ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತರು!/ ಚುನಾವಣಾ ಸ್ವಾರಸ್ಯ!

The wife is richer than mla Hartalu Halappa!/ Election interesting!

ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತರು!/ ಚುನಾವಣಾ  ಸ್ವಾರಸ್ಯ!
ಶಾಸಕರಿಂತಲೂ ಅವರ ಪತ್ನಿಯೇ ಸಿರಿವಂತರು!/ ಚುನಾವಣಾ ಸ್ವಾರಸ್ಯ!

MALENADUTODAY.COM/ SHIVAMOGGA / KARNATAKA WEB NEWS  

KARNATAKAELECTION

ನಿನ್ನೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ (sagara assembly constituency) ಆಯ್ಕೆ ಬಯಸಿ, ಬಿಜೆಪಿಯಿಂದ ಹರತಾಳು ಹಾಲಪ್ಪ ತಮ್ಮ ನಾಮಪತ್ರವನ್ನು ಸಲ್ಲಿಸಿದ್ರು. ಈ ವೇಳೆ ಅವರು ಸಲ್ಲಿಸಿದ ಆಸ್ತಿ ವಿವರ ಕುತೂಹಲ ಮೂಡಿಸಿದೆ. 

ಶಾಸಕರ ಪತ್ನಿಯೇ ಹೆಚ್ಚು ಸಿರಿವಂತರು

ನಾಮಪತ್ರ ಸಲ್ಲಿಕೆಯಲ್ಲಿ ಹಾಲಪ್ಪನವರು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರದಲ್ಲಿ ಹರತಾಳು ಹಾಲಪ್ಪರವರಿಗಿಂತ ಅವರ ಪತ್ನಿ ಯಶೋಧ ಅವರು ಹೆಚ್ಚು ಆಸ್ತಿ ಹೊಂದಿರುವುದಾಗಿ ತಿಳಿಸಲಾಗಿದೆ. 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

ಎಷ್ಟಿದೆ ಆಸ್ತಿ

ಹಾಲಪ್ಪನವರು 2,75,11,577 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಯಶೋಧ ಅವರು 3,49,90,897 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ ಎಂದು ಹಾಲಿ ಶಾಸಕರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.ಇನ್ನು, ಹಾಲಪ್ಪ ಅವರ ತಾಯಿಯವರು 67,91,324 ರೂ. ಮೌಲ್ಯದ ಆಸ್ತಿ ಹೊಂದಿದ್ದಾರಂತೆ. 

ಕ್ಯಾಶ್ ಎಷ್ಟಿದೆ? 

ಹಾಲಪ್ಪ ಬಳಿ 10 ಲಕ್ಷ ರೂ. ನಗದು, ಇವರ ಪತ್ನಿ ಬಳಿ 9.50 ಲಕ್ಷ ರೂ. ನಗದು ಹಾಗೂ ಇವರ ತಾಯಿಯ ಬಳಿ 2 ಲಕ್ಷ ರೂ. ನಗದು ಇದೆ.  ಬ್ಯಾಂಕ್ ನಲ್ಲಿ  ಹರತಾಳು ಹಾಲಪ್ಪನವರು  96,87,525 ಲಕ್ಷ ರೂ. ಠೇವಣಿ ಇಟ್ಟಿದ್ಧಾರಂತೆ.. ಇವರ ಪತ್ನಿ ಬಳಿ 22,14,546 ಲಕ್ಷ ರೂಪಾಯಿ ಡಿಪಾಸಿಟ್ ಇದೆ. ಇನ್ನೂ ಶಾಸಕರ  ಹೆಸರಿನಲ್ಲಿ 63,500 ರೂ. ಮೌಲ್ಯದ ಷೇರು ಬಾಂಡ್ ಗಳಿವೆ. ಇವರ ಪತ್ನಿ ರವರ ಬಳಿ 58,25,711 ಲಕ್ಷ ರೂಪಾಯಿ ಮೌಲ್ಯದ ಷೇರುಗಳಿವೆ.   ಹಾಲಪ್ಪನವರ ತಾಯಿ ಬಳಿ 1,500 ರೂ. ಷೇರು ಬಾಂಡ್ ಇದೆ ಎಂದು ಹೇಳಲಾಗಿದೆ. 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ಚಿನ್ನ, ಬೆಳ್ಳಿ, ಕಾರು

ಬೆಂಗಳೂರಿನ ವಾಸದ ಮನೆಗೆ 4 ಲಕ್ಷ ರೂಪಾಯಿ ಅಡ್ವಾನ್ಸ್​ ‌ನೀಡಿದ್ದೇವೆ ಎಂದು ಹರತಾಳು ಹಾಲಪ್ಪನವರು ಲೆಕ್ಕಕೊಟ್ಟಿದ್ದಾರೆ. ಹಾಲಪ್ಪ ಹಾಗೂ  ಯಶೋಧರವರ ಬಳಿ ತಲಾ ಒಂದೊಂದು ಕಾರು ಇದೆ. ಹಾಲಪ್ಪರವರು 200 ಗ್ರಾಂ ಚಿನ್ನಾಭರಣ ಹೊಂದಿದ್ದರೆ, ಅವರ ಪತ್ನಿ ಯಶೋಧ 1.180 ಗ್ರಾಂ ಚಿನ್ನಾಭರಣ ಜೊತೆಗೆ 5 ಕೆ.ಜಿ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಹೊಂದಿದ್ದಾರಂತೆ. ಇವರ ತಾಯಿಯ ಬಳಿ 890 ಗ್ರಾಂ ಚಿನ್ನಾಭರಣವಿದೆ ಎಂದು ಮಾಹಿತಿ ನೀಡಿದ್ದಾರೆ
Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

ಆಸ್ತಿ ಪಾಸ್ತಿ ಇತ್ಯಾದಿ

ಹರತಾಳು ಹಾಲಪ್ಪನವರ ಹೆಸರಿನಲ್ಲಿ 61,35,000 ರೂ. ಮೌಲ್ಯದ ಕೃಷಿ ಭೂಮಿ ಇದೆ. ಅವರ ಪತ್ನಿ ಬಳಿ 8,25,000 ರೂ. ಮೌಲ್ಯದ ಕೃಷಿ ಭೂಮಿ ಇದೆ. ಇವರ ತಾಯಿಯ ಬಳಿ 2 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಇದೆ. ಹಾಲಪ್ಪನವರ ಬಳಿ 3.45 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಇವರ ಪತ್ನಿ ಬಳಿ 1.20 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಇದೆ. ಹಾಲಪ್ಪನವರ ಬಳಿ 12 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಇದೆ. ಇವರ ಪತ್ನಿ ಹೆಸರಿನಲ್ಲಿ 44 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡ ಇದೆ ಎಂದು ಹಾಲಿ ಶಾಸಕರು ಚುನಾವಣಾ ಆಯೋಗಕ್ಕೆ ಲೆಕ್ಕ ಕೊಟ್ಟಿದ್ದಾರೆ. 



ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News