ಇವಿಎಂ ಬಗ್ಗೆ ಸಿಗುವ ಈ ಖಾತರಿ ದಾಖಲೆ ಬಗ್ಗೆ ಗೊತ್ತಾ? ಟೆಸ್ಟೆಡ್ ವೋಟ್​, ಚಾಲೆಂಜ್​ ​ ವೋಟ್, ಟೆಂಡರ್ಡ್​ ವೋಟ್​ ಅಂದರೆ ಗೊತ್ತಾ? ಇವೆಷ್ಟು ಮುಖ್ಯ ಓದಿ ನೋಡಿ

Do you know about this guarantee document about EVMs? Do you know what tested vote, challenge vote, tendered vote is? Read how important these are

ಇವಿಎಂ ಬಗ್ಗೆ ಸಿಗುವ ಈ ಖಾತರಿ ದಾಖಲೆ ಬಗ್ಗೆ ಗೊತ್ತಾ? ಟೆಸ್ಟೆಡ್ ವೋಟ್​, ಚಾಲೆಂಜ್​ ​ ವೋಟ್, ಟೆಂಡರ್ಡ್​ ವೋಟ್​  ಅಂದರೆ ಗೊತ್ತಾ? ಇವೆಷ್ಟು ಮುಖ್ಯ ಓದಿ ನೋಡಿ

KARNATAKA NEWS/ ONLINE / Malenadu today/ May 10, 2023GOOGLE NEWS

ಶಿವಮೊಗ್ಗ/ ಮತದಾನಕ್ಕೆ ಅಂತಾ ಮತಗಟ್ಟೆಗೆ ಹೋಗುವಾಗ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳು ಏನೇನು ಅನ್ನುವದನ್ನ ತಿಳಿದುಕೊಂಡರೆ ಅನುಮಾನಗಳಿಗೆ ಆಸ್ಪದವೇ ಇರೋದಿಲ್ಲ .

ಈ ಸಂಬಂಧ ಮತದಾನಕ್ಕೆ ಸಂಬಂಧಿಸಿದ ಇಂಟ್ರಸ್ಟಿಂಗ್ ಮಾಹಿತಿಗಳನ್ನು ಮಲೆನಾಡು ಟುಡೇ ನಿಮ್ಮ ಮುಂದೆ ಇಡುತ್ತಿದೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮತಗಟ್ಟೆಯಲ್ಲಿ ಕಾನೂನು ಪ್ರತಿಯೊಂದಕ್ಕೂ ಅವಕಾಶ ಮಾಡಿಕೊಡುತ್ತದೆ. ಅದರಲ್ಲಿಯು ವಿಶೇಷವಾಗಿ ಮತದಾರನೊಬ್ಬ ಸಮರ್ಪಕವಾಗಿ ನಿಯಮಾವಳಿ ಪ್ರಕಾರ ನಡೆದುಕೊಳ್ಳದಿದ್ದರೇ ಆತನ ಮತದಾನದ ಹಕ್ಕನ್ನ ನಿರಾಕರಿಸಿಬಹುದು! ನಿಮ್ಮ ವೋಟು ಯಾರೋ ಚಲಾಯಿಸಿದ್ದರೇ, ಅದನ್ನ ನೀವು ಅಲ್ಲಿಯೇ ಸಾಬೀತು ಮಾಡಬಹುದು! ಅಥವಾ ನಿಮ್ಮ ಗುರತನ್ನೇ ಯಾರೋ ಪ್ರಶ್ನಿಸಿದರೇ ಅದನ್ನ ಚಾಲೆಂಜ್ ಮಾಡಬಹುದು! ಅಷ್ಟೆ ಏಕೆ ಗೌಪತ್ಯೆ ಕಾಪಾಡದಿದ್ದರೇ ನೀವು ವೋಟಲು ಅವಕಾಶವೇ ಸಿಗೋದಿಲ್ಲ ಇದೆಲ್ಲಾ ಏನು ಅನ್ನುವುದರ ಉತ್ತರ ಡಿಟೇಲ್ಸ್ ಆಗಿ ಓದಿ

ಇದನ್ನ ಸಹ ಓದಿ / ಇವಿಎಂ ಜೊತೆ ವಿವಿ ಪ್ಯಾಟ್ ಏತಕ್ಕಾಗಿ ಇರುತ್ತೆ ಗೊತ್ತಾ? ಮತಗಟ್ಟೆಯಲ್ಲಿ ಏನೇನೆಲ್ಲಾ ಇರುತ್ತೆ? ಮತದಾನದ ಇಂಟ್ರಸ್ಟಿಂಗ್ ಸಂಗತಿಗಳು!

ಮೊದಲ ಮತದಾರನೇ ಖಾತರಿದಾರ

ಮತಗಟ್ಟೆಯೊಂದರಲ್ಲಿ ಬೆಳಗ್ಗೆಯೇ ಅಣಕು ಮತದಾನ ಮುಗಿದ ಮೇಲೆ ಇವಿಎಂಗಳನ್ನು ಸೀಲ್ ಮಾಡಿ, ಏಳು ಗಂಟೆಗೆ ಅಸಲಿ ಮತದಾನ ಆರಂಭವಾಗುತ್ತದೆ. ಈ ವೇಳೆ ಮತ ಹಾಕಲು ಮತಗಟ್ಟೆಗೆ ಬರುವ ಮೊದಲ ಮತದಾರನಿಗೆ ಇವಿಎಂನ್ನ ತೋರಿಸಿ, ಇಲ್ಲಿ ಯಾವುದೇ ಮತವೂ ದಾಖಲಾಗಿಲ್ಲ ಎಂದು ಅಧಿಕಾರಿಗಳು ತೋರಿಸುತ್ತಾರೆ.  ರಿಸಲ್ಟ್ ಬಟನ್ ಒತ್ತಿದರೆ ಟೋಟಲ್​ ಪೊಲ್​ ವೋಟ್​ ಶೂನ್ಯ ತೋರಿಸುತ್ತಿದೆ ಎಂದು ಆತನಿಂದ ಸಹಿ ಪಡೆಯುತ್ತಾರೆ. 

ಮತದಾನ ಆರಂಭ ಮತ್ತು ಅಂತ್ಯ

ಅಲ್ಲಿಂದ ಮತದಾನ ಆರಂಭವಾಗುತ್ತದೆ. ಆನಂತರ ಪ್ರತಿ ಎರಡು ಗಂಟೆಗೊಮ್ಮೆ ಅಂಕಿಅಂಶಗಳನ್ನು ನೀಡಲಾಗುತ್ತದೆ. ರಿಸಲ್ಟ್ ಪೋಲ್​ನ ಬಟನ್​ ಗಂಟೆ ಗಂಟೆಗೆ ಎಷ್ಟು ಮತದಾನವಾಗುತ್ತದೆ ಎಂಬ ಅಂಕಿ ಅಂಶಗಳನ್ನು ನೀಡಲಾಗುತ್ತದೆ. ಸಂಜೆ 6 ಗಂಟೆಯ ನಂತರ ಮತಗಟ್ಟೆಯ 200 ಮೀಟರ್​ ವ್ಯಾಪ್ತಿಯೊಳಗೆ ಪ್ರವೇಶ ಬಂದ್ ಆಗುತ್ತದೆ. ಒಳಗಿದ್ದವರಿಗೆ ವೋಟಿನ ಅವಕಾಶ ನೀಡಲಾಗುತ್ತದೆ. 

ಮತದಾರನಿಗೆ ಹಕ್ಕು ನಿರಾಕರಿಸಬಹುದೆ?

ಮತದಾರ ಒಬ್ಬನಿಗೆ ಅಧಿಕಾರಿಗಳು ಮತಹಾಕುವುದನ್ನ ನಿರಾಕರಿಸಬಹುದು. ಮತದಾರನೊಬ್ಬ ಇಂಕ್ ಹಾಕಿಸಿಕೊಳ್ಳುವುದನ್ನ ನಿರಾಕರಿಸದರೇ, ಸಹಿ ಹಾಕುವುದನ್ನ ನಿರಾಕರಿಸಿದರೆ, ಐಡಿ ಕೊಡುವುದಕ್ಕೆ ನಿರಾಕರಿಸಿದರೇ ಈ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ, ಅಂತಹ ಮತದಾರನ ಮತ ಚಲಾವಣೆಯ ಹಕ್ಕನ್ನು ಅಧಿಕಾರಿ ನಿರಾಕರಿಸಬಹುದಾಗಿದೆ. 

ಇದನ್ನ ಸಹ ಓದಿ / ಇವಿಎಂ ಜೊತೆ ವಿವಿ ಪ್ಯಾಟ್ ಏತಕ್ಕಾಗಿ ಇರುತ್ತೆ ಗೊತ್ತಾ? ಮತಗಟ್ಟೆಯಲ್ಲಿ ಏನೇನೆಲ್ಲಾ ಇರುತ್ತೆ? ಮತದಾನದ ಇಂಟ್ರಸ್ಟಿಂಗ್ ಸಂಗತಿಗಳು!

ಗೌಪ್ಯತೆ ಕಾಪಾಡದಿದ್ದರೇ ವೋಟು ಖತಂ

ಇನ್ನೊಂದು ರೀತಿಯಲ್ಲಿ ಮತದಾರ ತಾನು ವೋಟು ಹಾಕುವಾಗ ಗೌಪ್ಯತೆಯನ್ನು ಕಾಪಾಡಬೇಕು. ಆತ ಮತಗಟ್ಟೆಗೆ ಬಂದು ಗೌಪ್ಯತೆಯನ್ನು ಕಾಪಾಡದೇ ಇಂತಹವರಿಗೆ ವೋಟು ಹಾಕುತ್ತೇನೆ ಎನ್ನಬಾರದು ಹಾಗೊಂದು ವೇಳೆ ಹೇಳಿದರೇ ಆತನಿಗೆ ಮತದಾನದ ಹಕ್ಕು ನೀಡದಿರುವ ಅಧಿಕಾರ ಮತಗಟ್ಟೆ ಅಧಿಕಾರಿಗಳಿಗೆ ಇರುತ್ತದೆ. ವೋಟು ಹಾಕಿದ ಮೇಲೆಯು ಮತದಾರನೊಬ್ಬ ಯಾರಿಗೆ ವೋಟು ಹಾಕಿದ್ದೇನೆ ಎಂದು ಆತ ಹೇಳುವಂತಿಲ್ಲ. ಹಾಗೆ ಹೇಳಿದರೆ, ಆತನನ್ನ ಪೊಲೀಸರ ವಶಕ್ಕೆ ಒಪ್ಪಿಸುವ ಅವಕಾಶಗಳಿರುತ್ತದೆ. 

ಮತದಾರನೇ ವೋಟು ನಿರಾಕರಿಸಬಹುದು. 

ಮತದಾರನೊಬ್ಬ ಮತಗಟ್ಟೆಗೆ ಬಂದು ಸಹಿ ಹಾಕಿ, ಬೆರಳಿಗೆ  ಇಂಕು ಹಚ್ಚಿದ ಮೇಲೆ ವೋಟು ಹಾಕುವುದನ್ನ ನಿರಾಕರಿಸಬಹುದು. ಆಗ ಮತಗಟ್ಟೆ ಅಧಿಕಾರಿಗಳು ಫಾರಂವೊಂದನ್ನ ನೀಡಿ, ಆತನಿಂದ ವೋಟು ಹಾಕಲು ನಿರಾಕರಿಸಿರುವ ಬಗ್ಗೆ ಬರೆಸಿಕೊಂಡು ಆತನನ್ನು ಕಳುಹಿಸಲಾಗುತ್ತದೆ. 

ಟೆಂಡರ್ಡ್​ ಮತದಾನ

ಮತದಾನ ಪ್ರಕ್ರಿಯೆಯಲ್ಲಿ ಒಬ್ಬನೇ ವ್ಯಕ್ತಿಯ ಗುರುತಿನಲ್ಲಿ ಇಬ್ಬರು ಬಂದಾಗ ಟೆಂಡರ್ಡ್​ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂದರೆ ಎ ಎಂಬ ವ್ಯಕ್ತಿಯು ಅದಾಗಲೇ ಬಂದು ಮತದಾನ ಮಾಡಿ ಹೋಗಿರುತ್ತಾರೆ.ಆನಂತರ ಮತಗಟ್ಟೆ ಮತ್ತೆ ಎ ಎಂಬ ವ್ಯಕ್ತಿಯು ತಾನು ಎ ಎಂಬ ಮತದಾರನೆಂದು ಬರುತ್ತಾನೆ. ಆಗ ಆತನಿಗೆ ಮತದಾನದ ಹಕ್ಕನ್ನು ಸಹ ನೀಡಲಾಗುತ್ತದೆ. ಆದರೆ ಆತನಿಗೆ ಬ್ಯಾಲೆಟ್ ಪೇಪರ್​ನಲ್ಲಿ ಮತ ಹಾಕಿಸಲಾಗುತ್ತದೆ, ಆನಂತರ ಇಬ್ಬರು ಎ ವ್ಯಕ್ತಿಗಳಲ್ಲಿ ನಿಜವಾದ ಎ ಯಾರು ಎಂಬುದನ್ನ ಪರಿಗಣಿಸುವ ಪ್ರಕ್ರಿಯೆ ನಡೆದು ಆತನ ಮತವನ್ನು ಸಿಂಧು ಮಾಡಲಾಗುತ್ತದೆ 

ಇದನ್ನ ಸಹ ಓದಿ / ಅಸಲಿ ಮತದಾನಕ್ಕೂ ಮೊದಲು ಅಣಕು ಮತದಾನ ನಡೆಯುತ್ತೆ! ಬೆಳಗ್ಗಿನ ಜಾವ 5.30 ಕ್ಕೆ ನಡೆಯುವ ಪ್ರಕ್ರಿಯೆ ಏನು?

ಟೆಸ್ಟೆಡ್ ಮತದಾನ

ವಿವಿ ಪ್ಯಾಟ್ ಬಂದ ಮೇಲೆ ಟೆಸ್ಟೆಡ್​ ಮತ ಎಂಬ ಪ್ರಕ್ರಿಯೆಯು ಸಹ ನಡೆಯುತ್ತಿದೆ. ಅಂದರೆ ನೀವು ಹಾಕಿದ ವೋಟು ಒಬ್ಬರಿಗಾಗಿದ್ದು, ವಿವಿ ಪ್ಯಾಟ್​ನಲ್ಲಿ ತೋರಿಸುತ್ತಿರುವ ಚಿತ್ರ ಬೇರೆಯವರದ್ದಾಗಿದ್ದರೆ, ಅದನ್ನ ಪ್ರಶ್ನಿಸಬಹುದಾಗಿದೆ. ಆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೆ ಪ್ರಶ್ನಿಸಿದವರನ್ನ ವಿಚಾರಿಸುತ್ತಾರೆ. ಅದರ ಮೇಲೆಯು ಆತ ನೂರಕ್ಕೆ ನೂರು ಖಾತರಿಯಾಗಿ ವಿವಿ ಪ್ಯಾಟ್​ನಲ್ಲಿ ತಾನು ಮತ ಹಾಕದವರ ಚಿತ್ರ ತೋರಿಸುತ್ತಿದೆ ಎಂದು ಹೇಳಿದರೆ ಆತನಿಗೆ ಮತ್ತೊಮ್ಮೆ ಮತ ಹಾಕಲು ಅವಕಾಶ ನೀಡಲಾಗುತ್ತದೆ. ಎಲ್ಲಾ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಆತನಿಗೆ ಮತವನ್ನ ಹಾಕಲು ಅವಕಾಶ ನೀಡಲಾಗುತ್ತದೆ. ಆಗ ಆತ ಹಾಕಿದ ಮತಕ್ಕೂ, ವಿವಿಪ್ಯಾಟ್​ನಲ್ಲಿ ತೋರಿಸುತ್ತಿರುವ ಚಿತ್ರಕ್ಕೂ ವತ್ಯಾಸ ಕಂಡು ಬಂದರೆ, ಆ ಬೂತ್​ನಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ. ಹಾಗೊಂದು ವೇಳೆ ಪ್ರಶ್ನಿಸಿದ ವ್ಯಕ್ತಿ ಸುಳ್ಳು ಹೇಳಿದ್ದರೇ, ಆತನ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. 

ಚಾಲೇಂಜಿಂಗ್ ವೋಟ್​

ಮತದಾನ ಪ್ರಕ್ರಿಯೆಯಲ್ಲಿ ಇನ್ನೊಂದು ಸಂದರ್ಭ ಎದುರಾಗುತ್ತದೆ. ಮತಗಟ್ಟೆಗೆ ಬರುವ ವ್ಯಕ್ತಿಯ ಎ ಆಗಿದ್ದು, ಆತನ ಎ ವ್ಯಕ್ತಿಯಲ್ಲ ಎಂದು ಚುನಾವಣಾ ಏಜೆಂಟ್ ಹೇಳುತ್ತಾರೆ. ಎ ಎನ್ನುವಾತ ನನಗೆ ಗೊತ್ತಿರುವವನು, ಅವನು ಇವನಲ್ಲ ಎಂದು ಏಜೆಂಟ್ ಹೇಳಿದರೆ, ಬಂದಿರುವ ವ್ಯಕ್ತಿ ನಾನೇ ಎ ಎನ್ನವ ಹೆಸರಿನವನು ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಗೊಂದಲ ಶುರುವಾಗುತ್ತದೆ. ಆ ಸಂದರ್ಭದಲ್ಲಿ ಚುನಾವಣಾ ಏಜೆಂಟ್ ಹಾಗೂ ಬಂದಂತಹ ವ್ಯಕ್ತಿಯು ತಾನು ಅದೇ ವ್ಯಕ್ತಿ ಎಂದು ಸಾಬೀತು ಮಾಡಲು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಎರಡು ರೂಪಾಯಿ ಡಿಪಾಸಿಟ್ ಇಟ್ಟು, ಫಾರಂವೊಂದನ್ನ ಭರ್ತಿ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು. ಹಾಗೊಂದು ವೇಳೆ ಮತಗಟ್ಟೆಗೆ ಬಂದ ವ್ಯಕ್ತಿಯು  ನೀಡಿದ ದಾಖಲೆ ಸುಳ್ಳಾದರೆ ಆತನನ್ನ ಪೊಲೀಸ್ ವಶಕ್ಕೆ ಒಪ್ಪಿಸಲಾಗುತ್ತದೆ. ವ್ಯತಿರಿಕ್ತವಾಗಿ ಎಜೆಂಟ್ ಸುಳ್ಳು ಹೇಳಿದ್ದರೆ ಆತನ ವಿರುದ್ಧ ಕ್ರಮ ಕೈಗೊಳ್ಳಬಹುದು.  

ಇದನ್ನ ಸಹ ಓದಿ / ಅಸಲಿ ಮತದಾನಕ್ಕೂ ಮೊದಲು ಅಣಕು ಮತದಾನ ನಡೆಯುತ್ತೆ! ಬೆಳಗ್ಗಿನ ಜಾವ 5.30 ಕ್ಕೆ ನಡೆಯುವ ಪ್ರಕ್ರಿಯೆ ಏನು?

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media