ಶಿವಮೊಗ್ಗ ಬಳಿಕ ಸಾಗರ ಸಂಚಲನ/ ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?

Is Haratalu Halappa, the sitting MLA from Sagar constituency, inviting Dr. Rajnandini, daughter of Kagodu Thimmappa, to join the BJP?

ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?
ಶಿವಮೊಗ್ಗ ಬಳಿಕ ಸಾಗರ ಸಂಚಲನ/ ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?

MALENADUTODAY.COM/ SHIVAMOGGA / KARNATAKA WEB NEWS

ಶಿವಮೊಗ್ಗ ನಗರ ಬಿಜೆಪಿಯಲ್ಲಿ ಈಶ್ವರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿ ಸುದ್ದಿ ಹೊರಬಿದ್ದ ಬೆನ್ನಲ್ಲೆ ಇದೀಗ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಬಂಡಾಯದ ಸುದ್ದಿಯೊಂದು ನ್ಯೂಸ್ ಆಗುತ್ತಿದೆ

ಟಿಕೆಟ್ ಸಿಗದಿದ್ದಕ್ಕೆ ರಾಜನಂದಿನಿ ಬಂಡಾಯ ಸಾರಿದರೇ?

ಸಾಗರ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪ ರವರ ಪುತ್ರಿ ರಾಜನಂದಿನಿ ಯವರು ,ಕಾಂಗ್ರೆಸ್​ನಲ್ಲಿ ಬಂಡಾಯ ಸಾರಲು ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾದ ಬೆಳವಣಿಗೆಳು ನಡೆಯುತ್ತಿದ್ದು, ಬಹುತೇಕ ಒಂದರೆಡು ದಿನಗಳಲ್ಲಿ ಸಾಗರ ದಲ್ಲಿ ಭಿನ್ನಮತ ಸ್ಫೋಟವಾಗುವ ಲಕ್ಷಣಗಳಿವೆಯಂತೆ.

ಅಸಮಾಧಾನಿತರಿಗೆ ಹರತಾಳು ಹಾಲಪ್ಪ ಗಾಳ

ಇದೇ ಮೊದಲ ಸಲ ತಮ್ಮ ಮಾಜಿ ಸ್ನೇಹಿತ ಬೇಳೂರು ಗೋಪಾಲಕೃಷ್ಣರನ್ನು ಚುನಾವಣಾ ಅಖಾಡದಲ್ಲಿ ಎದುರಿಸುತ್ತಿರುವ ಹಾಲಿ ಶಾಸಕ ಹರತಾಳು ಹಾಲಪ್ಪ ಕಾಂಗ್ರೆಸ್​ನಲ್ಲಿನ ಅಸಮಾಧಾನಿತರನ್ನು ಸೆಳೆಯಲು ಮುಂದಾಗಿದ್ದು, ಆಪ್ತ ಬಳಗದಲ್ಲಿ ಮುಂದಿನ ರಾಜಕೀಯದ ಆಟ ನೊಡುತ್ತಿರಿ ಎಂದಿರುವ ಎನ್ನುತ್ತಿದ್ದಾರಂತೆ.

ರಾಜನಂದಿನಿ ಬಿಜೆಪಿ ಸೇರುತ್ತಾರಾ

ಬೇಳೂರು ಗೋಪಾಲಕೃಷ್ಣರಿಗೆ  ಕಾಂಗ್ರೆಸ್ ಟಿಕೆಟ್ ಸಿಕ್ಕ ಬೆನ್ನಲ್ಲೆ ಡಾ.ರಾಜನಂದಿನಿ ಬೇಸರಗೊಂಡಿದ್ದರು. ಅಲ್ಲಿವರೆಗೂ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಆನಂತರದ ಬೆಳವಣಿಗೆಯಲ್ಲಿ ಬೇಳೂರು ಗೋಪಾಲಕೃಷ್ಣರಿರುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆರಂಭದಲ್ಲಿ ಮುನಿಸು ತೋರಿದ್ದ ಕಾಗೋಡು ತಿಮ್ಮಪ್ಪನವರು, ನಮ್ಮ ನಮ್ಮ ತಪ್ಪಿಗೆ ಪಕ್ಷವನ್ನು ಸೋಲಿಸುವುದು ಸರಿಯಲ್ಲ, ಎಲ್ಲರೂ ಸೇರಿ ಬೇಳೂರು ಗೋಪಾಲಕೃಷ್ಣರನ್ನು ಗೆಲ್ಲಿಸೋಣ ಎಂದಿದ್ದರು. ಅಲ್ಲದೆ ಹರತಾಳು ಹಾಲಪ್ಪರನ್ನು ಟೀಕಿಸಿದ್ದರು. ಇನ್ನೊಂದೆಡೆ ಬೇಳೂರು ಗೋಪಾಲಕೃಷ್ಣರವರು ಸಹ ಟಿಕೆಟ್ ಪಡೆದು ನಗರ ಪ್ರವೇಶ ಮಾಡುತ್ತಲೇ ಕಾಗೋಡು ತಿಮ್ಮಪ್ಪನವರ ಕಾಲಿಗೆ ಬಿದ್ದು, ನೀವೆ ಗೆಲ್ಲಿಸಬೇಕು ಎಂದು ಚುನಾವಣೆ ನಡೆಸುವ ನೇತೃತ್ವವನ್ನುಮಾವನ ಹೆಗಲಿಗೆ ಹಾಕಿದ್ದರು. 

ಮೇಲ್ನೋಟಕ್ಕೆ

ಇದೆಲ್ಲಾ ಮೇಲ್ನೋಣಕ್ಕೆ ನಡೆದ ಘಟನೆಗಳು, ಇದರ ಹಿಂದಿನ ತೆರೆಯಲ್ಲಿ ಬಿಜೆಪಿಯಲ್ಲಿಯೇ ತೀವ್ರ ಸ್ವರೂಪ ವಿರೋಧ ಹೊಂದಿರುವ ಶಾಸಕ ಹರತಾಳು ಹಾಲಪ್ಪ, ಕಾಂಗ್ರೆಸ್​ನ ಟಿಕೆಟ್ ಆಕಾಂಕ್ಷಿಗಳಿಗೆ ವರಿಷ್ಟರ ಮೂಲಕ ಗಾಳ ಹಾಕುತ್ತಿದ್ದಾರೆ ಎಂದು ಸಾಗರದಲ್ಲಿ ಜೋರು ಸುದ್ದಿ ಓಡಾಡುತ್ತಿದೆ. 

ಮೂವರರಿಗೆ ಹರತಾಳು ಹಾಲಪ್ಪ ಗಾಳ? 

ಬೇಳೂರು ಗೋಪಾಲಕೃಷ್ಣರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಲ್ಲಿಕಾರ್ಜುನ್ ಹಕ್ರೆ , ಹುನಗೋಡು ರತ್ನಾಕರ್​ ಮತ್ತು ಡಾ.ರಾಜನಂದಿನಿಯವರನ್ನ ಹಾಲಿ ಶಾಸಕರು ತಮ್ಮ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾತುಕತೆಯನ್ನು ನಡೆಸಿದ್ದಾರಂತೆ. ಅಲ್ಲದೆ  ತಮ್ಮ ಆಪ್ತ ವರಿಷ್ಟರಾದ ಬಿಎಸ್​ ಯಡಿಯೂರಪ್ಪನವರ ಜೊತೆಗೂ ಕೆಲವರನ್ನ ಮಾತನಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇವತ್ತು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರನ್ನು ಡಾ.ರಾಜನಂದಿನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಔಟ್ ಪುಟ್ ಏನು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಡಾ.ರಾಜನಂದಿನಿ ತಮ್ಮ ತಂದೆಯ ನಿಲುವಿಗೆ ವಿರುದ್ಧವಾಗಿ ಬಂಡಾಯದ ಹೆಜ್ಜೆ ಇಡುತ್ತಿದ್ದಾರಾ ಎಂಬ ಪ್ರಶ್ನೆಯು, ತಾಲ್ಲೂಕಿನ ರಾಜಕಾರಣದ ಚಟುವಟಿಕೆಗಳ ನಡುವೆ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ  ಕಾಗೋಡು ತಿಮ್ಮಪ್ಪರವರ ವಲಯದಲ್ಲಿ ಗುರುತಿಸಿಕೊಂಡ ನಾಯಕರಿಂದಾಗಲಿ, ಡಾ.ರಾಜನಂದಿನಿಯವರ ಕಡೆಯಿಂದಾಗಿ ಬಂದಿಲ್ಲ. ಅವರ ಸ್ಪಷ್ಟನೆಯೊಂದಿಗೆ ಸದ್ಯ ಎದ್ದಿರುವ ರಾಜಕೀಯ ಸುದ್ದಿಗಳಿಗೆ ಸ್ಪಷ್ಟತೆ ಸಿಗಲಿದೆ. 

ಪುತ್ರಿಯ ಭಿನ್ನಮತ ಬೆಂಬಲಿಸುತ್ತಾರಾ ಕಾಗೋಡು ತಿಮ್ಮಪ್ಪ?

ಈ ಮಧ್ಯೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರು ತಮ್ಮ ಪುತ್ರಿಗಾಗಿ ಟಿಕೆಟ್ ಕೇಳಿದ್ದರಾದರೂ, ಅದನ್ನ ನಿರಾಕರಿಸಿದ ನಂತರ ಹಟಹಿಡಿಯಿದೇ ಬೇಳೂರು ಗೋಪಾಲಕೃಷ್ಣರ ಪರ ಪ್ರಚಾರಕ್ಕೆ ಹೊರಟಿದ್ದಾರೆ. ಇದೀಗ ಅವರ ಪುತ್ರಿ ಡಾ.ರಾಜನಂದಿನಿ ಭಿನ್ನಮತ ಸಾರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ತಮ್ಮ ಪುತ್ರಿ ಹಾಗೂ ಆಪ್ತರ ಭಿನ್ನಮತಕ್ಕೆ ಮಾಜಿ ಸಚಿವರ ಅಭಿಪ್ರಾಯವೇನು ಎಂಬುದನ್ನ ಅವರೇ ಹೇಳಬೇಕಿದೆ. 

ಇದನ್ನು ಸಹ ಓದಿ

Read /ಅಪ್ಪನ ನಿವೃತ್ತಿ ಬಗ್ಗೆ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದೇನು?

Read /KS Eshwarappa/  ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?

Read / KS Eshwarappa/  ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / BREAKING NEWS/  ಚನ್ನಗಿರಿಯಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್​ ಮೇಲೆ ದಾಳಿ 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ, ಭದ್ರಾವತಿಗೆ ಮಂಗೋಟೆ ರುದ್ರೇಶ್​ !ಶಿವಮೊಗ್ಗ ನಗರ ಮಾತ್ರವೇ ಸಸ್ಪೆನ್ಸ್​? ಬಿಜೆಪಿ ಲಿಸ್ಟ್​ನಲ್ಲಿ ಶಿವಮೊಗ್ಗ ಜಿಲ್ಲೆ ವಿವರ ಇಲ್ಲಿದೆ 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News