ಮಗನಿಗಾದ ಮೋಸಕ್ಕೆ ಸೊಸೆಯನ್ನ ಕೊಂದ ತಂದೆ/ ಜೈಲು ಸೇರಿದ ಅಪ್ಪನನ್ನ ಕುಸಿದು ಬೀಳಿಸಿತ್ತು ಪುತ್ರನ ಶಾಕ್/ ‘ಸಮಾಧಾನ’ ಏಕೆ ಬೇಕು ಗೊತ್ತಾ? JP FLASHBACK
In JP's flashback, the story of an incident in which his father-in-law went to jail after killing his daughter-in-law
MALENADUTODAY.COM/ SHIVAMOGGA / KARNATAKA WEB NEWS
JP STORY/ SHIVAMOGGA
ಅಪರಾಧವನ್ನು ದ್ವೇಷಿಸು..ಆದ್ರೆ ಅಪರಾಧಿಯನ್ನಲ್ಲ. ಎನ್ನುವ ಜೈಲು ವಾಕ್ಯದಲ್ಲಿ ಗಂಭೀರ ಅರ್ಥವಿದೆ. ಕೋಪ ನೆತ್ತಿಗೇರಿದಾಗ.. ಬದುಕಿನ ಆ ಕ್ಷಣದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಎಂತವರ ಕೈಲಿಂದಲೂ ಪಾಪದ ಕೃತ್ಯವನ್ನು ಮಾಡಿಸಿ ಬಿಡುತ್ತೆ. ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿಯೇ ಇಂದು ಸಾಕಷ್ಟು ಮಂದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಒಬ್ಬ ಶಿಕ್ಷಕನ ದುರಂತ ಕಥೆಯಿದೆ. ಇದೆ ಇವತ್ತಿನ ಜೆಪಿ ಸ್ಟೋರಿ!!
ರಾಮಪ್ಪ ಅಂಡ್ ಸನ್ ಪ್ಯಾಮಿಲಿ
ಅದು ತಂದೆ ತಾಯಿ ಮಗನಿದ್ದ ಅಪ್ಪಟ ಸುಂದರ ಸಂಸಾರ. ವೃತ್ತಿಯಲ್ಲಿ ಶಿಕ್ಷಕನಾಗಿರುವ ರಾಮಪ್ಪ, ತನ್ನ ಬದುಕನ್ನು ಸರಳವಾಗಿಯೇ ಮುನ್ನೆಡೆಸಿಕೊಂಡು ಬಂದವರು. ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಿ ಒಳ್ಳೆಯ ಸೊಸೆಯನ್ನು ಮನೆಗೆ ಕರೆತರಬೇಕೆಂಬ ದೊಡ್ಡ ಕನಸು ಕಂಡಿದ್ದರು. ಹೀಗಾಗಿ ಗುರುತು ಪರಿಚಯವಿದ್ದ ಊರಿನಿಂದಲೇ ಮಗನಿಗೆ ಹೆಣ್ಣು ನೋಡಿದ ರಾಮಪ್ಪ ಮದುವೆಯನ್ನು ಅದ್ದೂರಿಯಾಗಿಯೇ ಮಾಡಿದರು. ಹೆಂಡ್ತಿ ಸೊಸೆ ಮಗನೊಂದಿಗೆ ನೆಮ್ಮದಿಯಾಗಿದ್ದ ರಾಮಪ್ಪನ ಸುಖ ಜೀವನ ಬಹುಕಾಲ ಸಾಗಲಿಲ್ಲ.
Read / ಬಿಎಸ್ವೈ ರೂಲ್ಸ್, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್ ಮಾಜಿ ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ?
ಸೊಸೆಯೇ ಮನೆಗೆ ಮುಳುವಾದಳು
ಇನ್ನೇನು ಒಳ್ಳೆ ಕಡೆ ಸಂಬಂದ, ಸಂಪ್ರದಾಯಸ್ಥ ಮನೆಯವಳು, ಮೈ ಕೈ ತುಂಬಿರುವ ಹೆಣ್ಣುಮಗಳನ್ನು ಹೊಸ್ತಿಲು ತುಳಿಸಿ, ಮನೆ ತುಂಬಿಸಿಕೊಂಡಿದ್ದರು. ಭವಿಷ್ಯದ ಕನಸ್ಸುಗಳನ್ನ ಮತ್ತೆ ಹೊಸದಾಗಿ ಹೆಣೆಯುತ್ತಿದ್ದ ಕುಟುಂಬಕ್ಕೆ ಆಘಾತವೇ ಬರಸಿಡಿಲಾಗಿತ್ತು. ಕೇಳಿಮಾಡಿ, ವಿಚಾರಿಸಿ ತಂದ ಹುಡುಗಿಗೆ ಯಾರದ್ದೋ ಲಿಂಕ್ ಇತ್ತು! ಇನ್ಯಾರೋ ಆಕೆಯನ್ನು ಒಲಿಸಿಕೊಂಡಿದ್ದರು, ಈಕೆಯು ಅದ್ಯಾರದ್ದೋ ಮೋಹದಲ್ಲಿದ್ದಳು! ಸಣ್ಣ ಅನುಮಾನದಿಂದ ಆರಂಭವಾದ ತಿಳಿದ ವಿಚಾರ, ಕೊನೆಗೆ ದೃಢವಾಗ ತೊಡಗಿತು. ಕೊನೆಗೊಂದು ದಿನ ಸೊಸೆಯ ಅನೈತಿಕ ಸಂಬಂಧವನ್ನು ರಾಮಪ್ಪ ಕಣ್ಣಾರೆ ಕಂಡು ಬಿಟ್ಟ.
Read / ಶಿವಮೊಗ್ಗದ ಹೋಟೆಲ್ ವಿರುದ್ಧ ಕೇಸ್ ಗೆದ್ದ ಬೆಂಗಳೂರು ಗಾಂಧಿ ಬಜಾರ್ನ ವಿದ್ಯಾರ್ಥಿ ಭವನ
ಬುದ್ದಿ ಕೇಳದ ಸೊಸೆಯನ್ನ ಕೊಂದು ಬಿಟ್ಟ
ಸೊಸೆಯಾಗಿದ್ದವಳು..ಬೇಲಿ ಹಾರುವ ಬುದ್ದಿಯನ್ನು ಹೊಂದಿದ್ದಳು. ಮಗನಿಲ್ಲದ ಹೊತ್ತಿನಲ್ಲಿ ಸೊಸೆ ಬೇರೊಬ್ಬ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ರಾಮಪ್ಪನಿಗೆ ಸಹಿಸಲು ಸಾಧ್ಯವಾಗಲಿಲ್ಲ. ನೀನು ನನ್ನ ಮಗನಿಗೆ ಮೋಸ ಮಾಡುತ್ತಿದ್ದೀಯ ಅವನ ಬಾಳು ನಮ್ಮ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿದ್ದೀಯ.., ತಿದ್ಕೋ ಅಂತಾ ಸಾಕಷ್ಟು ಬಾರಿ ಬುದ್ದಿ ಹೇಳಿದ್ದಾರೆ. ಇಷ್ಟಿದ್ದರೂ ಸೊಸೆ ನಡತೆಯ ಬಗ್ಗೆ ರಾಮಪ್ಪ ಇನ್ನೆಲ್ಲೂ ಬಾಯಿ ಬಿಟ್ಟಿರಲಿಲ್ಲ. ಮನೆಯ ಗುಟ್ಟು ರಟ್ಟು ಮಾಡದ ರಾಮಪ್ಪ, ಸೊಸೆಯನ್ನೆ ತಿದ್ದಿ ಬದುಕು ಎಂದು ತಿಳಿ ಹೇಳಿ ಸರಿದಾರಿಗೆ ತರಲು ಹೊರಟಿದ್ದ. ಆದರೆ ಆಕೆ ಇದನ್ನ ಮಾವನ ವೈಫಲ್ಯವೆಂದುಕೊಂಡಳೇ ಹೊರತು, ತನ್ನದು ತಪ್ಪು ಎಂದು ಸರಿದಾರಿಗೆ ಮರಳಲಿಲ್ಲ. ಅಂದೊಂದು ದಿನ ಮಾವನ ಮಾತನ್ನು ಮೀರಿ , ಸೊಸೆ ಗಂಡನಿಲ್ಲದ ಹೊತ್ತಿನಲ್ಲಿ ತನ್ನ ಹಳೇ ಛಾಳಿ ಮುಂದುವರೆಸಿದ್ದಳು. ಇದರಿಂದ ಕೋಪಗೊಂಡ ರಾಮಪ್ಪ ಸೊಸೆಯನ್ನು ಆನ್ ದಿ ಸ್ಪಾಟ್ ಕೊಲೆ ಮಾಡಿಬಿಟ್ಟ.ಆಕ್ರೋಶದ ಭರದಲ್ಲಿ ಸೊಸೆಯನ್ನೇ ಕೊಂದ ಮಾವ, ಆನಂತರ ತನ್ನ ಮಗನಿಗೆ ಇದ್ದ ವಾಸ್ತವ ಹೇಳಿದ್ದ. ಅಷ್ಟೆ ಅಲ್ಲದೆ ಪೊಲೀಸರಿಗೆ ಶರಣಾಗಿದ್ದ
Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/ ಕಾಂಗ್ರೆಸ್ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?
ಶಿಕ್ಷೆ ಅನುಭವಿಸ್ತಿದ್ದವನಿಗೆ ಕಾದಿತ್ತು ಮತ್ತೊಂದು ಶಾಕ್
ಜೈಲು ಸೇರಿದ್ದ ರಾಮಪ್ಪನಿಗೆ ಕೋರ್ಟ್ ಶಿಕ್ಷೆಕೊಡುತ್ತದೆ. ಆತನೆ ತಪ್ಪೊಪ್ಪಿಕೊಂಡಿದ್ದರಿಂದ ರಾಮಪ್ಪನಿಗೆ ಜೀವಾವಧಿ ಶಿಕ್ಷೆಯಾಗಿತ್ತು.. ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಲೇ, ಓದಿಗೆ ಒರೆ ಹಚ್ಚಿದ. ಜೈಲಿನಲ್ಲಿರುವ ಇತರೆ ಕೈದಿಗಳಿಗೆ ಮೆಚ್ಚುಗೆಯಾಗಿದ್ದ ರಾಮಪ್ಪ ಎಲ್ಲರ ಪ್ರೀತಿ ಗಳಿಸಿದ್ದ. ಆದರೆ ಸಿಟ್ಟಿನ ಭರದಲ್ಲಿ ಮಾಡಿದ ಕೊಲೆ ಆತನನ್ನ ಕಾಡುತ್ತಲೇ ಇತ್ತು. ಆಕೆಯನ್ನು ಆಕೆಯ ಪಾಡಿಗೆ ಬಿಟ್ಟು ಅವಳಿಂದ ಕುಟುಂಬ ದೂರವಾಗಿದ್ದರೆ, ಈ ಸಮಸ್ಯೆಯಿರುತ್ತಿರಲಿಲ್ಲ. ಅವಳನ್ನು ಕೊಂದು ತಾನು ನೆಮ್ಮದಿಯಾಗಿಲ್ಲ. ಮನೆಯಲ್ಲಿಯು ನೆಮ್ಮದಿಯಿಲ್ಲ. ಇದೇಂಥಾ ಘೋರವಾಯ್ತು ಎನ್ನುತ್ತಾ ಯೋಚಿಸ್ತಿದ್ದ ರಾಮಪ್ಪನಿಗೆ ಮತ್ತೊಂದು ಶಾಕ್ ಕಾದಿತ್ತು. 2020 ರ ಅಕ್ಟೋಬರ್ 2 ರಂದು. ಜೈಲರ್ ರಾಮಪ್ಪನಿರುವ ಸೆಲ್ ನತ್ತ ಬಂದು ನಿಮಗೊಂದು ಫೋನ್ ಕರೆ ಬಂದಿದೆ ಎಂದು ತಿಳಿಸಿದ್ದರು. ಫೋನ್ ನಲ್ಲಿ ಮಾತನಾಡುವಾಗಲೇ ರಾಮಪ್ಪ ಕುಸಿದು ಬಿದ್ದಿದ್ದ. ಆ ಕಡೆಯಿಂದ ರಾಮಪ್ಪ ನಿನ್ನ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಎಂದು ಧ್ವನಿಯೊಂದು ವಿಷಯ ತಿಳಿಸಿತ್ತು.
ಮಗನಿಗಾಗಿ ಜೈಲು ಸೇರಿದ ತಂದೆ
ಯಾವ ಮಗನ ಬದುಕು ಚೆನ್ನಾಗಿರಲಿ ಎಂದು ರಾಮಪ್ಪ ಸೊಸೆಯನ್ನು ಕೊಲೆ ಮಾಡಿದನೋ..ಅದೇ ಕೊಲೆ ರಾಮಪ್ಪನ ನೆಮ್ಮದಿಯನ್ನು ಕಸಿದುಕೊಂಡಿತು.ಅತ್ತ ಮಗನೂ ಇಲ್ಲ ಇತ್ತ ಸೊಸೆಯೂ ಇಲ್ಲ. ಉಳಿದಿದ್ದು ಹೆಂಡತಿ ಮನೆಯಲ್ಲಿ ರಾಮಪ್ಪ ಜೈಲಿನಲ್ಲಿ. ಮಗನಿಗೆ ವಿಚ್ಚೇಧನ ನೀಡುವಂತೆ ಹೇಳಿದ್ದರೂ..ಅತ್ತ ಸೊಸೆಯೂ ಬದುಕುತ್ತಿದ್ದಳು.. ಇತ್ತ ಇದ್ದ ಕುಟುಂಬವನ್ನಾದರೂ ರಾಮಪ್ಪ ಚೆನ್ನಾಗಿ ನೋಡಿಕೊಳ್ಳಬಹುದಿತ್ತು. ಆದರೆ ವಿದಿ ಹಾಗಾಗಲು ಬಿಡಲಿಲ್ಲ. ಮಗ ಹೆಂಡ್ತಿ ಕಳೆದುಕೊಂಡ ,ಅಪ್ಪ ಜೈಲಿಗೆ ಹೋದ, ದುಃಖದಲ್ಲಿ ಕೊರಗಿ ಪುತ್ರ ಸಾವಿನ ಮನೆ ಕದತಟ್ಟಿದ, ಗಂಡನ ಜೈಲು, ಮಗನ ಸಾವು ಕಂಡು ಆ ತಾಯಿ ಎದೆಗಟ್ಟಿಮಾಡಿಕೊಂಡು ದೇವರಿಗೆ ದೂರವಾಗಿ ಬದುಕನ್ನ ಕಲ್ಲಂತೆ ನಡೆಸುತ್ತಿದ್ಧಾಳೆ. ಸ್ನೇಹಿತರೇ, ಈ ಸ್ಟೋರಿಯನ್ನ ಹೇಳುವ ಉದ್ದೇಶವಿಷ್ಟೆ… ಎಲ್ಲದಕ್ಕಿಂತ ದೊಡ್ಡ ದಾನ..ಸಮಾಧಾನ.ತಾಳ್ಮೆ.
ಇದನ್ನು ಸಹ ಓದಿ
Read /ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಮೊಹಮದ್ ನಿಹಾಲ್ ನೇಮಕ
Read /ಮತದಾನ ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ
Read / ಬಿಎಸ್ವೈ ರೂಲ್ಸ್, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್ ಮಾಜಿ ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ?
Read / BREAKING NEWS/ ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್ ದಾವಣಗೆರೆ ಎಲಿಫೆಂಟ್ ಸಕ್ಸಸ್/ ಸೆರೆಯಾಗಿದ್ದೇಗೆ ವೈಲ್ಡ್ ಟಸ್ಕರ್!
Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ 9.5 KG ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ?
Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ! ಸಣ್ಣ ಅಸಡ್ಡೆಗೆ ಜೀವವೇ ಹೋಯಿತೆ? ಪೋಷಕರೇ ಪ್ಲೀಸ್ ಎಚ್ಚರ ವಹಿಸಿ!
Read / ಶಿವಮೊಗ್ಗದ ಹೋಟೆಲ್ ವಿರುದ್ಧ ಕೇಸ್ ಗೆದ್ದ ಬೆಂಗಳೂರು ಗಾಂಧಿ ಬಜಾರ್ನ ವಿದ್ಯಾರ್ಥಿ ಭವನ
Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು?
Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/ ಕಾಂಗ್ರೆಸ್ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News