ಸಾವು |

Holehonur Bike rider dies after falling into canal while going to town

ಪೇಟೆಗೆ ಹೋಗುತ್ತಿದ್ದಾಗ ದುರಂತ | ಕಾಲುವೆಗೆ ಬಿದ್ದು ಬೈಕ್‌ ಸವಾರ ಸಾವು |
Holehonur

SHIVAMOGGA | MALENADUTODAY NEWS | Apr 24, 2024    

ಶಿವಮೊಗ್ಗ ಹೊಳೆಹೊನ್ನೂರು ಸಮೀಪ ಬೈಕ್‌ ಸವಾರರೊಬ್ಬರು ಕಾಲುವೆಗೆ ಬಿದ್ದ ಘಟನೆಯೊಂದು ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಆದರೆ ದಾರಿಮಧ್ಯೆದಲ್ಲಿ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ನೀಲಪ್ಪ 32 ವರ್ಷ ಮೃತರು. ಹೊಳೆಹೊನ್ನೂರು ಪಟ್ಟಣದ ಸಮೀಪ ಈ ಘಟನೆ ಸಂಭವಿಸಿದೆ. ದಾಸರಕಲ್ಲಹಳ್ಳಿಯ ನೀಲಪ್ಪ  ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆಗೆ ದಾಸರಕಲ್ಲಹಳ್ಳಿಯಿಂದ ಹೊಳೆಹೊನ್ನೂರಿಗೆ ಹೋಗುತ್ತಿದ್ದರು. ಈ ವೇಳೆ  ಪಟ್ಟಣದ ಸಮೀಪ ಬೈಕ್ ನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದಾರೆ. ತಕ್ಷಣವೇ ಪಟ್ಟಣದ ಆಸ್ಪತ್ರೆಗೆ ಸೇರಿಸಲಾಗಿತ್ತು ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.