ಆಗುಂಬೆ | ಬಕೆಟ್‌ ಹಿಡಿದು ಬುಸುಗುಟ್ಟಿದ ಕಾಳಿಂಗ ಸರ್ಪ ಸೆರೆ |

King Cobra captured by Agumbe Rainforest Research Centre, Thirthahalli Taluk, Agumbe News, King Cobra Report,

ಆಗುಂಬೆ |  ಬಕೆಟ್‌ ಹಿಡಿದು ಬುಸುಗುಟ್ಟಿದ ಕಾಳಿಂಗ ಸರ್ಪ ಸೆರೆ |
King Cobra, Agumbe Rainforest Research Centre, Thirthahalli Taluk, Agumbe News, King Cobra Report,

SHIVAMOGGA | MALENADUTODAY NEWS | May 12, 2024  

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಮನೆಯೊಂದರಲ್ಲಿ ಪತ್ತೆಯಾಗಿದ್ದ ಕಾಳಿಂಗ ಸರ್ಪವನ್ನು ಆಗುಂಬೆ ರೈನ್‌ ಫಾರೆಸ್ಟ್‌ ರಿಸರ್ಚ್‌ ಸ್ಟೇಷನ್‌ ಟೀಂ ರೆಸ್ಕ್ಯೂ ಮಾಡಿದೆ. ಇಲ್ಲಿನ ನಿವಾಸಿಯೊಬ್ಬರ ಮನೆಯ ಪಾಯಿಖಾನೆಯನ್ನ ಸೇರಿಕೊಂಡಿದ್ದ ಕಾಳಿಂಗ ಅಲ್ಲಿದ್ದ ಬಕೆಟ್‌ವೊಂದನ್ನ ಸುತ್ತಿಕೊಂಡು ಬುಸುಗುಟ್ಟುತ್ತಿತ್ತು. 



ಇದನ್ನ ಕಂಡ ಮನೆಯವರು ಗಾಬರಿಯಾಗಿ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಬಳಿಕ ವಿಷಯ ಫಾರೆಸ್ಟ್‌ ಇಲಾಖೆಯವರಿಗೆ ಹಾಗೂ ಆಗುಂಬೆ ಮಳೆಕಾಡು ಅಧ್ಯಯನ ಸಂಸ್ಥೆಯ ಸಿಬ್ಬಂದಿಗೆ ಗೊತ್ತಾಗಿದೆ. ಅವರು ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ನಡುವೆ ಕಾಳಿಂಗ ಸರ್ಪದ ಕುರಿತಾಗಿ ಅಲ್ಲಿ ನೆರೆದಿದ್ದವರಿಗೆ ಮಾಹಿತಿ ನೀಡಿ ಜಾಗೃತಿಯನ್ನೂ ಸಹ ಮೂಡಿಸಿದ್ದಾರೆ.