ಶಿವಮೊಗ್ಗ ಗ್ಯಾಂಗ್‌ ವಾರ್‌ |3 ಕೊಲೆ, 2 ಸ್ಟೇಷನ್‌ 3 FIR | ಏನು ಹೇಳುತ್ತೆ ಪೊಲೀಸ್‌ ಫೈಲ್‌ | ಮನೆಗೆ ನುಗ್ಗಿದ್ರಾ? ಗಲ್ಲಿಲಿ ಓಡಾಡಿಸಿದ್ರಾ?

Shimoga gang war 2 station 3 FIR | What does the police file say?

ಶಿವಮೊಗ್ಗ ಗ್ಯಾಂಗ್‌ ವಾರ್‌ |3 ಕೊಲೆ,  2 ಸ್ಟೇಷನ್‌ 3 FIR | ಏನು ಹೇಳುತ್ತೆ  ಪೊಲೀಸ್‌ ಫೈಲ್‌ | ಮನೆಗೆ ನುಗ್ಗಿದ್ರಾ? ಗಲ್ಲಿಲಿ ಓಡಾಡಿಸಿದ್ರಾ?
Shimoga Gang War

SHIVAMOGGA | MALENADUTODAY NEWS | May 12, 2024  

ಶಿವಮೊಗ್ಗ ಗ್ಯಾಂಗ್‌ ವಾರ್‌ ಸಂಬಂಧ ಶಿವಮೊಗ್ಗ ಪೊಲೀಸ್‌ ಸ್ಟೇಷನ್‌ಗಳಲ್ಲಿ ಒಟ್ಟು ಮೂರು ಎಫ್‌ಐಆರ್‌ ದಾಖಲಾಗಿದೆ. ಮೊದಲ ಎಫ್‌ಐಆರ್‌ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ದಾಖಲಾಗಿದ್ದು ಉಳಿದ ಎರಡು ಎಫ್‌ಐಆರ್‌ಗಳು ಕೋಟೆ ಪೊಲೀಸ್‌ ಸ್ಟೇಷನ್‌ಗಳಲ್ಲಿ ದಾಖಲಾಗಿದೆ. 

ತುಂಗಾನಗರ ಪೊಲೀಸ್‌ ಸ್ಟೇಷನ್‌ 

ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ಯಾಸೀನ್‌ ಖುರೇಶಿ ಹಾಗೂ ಆತನ 10-12 ಸಹಚರು ಮಾರಕಾಸ್ತ್ರಗಳೊಂದಿಗೆ ಆದಿಲ್‌ನ ತಂದೆ ಮನೆಗೆ ನುಗ್ಗಿ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ IPC 1860 (U/s-143,144,147,148,448,504,307,506,149); ARMS ACT, 1959 (U/s-25)  ಕೇಸ್‌ ದಾಖಲಾಗಿದೆ. ಈ ಸಂಬಂಧ ಕಳೆದ 10 ನೇ ತಾರೀಖು ದಾಖಲಾದ ದೂರಿನನ್ವಯ ಕೇಸ್‌ ದಾಖಲಾಗಿದೆ. ಯಾಸೀನ್‌ ಖುರೇಶಿ ಹಾಗೂ ಆತನ ಗ್ಯಾಂಗ್‌ ಆಟೋ ಹಾಗೂ ಬೈಕ್‌ಗಳಲ್ಲಿ ಬಂದು ಆದಿಲ್‌ನ ತಂದೆ ಮನೆಗೆ ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಲ್ಲಿದ್ದ  ವ್ಯಕ್ತಿಯೊಬ್ಬರಿಗೆ ಮಚ್ಚು ಬೀಸಿದ್ದರು ಎಂದು ಆರೋಪಿಸಲಾಗಿದೆ. 

ಕೋಟೆ ಪೊಲೀಸ್‌ ಸ್ಟೇಷನ್‌ 

ದೂರು ಒಂದು : ಇನ್ನೂ ಕೋಟೆ ಪೊಲೀಸ್‌ ಸ್ಟೇಷನ್‌ನಲ್ಲಿ ದಾಖಲಾದ ಎಫ್‌ಐಆರ್‌ ಪ್ರಕಾರ,  IPC 1860 (U/s-143,144,147,148,302,149) ಅಡಿಯಲ್ಲಿ ಯಾಸೀನ್‌ ಖುರೇಶಿ ಹಾಗೂ ಆತನ ಸಹಚರರ ವಿರುದ್ಧ ಕೇಸ್‌ ದಾಖಲಾಗಿದೆ. ಈ ಪ್ರಕರಣ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ದಾಖಲಾದ ಕೇಸ್‌ಗೆ ಪೂರಕವಾಗಿದೆ. 

ಯಾಸೀನ್‌ ಖುರೇಶಿ ಎಂಟನೇ ತಾರೀಖು ಮಧ್ಯಾಹ್ನ ಆದಿಲ್‌ನ ಮನೆಗೆ ಹೋಗಿ ಗಲಾಟೆ ಮಾಡಿದ್ದ, ಮಾರಕಾಸ್ತ್ರ ಹಿಡಿದು ತನ್ನ ಸಹಚರರ ಜೊತೆಗೆ ಬೆದರಿಸಿದ್ದ. ಈ ಸಂಬಂಧ ಆದಿಲ್‌ ಹಾಗೂ ಆತನ ಟೀಂ ಯಾಸೀನ್‌ ಖುರೇಶಿಯನ್ನ ಹುಡುಕಿಕೊಂಡು ಹೊರಟಿತ್ತು. ಯಾಸೀನ್‌ ಖುರೇಶಿ ಲಷ್ಕರ್‌ ಮೊಹಲ್ಲಾದ ಜನತಾ ಮಟನ್‌ ಸ್ಟಾಲ್‌ ಬಳಿ ಇದ್ದಾಗ ಆತನೊಂದಿಗೆ ಹಳೆಯ ಕಿರಿಕ್‌ ಬಗ್ಗೆ ಆದಿಲ್‌ ಟೀಂ ಮಾತುಕತೆ ಹೋಗಿದೆ. ಆ ಸಂದರ್ಭದಲ್ಲಿ  ಶೇಬು ಹಾಗೂ ಗೌಸ್‌ ಮೇಲೆ ಯಾಸೀನ್‌ ಖುರೇಶಿಯ ಸಹಚರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಚಪ್ಪಡಿ ಕಲ್ಲುಗಳನ್ನು ಎತ್ತಿಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 



ದೂರು ನಂಬರ್‌ 2

ಇನ್ನೂ ಕೋಟೆ ಪೊಲೀಸ್‌ ಸ್ಟೇಷನ್‌ ನಲ್ಲಿ IPC 1860 (U/s-143,144,147,148,307,149) ಅಡಿಯಲ್ಲಿ ದಾಖಲಾದ ಎಫ್‌ಐಆರ್‌ ಯಾಸೀನ್‌ ಖುರೇಶಿಯ ಹತ್ಯೆಯ ಸಂಬಂಧ ದಾಖಲಾಗಿದೆ. ಈ ಪ್ರಕರಣದಲ್ಲಿ ಬೇರೆಯದ್ದೆ ಆರೋಪ ಮಾಡಲಾಗಿದೆ. ಯಾಸಿನ್‌ ಖುರೇಶಿಯು ಅವರ ಸಂಬಂಧಿಕನೊಬ್ಬನನ್ನು ಭರ್ಮಪ್ಪ ನಗರದಿಂದ ಲಷ್ಕರ್‌ ಮೊಹಲ್ಲಾಕ್ಕೆ ಕರೆದುಕೊಂಡು ಬರಲು ತೆರಳಿದ್ದಾಗ, ಆದೀಲ್‌ ಮತ್ತವನ ಟೀಂ ಆತನ ಮೇಲೆ ಅಟ್ಯಾಕ್‌ ಮಾಡಿತ್ತು ಎಂಧು ದೂರಲಾಗಿದೆ.  ಐದನೇ ತಾರೀಖು ಸ್ಟ್ರೀಟ್‌ ಲೈಟ್‌ಗಳನ್ನ ಆಫ್‌ ಮಾಡಿ ಅಲ್ಲಿ ಯಾಸೀನ್‌ನನ್ನ ಓಡಾಡಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು.ಈ ವಿವಾದವನ್ನು ಇತ್ಯರ್ಥ ಮಾಡಲು ಯತ್ನಿಸಲಾಗಿತ್ತು. ಅದೇ ಸಂದರ್ಭದಲ್ಲಿ ಯಾಸೀನ್‌  ಖುರೇಶಿ ಮೇಲೆ ಆದಿಲ್‌ ಟೀಂ ಲಷ್ಕರ್‌ ಮೊಹಲ್ಲಾದಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಒಟ್ಟು 40-50 ಮಂದಿ ಬಂದು ಯಾಸೀನ್‌ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.